ಹಿನ್ನೆಲೆ-ಮುನ್ನೆಲೆ ಏನು?
Advertisement
ಲೋಕಸಭಾ ಚುನಾವಣೆಯ ಅನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರದಿಂದ ಕೆಳಗಿಳಿಯುವ ಸನ್ನಿವೇಶ ಉದ್ಭವವಾಗಲಿದೆಯೇ? ಹಾಗೆಂಬ ಪ್ರಶ್ನೆ ಕರ್ನಾಟಕದ ರಾಜಕೀಯ ವಲಯಗಳಲ್ಲಿ ಕುತೂಹಲಕಾರಿ ಚರ್ಚೆಗೆ ಗ್ರಾಸ ಒದಗಿಸಿದೆ. ಅಂದ ಹಾಗೆ, ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಕೂಟ 25ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ. ಆ ಮೂಲಕ ಸಿದ್ದ ರಾಮಯ್ಯ ಅವರು ಸಿಎಂ ಹುದ್ದೆಯಿಂದ ಕೆಳಗಿಳಿಯುವ ಸನ್ನಿವೇಶ ನಿರ್ಮಾಣವಾಗಲಿದೆ ಎಂದು ಕಮಲ ಪಾಳೆಯದ ನಾಯಕರು ಹೇಳುತ್ತಿರುವುದು ನಿಜವಾದರೂ ಅದು ರಾಜಕಾರಣದ ಭಾಗ ಮಾತ್ರ.
Related Articles
Advertisement
ಒಂದು ಬಣದ ಪ್ರಕಾರ, ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಸಾಧನೆ ಕಳಪೆಯಾದರೆ ಅದರ ಹೊಣೆಯನ್ನು ಮುಖ್ಯಮಂತ್ರಿಗಳು ಹೊರಬೇಕಾಗುತ್ತದೆ. ಹೀಗಾಗಿ ಅದು ರಾಜೀನಾಮೆ ನೀಡುವಂಥ ಅನಿವಾರ್ಯತೆಯನ್ನೂ ಸೃಷ್ಟಿಸಬಹುದು. ಆದರೆ ಕಾಂಗ್ರೆಸ್ ಪಾಳೆಯದ ಬಹುದೊಡ್ಡ ಬಣ ಮಾತ್ರ ಲೋಕಸಭಾ ಚುನಾವಣೆಯ ಫಲಿತಾಂಶ ಮುಖ್ಯಮಂತ್ರಿ ಸಿದಟಛಿರಾಮಯ್ಯ ಅವರ ಅಧಿಕಾರಕ್ಕೆ ಸಂಚಕಾರ ತರುತ್ತದೆ ಎಂಬ ಮಾತನ್ನು ಒಪ್ಪುವುದಿಲ್ಲ. ಇಂದಿನ ರಾಜಕೀಯ ಸನ್ನಿವೇಶದಲ್ಲಿ…ಕಾರಣ? ಇವತ್ತಿನ ರಾಜಕೀಯ ಸನ್ನಿವೇಶ ಹೇಗಿದೆ ಎಂದರೆ, ಸಿದ್ದರಾಮಯ್ಯ ಅವರನ್ನು ಬಲವಂತವಾಗಿ ಅಧಿಕಾರದಿಂದ ಕೆಳಗಿಳಿಸುವ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಇಲ್ಲ.
ಯಾಕೆಂದರೆ ಮೊತ್ತಮೊದಲನೆಯದಾಗಿ, ಕಾಂಗ್ರೆಸ್ ಹೈಕಮಾಂಡ್ ಪ್ರಭಾವಶಾಲಿಯಾಗಿಲ್ಲ . ಕಳೆದ ಹತ್ತು ವರ್ಷಗಳಿಂದ ಕೇಂದ್ರದ ಅಧಿಕಾರ ಹಿಡಿಯಲು ವಿಫಲವಾಗಿರುವ ಅದಕ್ಕೆ ಈಗ ಸ್ವಯಂ ಶಕ್ತಿ ಎಂಬುದಿಲ್ಲ . ಬದಲಿಗೆ, ಅದು ಕರ್ನಾಟಕ ಸೇರಿದಂತೆ ದೇಶದ ಕೆಲ ರಾಜ್ಯಗಳಲ್ಲಿ ಪಕ್ಷಕ್ಕಿರುವ ಅಧಿಕಾರವನ್ನು ಬಳಸಿಕೊಂಡು ಉಸಿರಾಡಲು ಪ್ರಯತ್ನ ಮಾಡುತ್ತಿದೆ. ಇಂಥ ಸ್ಥಿತಿಯಲ್ಲಿ ಅದು ರಾಜ್ಯ ಮಟ್ಟದಲ್ಲಿ ನಾಯಕತ್ವವನ್ನು ಬದಲಿಸುವ ಸ್ಥಿತಿಯಲ್ಲಿ ಇಲ್ಲ . ಹಿಂದೆ ಇಂದಿರಾ ಗಾಂಧಿಯವರ ಕಾಲದಲ್ಲಿ ಕೊನೆಗೆ ಪಿ.ವಿ. ನರಸಿಂಹರಾಯರು ಪ್ರಧಾನಮಂತ್ರಿಯಾಗಿದ್ದ ಕಾಲದಲ್ಲಿ ರಾಜ್ಯಮಟ್ಟದ ನಾಯಕತ್ವವನ್ನು ಅಲುಗಾಡಿಸುವುದು ಅದಕ್ಕೆ ಸಾಧ್ಯವಿತ್ತು.
