Advertisement

ಹಿಂಡು ಹಿಂಡಾಗಿ ಬೆಳ್ಳಕ್ಕಿಗಳ ದಂಡು!

11:27 AM Jun 02, 2022 | Team Udayavani |

ಶಿರಸಿ: ತಾಲೂಕಿನ ಸುಧಾಪುರ ಕ್ಷೇತ್ರದ, ಸೋಂದಾ ಗ್ರಾಮದಲ್ಲಿರುವ ಮುಂಡಿಗೆ ಕೆರೆ ಪಕ್ಷಿ ಧಾಮಕ್ಕೆ ಬೆಳ್ಳಕ್ಕಿಗಳು ಹಿಂಡು ಹಿಂಡಾಗಿ ಬಂದಿಳಿಯುತ್ತಿವೆ. ಇದು ಮುಂಗಾರಿನ ಆಗಮನಕ್ಕೆ ಮುನ್ಸೂಚನೆಯಾಗಿದೆ ಎಂದು ಸೋಂದಾ ಜಾಗೃತ ವೇದಿಕೆಯ ಪ್ರಮುಖ ರತ್ನಾಕರ್‌ ಹೆಗಡೆ ಬಾಡಲಕೊಪ್ಪ ತಿಳಿಸಿದ್ದಾರೆ.

Advertisement

ವೇದಿಕೆಯು 1995 ರಿಂದ ಶ್ರೀಮದ್‌ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳ ಮಾರ್ಗದರ್ಶನದಲ್ಲಿ ಮುಂಡಿಗೆಕೆರೆ ಪಕ್ಷಿಧಾಮದ ಆಗು ಹೋಗುಗಳನ್ನು ತೀರಾ ಸನಿಹದಿಂದ, ದಾಖಲಿಸುತ್ತಾ ಬಂದಿದೆ. ಇದುವರೆಗಿನ ದಾಖಲೆ ಪ್ರಕಾರ ಬೆಳ್ಳಕ್ಕಿಗಳು ಮುಂಡಿಗೆ ಕೆರೆಗೆ ಇಳಿದು ಒಂದು ದಿನ ವಸತಿ ಮಾಡಿದರೆ ಅಲ್ಲಿಂದ ಐದಾರು ದಿನಗಳಲ್ಲಿ ಮಾನ್ಸೂನ್‌ ಮಳೆ ಪ್ರಾರಂಭವಾಗಿದ್ದು ದಾಖಲೆ ಆಗಿದೆ ಎಂಬುದು ವಿಶೇಷವಾಗಿದೆ.

ಬೆಳ್ಳಕ್ಕಿಗಳು ವರ್ಷ ಮೇ ತಿಂಗಳ 13 ರಿಂದಾ ಕೆರೆ ಸಮೀಕ್ಷೆ ಮಾಡುತ್ತಾ ಬಂದಿವೆ. ದಿನಾಲೂ ಮುಂಜಾನೆ ಹಾಗೂ ಸಂಜೆ ಕೆರೆಯ ಮೇಲ್ಗಡೆ ಹಾರಾಟ ಮಾಡಿ ಕೆರೆಯಲ್ಲಿಯ ಸ್ಥಿತಿಗತಿಯನ್ನು ಸೂಕ್ಷ್ಮವಾಗಿ ಅವಲೋಕಿಸುತ್ತ ಬಂದು, ಮೇ 31 ರಂದು ಸಂಜೆ ವೇಳೆಗೆ ಸುಮಾರು 100 ಕ್ಕೂ ಅಧಿಕ ಬೆಳ್ಳಕ್ಕಿಗಳು ಕೆರೆಯಲ್ಲಿ ಇಳಿದಿರುವುದು ಕಂಡು ಬಂದಿದೆ. ಆದರೆ ಸಂಜೆ 7:20ರ ವೇಳೆಗೆ ಕೆಲವೊಂದು ಹಾರಿ ಹೋಗಿದ್ದು, ಸುಮಾರು 60 ರಿಂದ 70 ಪಕ್ಷಿಗಳು ಕೆರೆಯಲ್ಲಿ ವಸತಿ ಮಾಡಿವೆ. ಇದು ಈ ವರ್ಷದ ಮುಂಗಾರು ಮಳೆ ಆಗಮನದ ಮುನ್ಸೂಚನೆ ಆಗಿದೆ ಎಂದು ವಿವರಿಸಿದ್ದಾರೆ.

1980 ರ ವೇಳೆಗೆ ಕರ್ನಾಟಕದ ಖ್ಯಾತ ಪಕ್ಷಿ ತಜ್ಞ ಪಿ.ಡಿ. ಸುದರ್ಶನ್‌ ಮುಂಡಿಗೆ ಕೆರೆಗೆ ಬೆಳ್ಳಕ್ಕಿಗಳು ಮಳೆಗಾಲದಲ್ಲಿ ಆಗಮಿಸಿ, ಮುಂಡಿಗೆ ಗಿಡಗಳ ಮೇಲೆ ಗೂಡು ಕಟ್ಟುತ್ತವೆ ಎಂಬುದನ್ನು ಪ್ರಪ್ರಥಮವಾಗಿ ಹೊರಜಗತ್ತಿಗೆ ಪರಿಚಯಿಸಿದರು. ಉತ್ತರ ಕನ್ನಡ ಜಿಲ್ಲೆಯಲ್ಲಿ ಮುಂಡಿಗೆ ಗಿಡಗಳ ಮೇಲೆ ಪಕ್ಷಿಗಳ ವಂಶಾಭಿವೃದ್ಧಿ ತಾಣ ಇದೊಂದೇ ಆಗಿದೆ ಎಂಬುದು ಉಲ್ಲೇಖನೀಯವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next