Advertisement
ಸುಬ್ಟಾರೆಡ್ಡಿಗೆ ಸಿಗುತ್ತಾ ಕೈ ಟಿಕೆಟ್?: ಕಳೆದ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಕಾಂಗ್ರೆಸ್‌ನ್ನು ಸೋಲಿಸಿ ಶಾಸಕರಾದ ಎಸ್.ಎನ್.ಸುಬ್ಟಾರೆಡ್ಡಿ ಎರಡನೇ ಬಾರಿ ಪುನಾರಯ್ಕೆಗೆ ಈಗ ಕೈ ಹಿಡಿದಿದ್ದಾರೆ. ಈಗಾಗಲೇ ಸುಬ್ಟಾರೆಡ್ಡಿಗೆ ಸಿಎಂ ಸಿದ್ದರಾಮಯ್ಯ ಬಹಿರಂಗವಾಗಿ ಟಿಕೆಟ್ ಘೋಷಿಸಿದರೂ ಕೊನೆ ಕ್ಷಣದವರೆಗೂ ಏನು ಹೇಳದ ಸ್ಥಿತಿ ಕಾಂಗ್ರೆಸ್‌ನಲ್ಲಿದೆ. ಇದರ ನಡುವೆ ಎರಡು ಬಾರಿ ಶಾಸಕರಾಗಿರುವ ಮಾಜಿ ಶಾಸಕ ಎನ್.ಸಂಪಂಗಿ ತನಗೆ ಟಿಕೆಟ್ ಬೇಕೆಂದು ಪಟ್ಟು ಹಿಡಿದು ಕೂತಿದ್ದಾರೆ. ಟಿಕೆಟ್ ವಿಚಾರದಲ್ಲಿ ಶಾಸಕ ಸುಬ್ಟಾರೆಡ್ಡಿ ಸಿಎಂರನ್ನು ನೆಚ್ಚಿಕೊಂಡರೆ ಸಂಪಂಗಿ ತಮ್ಮ ಪ್ರಭಾವ ಬಳಿಸಿ ಹೈಕಮಾಂಡ್ ಮಟ್ಟದಲ್ಲಿ ಪಕ್ಷದ ಟಿಕೆಟ್‌ಗಾಗಿ ಪ್ರಬಲ ಲಾಭಿ ಮಾಡುತ್ತಿರುವುದು ಕಾಂಗ್ರೆಸ್ ವಲಯದಲ್ಲಿ ಟಿಕೆಟ್ ಕದನ ತಾರಕ್ಕೇರುವಂತೆ ಮಾಡಿದೆ. ಆದರೆ ಇಬ್ಬರಲ್ಲಿ ಯಾರಿಗೂ ಕೈ ಟಿಕೆಟ್ ಒಲಿಯುತ್ತೆ ಎನ್ನುವುದು ಸಾಕಷ್ಟು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ. ಒಮ್ಮೆ ಟಿಕೆಟ್ ಕೈ ತಪ್ಪಿದರೆ ಬಂಡಾಯವಾಗಿ ಕಣಕ್ಕೆ ಇಳಿಯುವುದರ ಬಗ್ಗೆ ಸಂಪಂಗಿ ಇದುವರೆಗೂ ಬಹಿರಂಗವಾಗಿ ಹೇಳದಿರುವುದು ಕೂಡ ಸಾಕಷ್ಟು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ. ಟಿಕೆಟ್ ಕನದಲ್ಲಿ ಯಾರ ಕೈ ಮೇಲಾಗುತ್ತೆ ಎಂಬುದನ್ನು ಕಾದು ನೋಡ ಬೇಕಿದೆ.
ನಿರ್ಮಾಣ ಸಿ.ಆರ್.ಮನೋಹರ್ ಬಾಗೇಪಲ್ಲಿ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದಾರೆ. ಆಗಾಗ ಡಿಜೆ ನಾಗ ರಾಜರೆಡ್ಡಿಗೆ ಸಿಗಬೇಕಿದ್ದ ಜೆಡಿಎಸ್ ಭಿ.ಪಾರಂ ಕೊನೆ ಗಳಿಗೆಯಲ್ಲಿ ಸಿ. ಆರ್.ಮನೋಹರ್‌ಗೆ ಒಲಿದಿದ್ದು ಮನೋ ಹರ್ ಸ್ಪರ್ಧೆ ಖಚಿತವಾಗಿದೆ. ಇನ್ನೂ ಜೆಡಿಎಸ್ ಎಡಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡರೆ ಜೆಡಿಎಸ್ ಕಣದಿಂದ ಹಿಂದೆ ಸರಿಯಬೇಕಿತ್ತು. ಆದರೆ ಜೆಡಿಎಸ್ ವರಿಷ್ಠ ದೇವೇಗೌಡ ಎಡಪಕ್ಷಗಳ ಜೊತೆ ಮೈತ್ರಿ ಇಲ್ಲ ಎಂದಿದ್ದಾರೆ. ಹೀಗಾಗಿ ಜೆಡಿಎಸ್ ಸ್ಪರ್ಧೆ ಖಚಿತವಾದರೂ ಪಕ್ಷಕ್ಕೆ ಬಂಡಾಯದ ಬಿಸಿ ಅಂಟಿಕೊಂಡಿದೆ.
