Advertisement

ಜೆಡಿಎಸ್‌ ಶಾಸಕರಿಗೂ ವಿಪ್‌ ಜಾರಿ

01:38 AM Jul 12, 2019 | Team Udayavani |

ಬೆಂಗಳೂರು: ವಿಧಾನಮಂಡಲ ಅಧಿವೇಶನ ಹಿನ್ನೆಲೆಯಲ್ಲಿ ಜೆಡಿಎಸ್‌ ಪಕ್ಷದಿಂದ ಎಲ್ಲ ಶಾಸಕರಿಗೂ ವಿಪ್‌ ಜಾರಿ ಮಾಡಲಾಗಿದೆ.

Advertisement

ಜು.12 ರಿಂದ 26 ರವರೆಗೆ ನಡೆಯಲಿರುವ ಅಧಿವೇಶನದಲ್ಲಿ ಕಡ್ಡಾಯವಾಗಿ ಹಾಜರಿದ್ದು, ಮಂಡನೆಯಾಗುವ ವಿತ್ತೀಯ ವಿಧೇಯಕಗಳು,ಶಾಸನಗಳು ಹಾಗೂ ಇತರ ಕಾರ್ಯಕಲಾಪಗಳಲ್ಲಿ ಪಾಲ್ಗೊಂಡು ಸರ್ಕಾರದ ಮತ ಕಡ್ಡಾಯವಾಗಿ ಮತ ಚಲಾಯಿಸಬೇಕು ಎಂದು ವಿಪ್‌ನಲ್ಲಿ ಸೂಚಿಸಲಾಗಿದೆ.

ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಮೂವರೂ ಸೇರಿ 37 ಶಾಸಕರಿಗೂ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ವಿಪ್‌ ಜಾರಿ ಮಾಡಿದ್ದಾರೆ. ಈ ಮಧ್ಯೆ, ಸಮ್ಮಿಶ್ರ ಸರ್ಕಾರಕ್ಕೆ ಸೆಡ್ಡು ಹೊಡೆದು ರಾಜೀನಾಮೆ ನೀಡಿರುವ ಮೂವರು ಶಾಸಕರನ್ನು ಅನರ್ಹಗೊಳಿಸಲು ಜೆಡಿಎಸ್‌ ಸಹ ಸ್ಪೀಕರ್‌ ರಮೇಶ್‌ಕುಮಾರ್‌ ಅವರಿಗೆ ಮನವಿ  ಮಾಡಿದೆ.

ಪಕ್ಷದ ವಕ್ತಾರ ರಮೇಶ್‌ಬಾಬು ಮಾತನಾಡಿ, ಜೆಡಿಎಸ್‌ ವಕೀಲರ ಘಟಕದ ಎ.ಪಿ.ರಂಗನಾಥ್‌ ಅವರ ತಂಡ ಗುರುವಾರ ವಿಧಾನಸೌಧದಲ್ಲಿ ಸ್ಪೀಕರ್‌ ರಮೇಶ್‌ಕುಮಾರ್‌ ಅವರನ್ನು ಭೇಟಿ ಮಾಡಿ, ಮೂವರು ಶಾಸಕರು ಪಕ್ಷ ವಿರೋಧಿ
ಚಟುವಟಿಕೆಯಲ್ಲಿ ತೊಡಗಿದ್ದಾರೆ. ಜುಲೈ 7ರಂದು ನಡೆದ ಜೆಡಿಎಲ್‌ಪಿ ಸಭೆಗೆ ಗೈರು ಹಾಜರಾಗಿದ್ದಾರೆ. ಹೀಗಾಗಿ, ಸಂವಿಧಾನದ 10 ಷೆಡ್ನೂಲ್‌ 2 (1) ಸೆಕ್ಷನ್‌ ಅಡಿ ಅವರನ್ನು
ವಿಧಾನಸಭೆ ಸದಸ್ಯತ್ವದಿಂದ ಆನರ್ಹಗೊಳಿಸಬೇಕು ಎಂದು ಅರ್ಜಿಯಲ್ಲಿ ಕೋರಿದ್ದಾರೆ.

ಸ್ಪೀಕರ್‌ಗೆ ಮನವಿ ಸಲ್ಲಿಸಲು ಬಂದ ರಮೇಶ್‌ ಬಾಬು ಹಾಗೂ ಎ.ಪಿ.ರಂಗನಾಥ್‌ ಅವರನ್ನು ಮೊದಲಿಗೆ ವಿಧಾನಸೌಧ ಪ್ರವೇಶಕ್ಕೆ ಪೊಲೀಸರು ಅವಕಾಶ ಕೊಡದೆ ತಡೆದರು. ನಂತರ ಸ್ಪೀಕರ್‌ಗೆ ಮನವಿ ನೀಡಲು ಬಂದಿರುವ ಬಗ್ಗೆ ಮನವರಿಕೆ
ಮಾಡಿಕೊಟ್ಟ ಮೇಲೆ ಒಳಗೆ ಬಿಡಲಾಯಿತು. ಆದರೆ, ನಿಯಮಾವಳಿ ಪ್ರಕಾರ ಪಕ್ಷದ ಶಾಸಕಾಂಗ ಪಕ್ಷದ ನಾಯಕರು ಅಥವಾ ರಾಜ್ಯಾಧ್ಯಕ್ಷರು, ಶಾಸಕರು ಅನರ್ಹತೆ ಕೋರಿ
ದೂರು ನೀಡಬೇಕಿದ್ದು, ಬದಲಿ ದೂರು ಸಲ್ಲಿಸಲು ಸೂಚಿಸಲಾಗಿದೆ ಎಂದು ಹೇಳಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next