Advertisement

ಬಾಟಲಿಯಲ್ಲಿ ಸುಳಿ

11:21 AM Oct 26, 2017 | Team Udayavani |

ನೀವು ಎಂದಾದರೂ ನದಿಯಲ್ಲಿನ ಸುಳಿಯನ್ನು ನೋಡಿದ್ದೀರಾ? ಇಲ್ಲವೆಂದಾದರೆ ಮನೆಯಲ್ಲೇ ಪ್ರಾತ್ಯಕ್ಷಿಕೆ ಮಾಡಿ ನೋಡಬಹುದು. ಸುಂಟರಗಾಳಿ, ಸುಳಿಯನ್ನು ಮನೆಯಲ್ಲೇ ಪ್ರಯೋಗ ಮಾಡುವುದಾ ಎಂದು ಭಯ ಪಡದಿರಿ. ಈ ಪ್ರಯೋಗದಲ್ಲಿ ಯಾವುದೇ ಅಪಾಯವಿಲ್ಲ.

Advertisement

ಬೇಕಾದ ವಸ್ತುಗಳು: ಎರಡು ದೊಡ್ಡ ಬಾಟಲಿಗಳು(ಪೆಪ್ಸಿ ಅಥವಾ ಕೋಕಾ ಕೋಲಾ 2 ಲೀಟರ್‌), ಚಿಕ್ಕ ಕೊಳವೆ, ಪ್ಲಾಸ್ಟರ್‌, ಅಂಟು, ಕತ್ತರಿ

ಮಾಡುವ ವಿಧಾನ: ಮೊದಲು ಎರಡು ಬಾಟಲಿಗಳ ಮುಚ್ಚಳಗಳನ್ನು ತೆಗೆಯಿರಿ. ಒಂದು ಬಾಟಲಿಯಲ್ಲಿ ಬಣ್ಣದ ನೀರನ್ನು ತುಂಬಿ. ಆನಂತರ ಬಾಟಲಿಯ ಬಾಯಿಯನ್ನು ಚಿಕ್ಕ ಕೊಳವೆಯೊಳಗೆ ತೂರಿಸಿ. ಈಗ ಇನ್ನೊಂದು ಖಾಲಿ ಬಾಟಲಿ ತೆಗೆದುಕೊಂಡು, ಅದರ ಬಾಯಿಯನ್ನು ಚಿಕ್ಕ ಕೊಳವೆಯ ಇನ್ನೊಂದು ತುದಿಯ ಒಳಕ್ಕೆ ತೂರಿಸಿರಿ. ನಂತರ ಪ್ಲಾಸ್ಟರ್‌ನಿಂದ ಗಟ್ಟಿಯಾಗಿ ಸುತ್ತಿ, ನೀರು ಸೋರದಂತೆ ಬಂದ್‌ ಮಾಡಿರಿ. ಈಗ ಬಣ್ಣದ ನೀರಿರುವ ಬಾಟಲಿಯನ್ನು ಅಡಿ ಮೇಲು ಮಾಡಿ. ಯಾವುದೇ ಚಲನೆ ಕಂಡು ಬರುವುದಿಲ್ಲ. ಈಗ ಮೇಲಿರುವ ಬಣ್ಣದ ಬಾಟಲಿಯನ್ನು ಸುರುಳಿಯಾಕಾರದಲ್ಲಿ ಸುತ್ತು ಹಾಕಿ, ಹಾಗೇ ಟೇಬಲ್‌ ಮೇಲೆ ಇಟ್ಟುಬಿಡಿ.. ಏನಾಶ್ಚರ್ಯ! ಬಣ್ಣದ ನೀರು ಸುರುಳಿ ಸುತ್ತುತ್ತಾ ಸುಳಿಯನ್ನು ಸೃ,ಷ್ಟಿಸಿಕೊಂಡು ಕೆಳಗಿನ ಖಾಲಿ ಬಾಟಲಿಯೊಳಕ್ಕೆ ಬೀಳುತ್ತಿದೆ.

ಇದಕ್ಕೆ ಕಾರಣ:
ಕೆಲವು ನೀರಿನ ಫಿಲ್ಟರ್‌ಗಳಲ್ಲಿ, ನೀರಿರುವ ದೊಡ್ಡ ಕ್ಯಾನ್‌ಅನ್ನು ಮಕಾಡೆ ಮಲಗಿಸಿರುವುದನ್ನು ನೀವು ನೋಡಿರಬಹುದು. ಕೆಳಗಿನ ಪುಟ್ಟ ಕ್ಯಾನ್‌ನಲ್ಲಿ ನೀರು ಖಾಲಿಯಾಗುತ್ತಿದ್ದಂತೆ ನೀರಿನ ಗುಳ್ಳೆಗಳು ಮೇಲಿನ ದೊಡ್ಡ ಕ್ಯಾನ್‌ ಒಳಕ್ಕೆ ಹೋಗುತ್ತಲೆ ನೀರು ಕಳಕ್ಕೆ ಹರಿಯುವುದು. ಇಲ್ಲೂ ಅದೇ ರೀತಿ ಕೆಳಗಿನ ಬಾಟಲಿಯಲ್ಲಿ ಗಾಲಿ ಇರುತ್ತದೆ. ಮೇಲಿನ ಬಾಟಲಿಯಲ್ಲಿ ನೀರು. ಈಗ ನೀರು ಮೇಲಿನಿಂದ ಕೆಳಕ್ಕೆ ಇಳಿಯಬೇಕೆಂದರೆ ಗಾಳಿ ಮೇಲಿನ ಬಾಟಲಿಯೊಳಕ್ಕೆ ಹೋಗಬೇಕು. ನೀವು ಮೇಲಿನ ಬಾಟಲಿಯನ್ನು ಸುತ್ತು ಹಾಕುತ್ತಾ ಕಲಕಿದಾಗ ಸುಳಿ ಸೃಷ್ಟಿಯಾಗಿ ಗಾಳಿ ಆ ಸುಳಿಯ ಮಧ್ಯದಿಂದ ಮೇಲಕ್ಕೆ ಪಾಸ್‌ ಆಗುತ್ತದೆ. ಹೀಗಾಗಿ ಪೂರ್ತಿ ನೀರು ಕೆಳಕ್ಕೆ ಇಳಿಯುವವರೆರೆ ಸುಳಿ ಸುತ್ತುತ್ತಲೇ ಇರುತ್ತದೆ.

ಹವನ

Advertisement
Advertisement

Udayavani is now on Telegram. Click here to join our channel and stay updated with the latest news.

Next