Related Articles
Advertisement
ಯಾವ ಹೋಬಳಿ ಯಾರ ಕಡೆಗೆ: ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದಲ್ಲಿ ಗೂಳೂರು, ಕಸಬಾ, ಮಿಟ್ಟೇಮರಿ, ಚೇಳೂರು ಸೇರಿ ಒಟ್ಟು ನಾಲ್ಕು ಹೋಬಳಿದ್ದು, ಈ ಪೈಕಿ ಕಸಬಾದಲ್ಲಿ ಸಿಪಿಎಂ ಪ್ರಾಬಲ್ಯ ಮೆರದಿದ್ದರೆ ಮಿಟ್ಟೇಮರಿ, ಗೂಳೂರು ಹೋಬಳಿಗಳಲ್ಲಿ ಕಾಂಗ್ರೆಸ್ ಹಿಡಿತ ಹೊಂದಿದೆ. ಉಳಿದದಂತೆ ಚೇಳೂರು ಹೋಬಳಿಯಲ್ಲಿ ಕಾಂಗ್ರೆಸ್, ಜೆಡಿಎಸ್ ಸಮಬಲದ ಹೋರಾಟ ನಡೆಸಲಿವೆ.
ಬಿಜೆಪಿಯಲ್ಲಿ ಗೊಂದಲಮಯ ರಾಜಕೀಯವಾಗಿ ಭದ್ರ ನೆಲೆ ಇಲ್ಲದ ಭಾಗೇಪಲ್ಲಿ ತಾಲೂಕಿನಲ್ಲಿ ಬಿಜೆಪಿ ಈ ಬಾರಿ ಚುನಾವಣಾ ಅಖಾಡಕ್ಕೆ ಸಜ್ಜಾಗುತ್ತಿದ್ದರೂ ಅಭ್ಯರ್ಥಿಗಳು ಯಾರೆಂಬ ಗೊಂದಲ ಮುಂದುವರಿದಿದೆ. ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಬಹುಭಾಷಾ ನಟ ಸಾಯಿಕುಮಾರ್ ಚುನಾವಣಾ ಘೋಷಣೆ ಮೊದಲೇ ಕ್ಷೇತ್ರದಲ್ಲಿ ಸಂಚರಿಸಿ ರಾಜಕೀಯ ವಲಯದಲ್ಲಿ ಸಂಚಲನ ಉಂಟು ಮಾಡಿದರು. ಆದರೆ ಇದೀಗ ಟಿಕೆಟ್ ಗೊಂದಲದಿಂದ ಕ್ಷೇತ್ರದ ಕಡೆಗೆ ಕಾಲಿಡುತ್ತಿಲ್ಲ.
ಇನ್ನೂ ನನಗೆ ಬಿಜೆಪಿ ಟಿಕೆಟ್ ಎಂದು ಹೇಳಿಕೊಂಡು ಸಮಾಜ ಸೇವಕ ಅರಿಕೆರೆ ಕೃಷ್ಣಾರೆಡ್ಡಿ ಕ್ಷೇತ್ರದಲ್ಲಿ ಬೀಡುಬಿಟ್ಟಿದ್ದಾರೆ.ಆದರೆ ಬಿಜೆಪಿ ವರಿಷ್ಠರು ಯಾರಿಗೆ ಟಿಕೆಟ್ ಕೊಡುತ್ತಾರೆ ಎನ್ನುವುದು ಸಾಕಷ್ಟು ಕುತೂಹಲಕ್ಕೆ ಎಡೆಮಾಡಿ ಕೊಟ್ಟಿದೆ.
ನಟ ಸಾಯಿ ಕುಮಾರ್ ಸ್ಪರ್ಧಿಸಿದರೆ ಕಾಂಗ್ರೆಸ್, ಸಿಪಿಎಂಗೆ ಪೈಪೋಟಿ ನೀಡುವುದರಲ್ಲಿ ಯಾವುದೇ ಅನುಮಾನವಿಲ್ಲ.