Advertisement

ಯಾವ ತಂಡಕ್ಕೆ ಬೆಂಬಲ? ಮೆಕಲಮ್‌ ಗೊಂದಲ!

06:15 AM May 28, 2018 | Team Udayavani |

ಮುಂಬಯಿ: ರವಿವಾರದ ಐಪಿಎಲ್‌ ಫೈನಲ್‌ಗ‌ೂ ಮುನ್ನ ಬ್ರೆಂಡನ್‌ ಮೆಕಲಮ್‌ ಬಹಳ ಗೊಂದಲದಲ್ಲಿದ್ದರು. ಯಾವ ತಂಡಕ್ಕೆ ತಾನು ಬೆಂಬಲ ನೀಡಲಿ ಎಂಬುದೇ ಅವರ ಗೊಂದಲಕ್ಕೆ ಕಾರಣವಾಗಿತ್ತು. ಕೊನೆಗೆ ಎರಡೂ ತಂಡಗಳಿಗೆ ಶುಭ ಹಾರೈಸಿ ಟ್ವೀಟ್‌ ಮಾಡಿದರು.

Advertisement

ಚೆನ್ನೈ ಮತ್ತು ಹೈದರಾಬಾದ್‌ ತಂಡಗಳೆರಡೂ ನ್ಯೂಜಿಲ್ಯಾಂಡಿನೊಂದಿಗೆ ನಂಟು ಬೆಸೆದಿರುವುದನ್ನು ಮರೆಯುವಂತಿಲ್ಲ. ಚೆನ್ನೈ ತಂಡದ ಕೋಚ್‌ ಸ್ಟೀಫ‌ನ್‌ ಫ್ಲೆಮಿಂಗ್‌ ಹಾಗೂ ಹೈದರಾಬಾದ್‌ ತಂಡದ ನಾಯಕ ಕೇನ್‌ ವಿಲಿಯಮ್ಸನ್‌ ಇಬ್ಬರೂ ನ್ಯೂಜಿಲ್ಯಾಂಡಿನವರು. ಇವರಿಬ್ಬರೂ ಮೆಕಲಮ್‌ ಅವರ ಆತ್ಮೀಯರೂ ಹೌದು. ಹೀಗಾಗಿ ಬೆಂಬಲ ಸೂಚಿಸುವ ವಿಚಾರದಲ್ಲಿ ಅವರಿಗೆ ಗೊಂದಲವಾದದ್ದು ಸಹಜವೇ ಆಗಿತ್ತು.

“ಎರಡೂ ಈ ಋತುವಿನ ಅತ್ಯುತ್ತಮ ತಂಡಗಳು. ಫ್ಲೆಮಿಂಗ್‌ ಅಥವಾ ಕೇನ್‌, ಆಯ್ಕೆ ಕಷ್ಟ. ಎರಡೂ ತಂಡಗಳಿಗೆ ಬೆಸ್ಟ್‌ ಆಫ್ ಲಕ್‌!’ ಎಂದು ಟ್ವೀಟ್‌ ಮಾಡಿ ಸಂಕಟದಿಂದ ಪಾರಾದರು! 

Advertisement

Udayavani is now on Telegram. Click here to join our channel and stay updated with the latest news.

Next