Advertisement

ಕಳಪೆ ರಸ್ತೆ ಬಗ್ಗೆ ಕ್ಯಾಮರಾ ಮುಂದೆ ವಿವರಿಸುವಾಗಲೇ ಆಟೋ ಪಲ್ಟಿ!: ವಿಡಿಯೋ ವೈರಲ್‌

02:52 PM Sep 15, 2022 | Team Udayavani |

 ಲಖನೌ: ರಸ್ತೆ ಅವ್ಯವಸ್ಥೆ ಕುರಿತು ವ್ಯಕ್ತಿಯೊಬ್ಬರು ಕ್ಯಾಮರಾ ಮುಂದೆ ಮಾತನಾಡುತ್ತಿರುವಾಗ ಅವರ ಹಿಂಬದಿಯಲ್ಲಿನ ರಸ್ತೆಯಲ್ಲಿ ಚಲಿಸುತ್ತಿದ್ದ ಆಟೋ ಪಲ್ಟಿಯಾದ ಘಟನೆ ಉತ್ತರ ಪ್ರದೇಶದ ಬಲಿಯಾ ಜಿಲ್ಲೆಯಲ್ಲಿ ನಡೆದಿದೆ.

Advertisement

ಇದನ್ನೂ ಓದಿ:ಜೈಶ್ ಉಗ್ರ ಸಂಘಟನೆ ನಾಯಕ ಮಸೂದ್ ಅಫ್ಘಾನ್ ನಲ್ಲಿ ಇಲ್ಲ, ಪಾಕ್ ನಲ್ಲಿದ್ದಾನೆ; ತಾಲಿಬಾನ್

ವ್ಯಕ್ತಿಯೊಬ್ಬರು ಮಾಧ್ಯಮ ಸಂದರ್ಶನ ನೇರಪ್ರಸಾರದಲ್ಲಿ ಕಳಪೆ ರಸ್ತೆಯ ಕುರಿತು ಮಾತಾಡುತ್ತಿದ್ದರು. ಈ ವೇಳೆ ಜನರನ್ನು ಹೊತ್ತೊಯ್ಯುತ್ತಿದ್ದ ಆಟೋ ರಿಕ್ಷಾ ಪಲ್ಟಿಯಾಗಿದ್ದು, ಕೂಡಲೇ ಸ್ಥಳೀಯರು ಆಟೋವನ್ನು ಮೇಲಕ್ಕೆತ್ತಿ, ಪ್ರಯಾಣಿಕರನ್ನು ರಕ್ಷಿಸಿದ್ದಾರೆ.  ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್‌ ಆಗುತ್ತಿದೆ. ರಸ್ತೆ ಅವ್ಯವಸ್ಥೆ ಕುರಿತು ಇದಕ್ಕಿಂತ ಬೇರೇನು ಸಾಕ್ಷಿ ಬೇಕು ಎಂದು ನೆಟ್ಟಿಗರು ಸರ್ಕಾರವನ್ನು ಪ್ರಶ್ನಿಸಿದ್ದಾರೆ.

ಸ್ಥಳೀಯ ನಿವಾಸಿಯೊಬ್ಬರು ರಸ್ತೆ ಅವ್ಯವಸ್ಥೆಗಳ ಬಗ್ಗೆ ವಿವರಣೆ ನೀಡುವಾಗಲೇ ಈ ಘಟನೆ ನಡೆದಿದ್ದು, ಅಲ್ಲಿನ ಕರಾಳ ಪರಿಸ್ಥಿತಿಗೆ ಈ ಘಟನೆ ಕೈಗನ್ನಡಿ ಹಿಡಿದಂತಿದೆ. ರಸ್ತೆಗಳು ಸಂಪೂರ್ಣ ಹಾಳಾಗಿದ್ದರೂ ಅಧಿಕಾರಿಗಳು ಯಾವುದೇ ಕ್ರಮಕೈಗೊಂಡಿಲ್ಲ. ಪ್ರತಿದಿನ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಈ ರಸ್ತೆಯಲ್ಲಿ ಸಂಚಾರ ಮಾಡಬೇಕಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next