ಹೀಗೆ ಸ್ವಯಂಬಲವಿಲ್ಲದಿದ್ದರೂ 2004ರಿಂದ 2014ರವರೆಗಿನ ರಾಜಕೀಯ ಸನ್ನಿವೇಶ ಇಂಥ ಆಟ ಆಡಲು ಅದಕ್ಕೆ ದಾರಿ ಒದಗಿಸಿತ್ತು. ಅರ್ಥಾತ್, ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ ಇದ್ದಾಗಲೂ ರಾಜ್ಯ ಮಟ್ಟದಲ್ಲಿ ಅದು ಆಟವಾಡುತ್ತಿತ್ತು. ಆದರೆ ಇವತ್ತಿನ ಸನ್ನಿವೇಶ ಎಷ್ಟು ಕೆಟ್ಟಿದೆಯೆಂದರೆ ಅದು ಸ್ವಯಂ ಆಗಿ ಮುಂದೆ ನುಗ್ಗಿ ರಾಜ್ಯ ಮಟ್ಟದ ನಾಯಕತ್ವವನ್ನು ತಡಕಾಡುವ ಸ್ಥಿತಿಯಲ್ಲಿಲ್ಲ . ತುಂಬ ದೂರ ಹೋಗುವುದೇನು? ಕೆಲ ಕಾಲದ ಹಿಂದೆ ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರನ್ನು ಬದಲಿಸಲು ಹೈಕಮಾಂಡ್ ನಿರ್ಧರಿಸಿದರೂ, ಅಶೋಕ್ ಗೆಹ್ಲೋಟ್ ಜಪ್ಪಯ್ಯ ಎನ್ನದೆ ಮುಖ್ಯಮಂತ್ರಿ ಹುದ್ದೆಯಲ್ಲಿ ಮುಂದುವರಿದಿದ್ದರು.
ಅರ್ಥಾತ್, ತಾನು ತೆಗೆದುಕೊಂಡ ಒಂದು ತೀರ್ಮಾನವನ್ನು ಕಟ್ಟುನಿಟ್ಟಾಗಿ ಜಾರಿ ಮಾಡುವ ಪರಿಸ್ಥಿತಿಯಲ್ಲಿ ಅದು ಇರಲಿಲ್ಲ . ಸದ್ಯದ ಪರಿಸ್ಥಿತಿಯಂತೂ ಇನ್ನಷ್ಟು ಕಷ್ಟಕರವಾಗಿದೆ. ಯಾಕೆಂದರೆ ರಾಜಸ್ಥಾನದಲ್ಲಿ ಅದು ಅಧಿಕಾರ ಕಳೆದುಕೊಂಡಿದೆ.ದೇಶದ ಬಹುತೇಕ ರಾಜ್ಯಗಳನ್ನು ಕಳೆದುಕೊಂಡಿದೆ. ಇಂಥ ಸ್ಥಿತಿಯಲ್ಲಿ , ಲೋಕಸಭಾ ಚುನಾವಣೆಯ ಫಲಿತಾಂಶ ಕಳಪೆಯಾಗಿದೆ ಎಂಬ ನೆವವನ್ನಿಟ್ಟುಕೊಂಡು ಸಿದಟಛಿರಾಮಯ್ಯ ಅವರನ್ನು ಅಧಿಕಾರದಿಂದ ಕೆಳಗಿಳಿಸುವ ಸ್ಥಿತಿಯಲ್ಲಿ ಅದು ಇಲ್ಲವೇ ಇಲ್ಲ. ವಸ್ತುಸ್ಥಿತಿಯೆಂದರೆ, 2014ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಇದೇ ಸಿದಟಛಿರಾಮಯ್ಯ ಮುಖ್ಯಮಂತ್ರಿಯಾಗಿದ್ದರು. ಆ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ಗೆದ್ದಿದ್ದು ಕೇವಲ ಒಂದೇ ಸ್ಥಾನ. ಆದರೆ ಕರ್ನಾಟಕದಲ್ಲಿ ಪಕ್ಷ ಗೆದ್ದಿದ್ದು ಒಂದೇ ಸ್ಥಾನವಾದರೂ ಹೈಕಮಾಂಡ್ ದುಸುರಾ ಮಾತನಾಡಲಿಲ್ಲ . ಕಾರಣ? ಒಟ್ಟಾರೆ ದೇಶದಲ್ಲೇ ಕಾಂಗ್ರೆಸ್ ಪಕ್ಷದ ಸಾಧನೆ ಕಳಪೆಯಾಗಿತ್ತು. ಹೀಗಾಗಿ ಕರ್ನಾಟಕದಲ್ಲಿ ಪಕ್ಷದ ಸಾಧನೆ ಕಳಪೆಯಾಗಲು ಏನು ಕಾರಣ-ಎಂದು ಕೇಳುವ ಸ್ಥಿತಿಯಲ್ಲೂ ಅದು ಇರಲಿಲ್ಲ . ಆದರೆ ಈ ಸಲ ಪರಿಸ್ಥಿತಿ ಬದಲಾಗಿದೆ. 