Advertisement

ಬೈಕ್‌ಗೆ ಯಾವುದು ಬೆಸ್ಟ್‌?

11:09 PM Oct 03, 2019 | mahesh |

ಕೆಲವು ಬೈಕ್‌ಗಳಲ್ಲಿ ಎರಡು ಶಾಕ್ಸ್‌ಗಳು, ಕೆಲವುಗಳಲ್ಲಿ ಸಿಂಗಲ್‌ ಶಾಕ್ಸ್‌ ಅಥವಾ ಮೋನೋ ಶಾಕ್ಸ್‌ಗಳನ್ನು ನೀವು ನೋಡಿರಬಹುದು? ಇದೇಕೆ ಹೀಗೆ? ಅವುಗಳಿಂದ ಲಾಭವೇನು ಎಂಬ ಪ್ರಶ್ನೆಯೂ ಮೂಡಿರಬಹುದು. ಇದಕ್ಕೆ ಕೆಲವು ಅದರದ್ದೇ ಆದ ಕಾರಣಗಳಿವೆ. ಅದೇನು? ನೋಡೋಣ ಬನ್ನಿ.

Advertisement

ಡ್ಯುಎಲ್‌ ಶಾಕ್ಸ್‌ ಎಂದರೆ ಬೈಕ್‌ಗಳಲ್ಲಿ ಎರಡು ಶಾಕ್ಸ್‌ಗಳಿರುತ್ತವೆ. ಇದೊಂದು ಹಳೆಯ ತಂತ್ರಜ್ಞಾನ. ಎರಡು ಶಾಕ್ಸ್‌ಗಳಿರುವ ಬೈಕ್‌ ಅತಿ ಕೆಟ್ಟದಾದ ರಸ್ತೆಗಳಲ್ಲಿ ಸಾಗಲು ನೆರವು ನೀಡುತ್ತದೆ. ಸಾಮಾನ್ಯವಾಗಿ ಭಾರತೀಯ ರಸ್ತೆಗಳಲ್ಲಿ ಸಂಚರಿಸುವ ಹೆಚ್ಚಿನ ಬೈಕ್‌ಗಳು ಇದೇ ಮಾದರಿಯ ಶಾಕ್ಸ್‌ಗಳನ್ನು ಹೊಂದಿವೆ. ಹೀಗೆ ಎರಡು ಶಾಕ್ಸ್‌ಗಳನ್ನು ಹೊಂದಿದ್ದರೆ ಅವುಗಳು ಹೆಚ್ಚಿನ ಒತ್ತಡವನ್ನು ಸ್ವೀಕರಿಸುತ್ತವೆ. ಅಲ್ಲದೇ ಎಂತಹುದೇ ಹೊಂಡಗುಂಡಿಗಳಲ್ಲಿ ಹೆಚ್ಚಿನ ಕಿರಿಕ್‌ ಇಲ್ಲದೆ ಚಲಿಸಬಹುದು. ಹಳ್ಳಿಗಳಲ್ಲಿ ಸಾಮಾನ್ಯ ಬೈಕ್‌ಗಳಲ್ಲಿ ಗರಿಷ್ಠ ಭಾರ ಹಾಕಿ ಸಂಚರಿಸುವುದು ಸಾಮಾನ್ಯವಾಗಿದೆ. ಪ್ರತಿ ಬೈಕ್‌ಗಳಿಗೆ ನಿರ್ದಿಷ್ಟ ಭಾರ ಹೊರುವ ಸಾಮರ್ಥ್ಯ ಎಂಬುದಿದ್ದು, ಇದರಲ್ಲೂ ಗರಿಷ್ಠ ಭಾರ ಮತ್ತು ಹೆಚ್ಚಿನ ರಸ್ತೆ ಆಘಾತಗಳನ್ನು ತಡೆಯಬೇಕೆಂದರೆ ಗಡುಸಾದ ಸಸ್ಪೆನನ್‌ ಬೇಕಾಗಿರುವುದರಿಂದ ಡ್ಯುಎಲ್‌ ಶಾಕ್ಸ್‌ ಗಳನ್ನು ಬಳಸಲಾಗುತ್ತಿದೆ. ಡ್ಯುಎಲ್‌ ಶಾಕ್ಸ್‌ಗಳು ಅತ್ಯಂತ ಸಮರ್ಥವಾಗಿ ಕೆಲಸ ಮಾಡುವಂಥವುಗಳು. ಇವುಗಳ ಬೆಲೆ ಕಡಿಮೆ ಮತ್ತು ಸಾಮಾನ್ಯ ಬೈಕ್‌ಗಳಲ್ಲೇ ಹೆಚ್ಚಾಗಿ ಬಳಸಲಾಗುತ್ತಿದೆ.

