Advertisement

ಗ್ರಾಹಕ ಕಾಂಗ್ರೆಸ್ಸನ್ನೇ ಸೋಲಿಸಲು ಕೆಲಸ ಮಾಡಿದ್ದ ಅನಾಲಿಟಿಕಾ!

05:50 AM Mar 28, 2018 | Karthik A |

ವಾಷಿಂಗ್ಟನ್‌: ಅಮೆರಿಕ ಚುನಾವಣೆಯಲ್ಲಿ ಚುನಾವಣಾ ವಿಶ್ಲೇಷಣೆ ಸಂಸ್ಥೆ ಅವ್ಯವಹಾರ ನಡೆಸಿದೆ ಎಂಬ ಸ್ಫೋಟಕ ಮಾಹಿತಿಯನ್ನು ಬಹಿರಂಗಗೊಳಿಸಿದ್ದ, ಕೇಂಬ್ರಿಜ್‌ ಅನಾಲಿಟಿಕಾ ಮಾಜಿ ಉದ್ಯೋಗಿ ಕ್ರಿಸ್ಟೋಫ‌ರ್‌ ವೈಲಿ ಇದೀಗ ಭಾರತದಲ್ಲಿ ಕಂಪನಿ ವ್ಯಾಪಕವಾಗಿ ಕೆಲಸ ಮಾಡಿದೆ ಎಂದಿದ್ದಾರೆ. ಅಲ್ಲದೆ ಮಾಹಿತಿ ತಂತ್ರಜ್ಞಾನ ಪರಿಣಿತ ಪಾಲ್‌ ಒಲಿವರ್‌ ದೆಹಾಯೆ ಕೂಡ ಇಂಗ್ಲೆಂಡ್‌ನ‌ ಸಂಸತ್‌ ಸಮಿತಿಗೆ ಹೇಳಿಕೆ ನೀಡಿದ್ದು, ಕಾಂಗ್ರೆಸ್‌ ಸೋಲಿಸಲೆಂದೇ ಭಾರತದ ಕಂಪನಿಗೆ ಭಾರತೀಯ ಮೂಲದ ಅಮೆರಿಕದ ವ್ಯಕ್ತಿ ಹಣ ನೀಡಿದ್ದರು. ಹೀಗಾಗಿ ಕಾಂಗ್ರೆಸ್‌ಗಾಗಿ ಕೆಲಸ ಮಾಡುತ್ತಲೇ ಸೋಲುವಂತೆ ಮಾಡಿತ್ತು ಎಂದು ಹೇಳಿದ್ದಾರೆ. ಈ ಮಧ್ಯೆ ಕೇಂಬ್ರಿಜ್‌ ಅನಾಲಿಟಿಕಾಗೆ ಕಾಂಗ್ರೆಸ್‌ ಪಕ್ಷವು ಕ್ಲೈಂಟ್‌ ಆಗಿತ್ತು. ಯಾವುದೇ ರಾಷ್ಟ್ರೀಯ ಮಟ್ಟದ ಪ್ರಾಜೆಕ್ಟ್ ಗಳನ್ನು ಮಾಡಿದ್ದು ನನಗೆ ನೆನಪಿಲ್ಲ. ಆದರೆ ರಾಷ್ಟ್ರೀಯ ಹಾಗೂ ಪ್ರಾದೇಶಿಕ ಚುನಾವಣೆಗಳಲ್ಲಿ ಸಂಸ್ಥೆ ಕೆಲಸ ಮಾಡಿದೆ. ಆದರೆ ಭಾರತದಲ್ಲಿ ಸಂಸ್ಥೆಯ ವಹಿವಾಟುಗಳ ಬಗ್ಗೆ ಸ್ಪಷ್ಟವಾಗಿ ನನಗೆ ತಿಳಿದಿಲ್ಲ ಎಂದು ವೈಲಿ ಹೇಳಿದ್ದಾರೆ.

Advertisement

ಆದರೆ ಅವರ ಜತೆಗೇ ಸಮಿತಿಗೆ ಹೇಳಿಕೆ ನೀಡಿದ ಪಾಲ್‌, ಕೇಂಬ್ರಿಜ್‌ ಅನಾಲಿಟಿಕಾದ ಡಾನ್‌ ಮುರೇಸನ್‌ ಎಂಬ ಉದ್ಯೋಗಿ ಭಾರತದಲ್ಲಿ 2014ರ ಚುನಾವಣೆ ಸಮಯದಲ್ಲಿ ಕೆಲಸ ಮಾಡಿದ್ದರು. ಅವರು ಕಾಂಗ್ರೆಸ್‌ಗೆ ಕೆಲಸ ಮಾಡುತ್ತಿದ್ದರು. ಆದರೆ ಕಾಂಗ್ರೆಸ್‌ ಸೋಲಿಸಲೆಂದೇ ಭಾರತದ ಕೋಟ್ಯಧಿಪತಿಯೊಬ್ಬರು ಹಣ ನೀಡಿದ್ದರು. ಹೀಗಾಗಿ ಅವರು ಕಾಂಗ್ರೆಸ್‌ ಒಳಗೆ ಇದ್ದುಕೊಂಡೇ ಕಾಂಗ್ರೆಸ್‌ ಸೋಲಿಸಿದರು ಎಂದು ಹೇಳಿದ್ದಾರೆ. ನಂತರ ಮುರೇಸನ್‌ ಕೀನ್ಯಾದಲ್ಲಿ ಸಾವನ್ನಪ್ಪಿದ್ದು, ಕೀನ್ಯಾದಲ್ಲಿ ಯಾವುದೋ ಡೀಲ್‌ ವಿಫ‌ಲವಾಗಿದ್ದರಿಂದ ಅವರಿಗೆ ವಿಷಪ್ರಾಶನ ಮಾಡಲಾಗಿದೆ ಎಂಬ ಊಹಾಪೋಹಗಳಿವೆ ಎಂದು ಪಾಲ್‌ ಹೇಳಿದ್ದಾರೆ.

ಸಿಇಒಗಳಿಗೆ ಸಮನ್ಸ್‌: ಈ ಮಧ್ಯೆ, ಪ್ರಕರಣಕ್ಕೆ ಸಂಬಂಧಿಸಿದಂತೆ ಗೂಗಲ್‌, ಟ್ವಿಟರ್‌ ಹಾಗೂ ಇತರ ಸಿಇಒಗಳಿಗೆ ಸಮನ್ಸ್‌ ನೀಡಿದ್ದು, ಫೇಸ್‌ಬುಕ್‌ ಮುಖ್ಯಸ್ಥ ಮಾರ್ಕ್‌ ಜುಕರ್‌ಬರ್ಗ್‌ ಇಂಗ್ಲೆಂಡ್‌ನ‌ ಸಂಸತ್‌ ಸಮಿತಿಯ ಎದುರು ಹಾಜರಾಗಲು ನಿರಾಕರಿಸಿದ್ದಾರೆ. ಬದಲಿಗೆ ಹಿರಿಯ ಅಧಿಕಾರಿಯನ್ನು ಕಳುಹಿಸಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next