2014ರಲ್ಲಿ ಒಂದೇ ಸ್ಥಾನ ಗೆಲ್ಲುವ ಸ್ಥಿತಿಯಲ್ಲಿದ್ದ ಕಾಂಗ್ರೆಸ್ ಪಕ್ಷ ಈ ಸಲ ಆರರಿಂದ ಹತ್ತು ಲೋಕಸಭಾ ಕ್ಷೇತ್ರಗಳಲ್ಲಿ ಗೆಲ್ಲುವ ಕನಸು ಕಾಣುತ್ತಿದೆ. ಅದರ ಈ ನಿರೀಕ್ಷೆ ಎಷ್ಟರ ಮಟ್ಟಿಗೆ ಸಫಲವಾಗುತ್ತದೋ, ಅದು ಬೇರೆ ವಿಷಯ. ಆದರೆ ಬಿಜೆಪಿ-ಜೆಡಿಎಸ್ ಮೈತ್ರಿಕೂಟದ ಒಳ ಪಲ್ಲಟಗಳನ್ನು ಗಮನಿಸಿದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಗಣನೀಯ ಸಂಖ್ಯೆಯ ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವುದಂತೂ ಖಚಿತ. ಹೀಗಾಗಿ ಕರ್ನಾಟಕದಲ್ಲಿ ಪಕ್ಷ ಎಷ್ಟೇ ಕ್ಷೇತ್ರಗಳಲ್ಲಿ ಗೆಲುವು ಗಳಿಸಲಿ. ಆದರೆ ಅದರಿಂದ ಸಿದ್ದರಾಮಯ್ಯ ಅವರ ನಾಯಕತ್ವಕ್ಕೆ ಯಾವ ತೊಂದರೆಯೂ ಇಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಸಿ ದಕ್ಕಿಸಿಕೊಳ್ಳುವ ಸ್ಥಿತಿಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಕೂಡಾ ಇಲ್ಲ. ಗಮನಿಸಬೇಕಾದ ಸಂಗತಿ ಎಂದರೆ, ಕಾಂಗ್ರೆಸ್ ನೇತೃತ್ವದ “ಇಂಡಿಯಾ’ ಮೈತ್ರಿಕೂಟ ಗೆದ್ದು ದೆಹಲಿಯ ಅಧಿಕಾರ ಹಿಡಿದರೆ ಕಾಂಗ್ರೆಸ್ ಪಕ್ಷ ನೆಪಕ್ಕಾದರೂ ನಾಯಕತ್ವದ ಬಗೆಗಿನ ಚರ್ಚೆ ಮೇಲೇಳುವಂತೆ ಮಾಡಬಹುದು. ಆದರೆ ದೇಶದ ಸದ್ಯದ ರಾಜಕೀಯ ಸನ್ನಿವೇಶವನ್ನು ಗಮನಿಸಿದರೆ, ಇಂಡಿಯಾ ಒಕ್ಕೂಟ ಗೆದ್ದು
ದೇಶದ ಅಧಿಕಾರ ಸೂತ್ರ ಹಿಡಿಯುವುದು ಸರಳವಾಗಿಲ್ಲ. ಹೀಗಾಗಿ ಈ ಸಲದ ಲೋಕಸಭಾ ಚುನಾವಣೆ ಸಿದ್ದರಾಮಯ್ಯ ಅವರ
ನಾಯಕತ್ವದ ಮೇಲೆ ಪರಿಣಾಮ ಬೀರುತ್ತದೆ ಎನ್ನುವಂಥ ಸನ್ನಿವೇಶವೇ ಕಾಣುತ್ತಿಲ್ಲ. ಬದಲಿಗೆ, ಈ ಚುನಾವಣೆಯ ಅನಂತರ ಕಾಂಗ್ರೆಸ್ ಹೈಕಮಾಂಡ್ ಸಿದಟಛಿರಾಮಯ್ಯ ಅವರ ಮೇಲೆ ಇನ್ನಷ್ಟು ಬಲವಾಗಿ ಅವಲಂಬಿತರಾಗಬಹುದೇ ಹೊರತು ಇನ್ನೇನಿಲ್ಲ. *ಫಲ್ಗುಣಿ (ಕೃಪೆ ತರಂಗ ವಾರಪತ್ರಿಕೆ)