Advertisement
ಸದ್ಯ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಅಂಕಪಟ್ಟಿಯಲ್ಲಿ ಭಾರತ ತಂಡವು ಮೊದಲ ಸ್ಥಾನದಲ್ಲಿದೆ. ಆಡಿರುವ 10 ಪಂದ್ಯಗಳನ್ನು ಏಳನ್ನು ಗೆದ್ದಿರುವ ರೋಹಿತ್ ಪಡೆ 71.67 ಶೇಕಡಾವಾರು ಅಂಕ ಹೊಂದಿದೆ. ಕಿವೀಸ್ ವಿರುದ್ದ ಗೆದ್ದ ಶ್ರೀಲಂಕಾ ಇದೀಗ ಮೂರನೇ ಸ್ಥಾನಕ್ಕೆ ಜಿಗಿದಿದೆ. ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ಎರಡನೇ ಸ್ಥಾನದಲ್ಲಿದೆ.
Related Articles
Advertisement
ಭಾರತವು ಉಳಿದ ಪಂದ್ಯಗಳಲ್ಲಿ ಐದು ಪಂದ್ಯಗಳನ್ನು ಗೆದ್ದು ಒಂದು ಪಂದ್ಯವನ್ನು ಡ್ರಾ ಮಾಡಿಕೊಂಡರೂ ಫೈನಲ್ ಗೆ ಅರ್ಹತೆ ಪಡೆಯುವ ಅವಕಾಶ ಹೊಂದಿದೆ.
ಎರಡನೇ ಸ್ಥಾನದಲ್ಲಿರುವ ಆಸ್ಟ್ರೇಲಿಯಾ ಕೂಡಾ ಮತ್ತೊಂದು ಫೈನಲ್ ಮೇಲೆ ಕಣ್ಣಿಟ್ಟಿದೆ. ಉಳಿದಿರುವ ಐದು ಪಂದ್ಯಗಳಲ್ಲಿ (ಭಾರತದ ವಿರುದ್ದವೇ) ನಾಲ್ಕು ಪಂದ್ಯಗಳಲ್ಲಿ ಗೆಲ್ಲಬೇಕಿದೆ. ಅಥವಾ ಮೂರು ಗೆದ್ದು ಒಂದು ಪಂದ್ಯ ಡ್ರಾ ಆದರೂ ಆಸೀಸ್ ಗೆ ಅವಕಾಶವಿದೆ.
ಮತ್ತೊಂದೆಡೆ ಲಂಕಾ ವಿರುದ್ದ ಸೋಲನುಭವಿಸಿದ ನ್ಯೂಜಿಲ್ಯಾಂಡ್ ಉಳಿದಿರುವ ಏಳು ಪಂದ್ಯಗಳಲ್ಲಿ ಆರನ್ನು ಗೆಲ್ಲಲೇಬೇಕಾದ ಒತ್ತಡದಲ್ಲಿದೆ. ಅದರಲ್ಲಿ ಮೂರು ಪಂದ್ಯಗಳನ್ನು ಅದು ಭಾರತದ ವಿರುದ್ದ ಆಡಲಿದೆ.