Advertisement
ಅರುಣಾಚಲ ಪ್ರದೇಶ (2016)2014ರ ಚುನಾವಣೆಯಲ್ಲಿ ಕಾಂಗ್ರೆಸ್ 42 ಸ್ಥಾನ (ಒಟ್ಟು ಸ್ಥಾನ 60) ಗೆದ್ದು ಅಧಿಕಾರಕ್ಕೆ ಬಂದಿತ್ತು. ಆದರೆ ಸಿಎಂ ಪೆಮಾ ಖಂಡು, 2016ರಲ್ಲಿ ತಮ್ಮೊಂದಿಗೆ 40 ಶಾಸಕರನ್ನು ಕರೆದುಕೊಂಡು ಬಿಜೆಪಿ ಜತೆ ಕೈ ಜೋಡಿಸಿ ಸರಕಾರ ರಚಿಸಿದರು.
ಕರ್ನಾಟಕದಲ್ಲಿ 2018ರ ಚುನಾವಣೆ ಅನಂತರ ಜೆಡಿಎಸ್ -ಕಾಂಗ್ರೆಸ್ ಜಂಟಿಯಾಗಿ ಸರಕಾರ ರಚಿಸಿದವು. ಅನಂತರ, ಕಾಂಗ್ರೆಸ್‌ನ 16 ಶಾಸಕ ರನ್ನು ಸೆಳೆದ ಬಿಜೆಪಿ, ಕುಮಾರಸ್ವಾಮಿ ಸರಕಾರ ಕೆಡವಿ ತನ್ನ ಸರಕಾರ ರಚಿಸಿತು.
Related Articles
2017ರ ಚುನಾವಣೆಯಲ್ಲಿ ಕಾಂಗ್ರೆಸ್ 27 ಸ್ಥಾನ (ಒಟ್ಟು ಸ್ಥಾನ 40) ಗೆದ್ದಿತ್ತು. ಆದರೆ ಅಲ್ಲಿನ ರಾಜ್ಯಪಾಲರು ಬಿಜೆಪಿಗೆ (21 ಸ್ಥಾನ) ಸರಕಾರ ರಚಿಸಲು ಆಹ್ವಾನಿಸಿದರು. ಆಗ 9 ಕಾಂಗ್ರೆಸ್ ಶಾಸಕರನ್ನು ತನ್ನ ತೆಕ್ಕೆಗೆ ತೆಗೆದುಕೊಂಡ ಬಿಜೆಪಿ, ಸರಕಾರ ರಚಿಸಿತು.
Advertisement
ಗೋವಾ (2017)2017ರ ಚುನಾವಣೆಯಲ್ಲಿ ಕಾಂಗ್ರೆಸ್ 17 ಸ್ಥಾನ (ಒಟ್ಟು 40) ಗೆಲ್ಲುವ ಮೂಲಕ ಅತೀ ದೊಡ್ಡ ಪಕ್ಷವಾಗಿ ಪರಿಗಣಿಸಲ್ಪಟ್ಟಿತ್ತು. ಆದರೆ 13 ಶಾಸಕರನ್ನು ಹೊಂದಿದ್ದ ಬಿಜೆಪಿ, ಕಾಂಗ್ರೆಸ್‌ನಿಂದ ಒಬ್ಬರನ್ನು ಹಾಗೂ ಇತರ 10 ಶಾಸಕರನ್ನು ತನ್ನತ್ತ ಸೆಳೆದುಕೊಂಡು ಸರಕಾರ ರಚಿಸಿತು. ಮಧ್ಯಪ್ರದೇಶ (2020)
2018ರಲ್ಲಿ ಕಮಲ್‌ನಾಥ್ ನೇತೃತ್ವದಲ್ಲಿ ಕಾಂಗ್ರೆಸ್‌ನಿಂದ ಸರಕಾರ ರಚನೆ. ಡಿಸಿಎಂ ಜ್ಯೋತಿರಾದಿತ್ಯ ಸಿಂಧಿಯಾ ಹಾಗೂ ಬೆಂಬಲಿಗರನ್ನು ತನ್ನತ್ತ ಸೆಳೆದ ಅಲ್ಲಿನ ಸರಕಾರ ಉರುಳಿಸಿ, ಶಿವರಾಜ್ ಸಿಂಗ್ ಚೌಹಾನ್ ನೇತೃತ್ವದ ಸರಕಾರವನ್ನು ಅಸ್ತಿತ್ವಕ್ಕೆ ತಂದಿತು.