ಮೋನೋಶಾಕ್ಸ್‌ಗಳೆಂದರೆ ಅದರಲ್ಲಿ ಒಂದೇ ಶಾಕ್ಸ್‌ ಇರುತ್ತದೆ. ಸಾಮಾನ್ಯವಾಗಿ ಭಾರೀ ಸಾಮರ್ಥ್ಯದ ಬೈಕ್‌ಗಳಲ್ಲಿ ಇವುಗಳನ್ನು ಬಳಸುತ್ತಾರೆ. ದುಪ್ಪಟ್ಟು ಭಾರ ಹಾಕಿ ಸಂಚರಿಸುವುದು ಇಂತಹ ಶಾಕ್ಸ್‌ಗಳಲ್ಲಿ ಸಾಧ್ಯವಿಲ್ಲ. ರಸ್ತೆ ಉತ್ತಮವಾಗಿದ್ದಾಗ, ಕಡಿಮೆ ಭಾರ ಹೊಂದಿದ ಚಾಸಿಸ್‌ಗಳಿದ್ದಾಗಲೂ ಮೋನೋಶಾಕ್‌ಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತವೆ. ಸೂಪರ್‌ಬೈಕ್‌ಗಳಲ್ಲಿ, ನ್ಪೋರ್ಟ್ಸ್ ಬೈಕ್‌ಗಳಲ್ಲಿ ಮೋನೋಶಾಕ್‌ಗಳು ಇರುತ್ತವೆ. ಮೋನೋಶಾಕ್‌ಗಳು ಇರುವ ಬೈಕ್‌ಗಳಲ್ಲಿ ತಿರುವಿನ ವೇಳೆ ಇದರ ಪ್ರಯೋಜನದ ಅರಿವಾಗುತ್ತದೆ. ಬೈಕ್‌ ಮೇಲೆ ಸವಾರನಿಗೆ ಹೆಚ್ಚು ನಿಯಂತ್ರಣವಿರುತ್ತದೆ. ಅತಿ ಹೆಚ್ಚಿನ ವೇಗ, ಹಿಡಿತದ ಚಾಲನೆಗೆ ಮೋನೋಶಾಕ್ಸ್‌ ಇರುವ ಬೈಕ್‌ಗಳು ಉತ್ತಮ. ಇವುಗಳ ಬೆಲೆ ತುಸು ದುಬಾರಿ.

ಡ್ಯುಎಲ್‌ ಶಾಕ್ಸ್‌ ಪ್ರಯೋಜನ
·  ಹೆಚ್ಚುವರಿ ಲೋಡ್‌ ತೆಗೆದುಕೊಳ್ಳುತ್ತದೆ
·  ಯಾವುದೇ ರೀತಿಯ ಕೆಟ್ಟ ರಸ್ತೆಗಳಲ್ಲಿ
ಸಮಸ್ಯೆ ಇಲ್ಲದೆ ಚಾಲನೆ
·  ಕಠಿನ ರಸ್ತೆಗಳಲ್ಲೂ ಸುಗಮ ಚಾಲನೆ.
·  ನಿರ್ವಹಣೆ ವೆಚ್ಚ ಕಡಿಮೆ, ಕಡಿಮೆ ದರ
·  ಚಾಸಿಸ್‌ನ ಮೇಲೆ ಭಾರ ಕಡಿಮೆ ಮಾಡುತ್ತದೆ.

ಮೋನೋ ಶಾಕ್ಸ್‌
·  ಹೈವೇ ಚಾಲನೆಗೆ, ತಿರುವಿನಲ್ಲಿ ಹ್ಯಾಡ್ಲಿಂಗ್‌ ಅತ್ಯುತ್ತಮ.
·  ಅತಿ ವೇಗದ ಚಾಲನೆಗೆ ಉತ್ತಮ.
·  ಸ್ವಿಂಗ್‌ ಆರ್ಮ್ಗೆ ಟಾರ್ಕ್‌ ವರ್ಗಾವಣೆಯಾಗುವುದನ್ನು ತಡೆಯುತ್ತದೆ.
·  ಶಾಕ್ಸ್‌ ಅಡ್ಜಸ್ಟ್‌ ಮಾಡುವುದು ಸುಲಭ.
·  ಅತ್ಯುತ್ತಮ ರೈಡಿಂಗ್‌ ಗುಣಮಟ್ಟ, ಸವಾರಿಗೆ ಸುಖಕರ.

Advertisement

- ಈಶ

Advertisement

Udayavani is now on Telegram. Click here to join our channel and stay updated with the latest news.

Next