ಮೂಡಲಗಿ: ದೇವತೆಗಳು ನಮ್ಮ ಮನೆಯಲ್ಲೇ ಇರುತ್ತಾರೆ. ಭಕ್ತಿಯಿಂದ ಪೂಜಿಸುವ ಭಾವ ಇರಬೇಕು. ಶಕ್ತಿ, ನವ ದೇವತೆಗಳ ಅವತಾರ ಈ ನವರಾತ್ರಿ ಉತ್ಸವ ಕಾರ್ಯಕ್ರಮದಲ್ಲಿ ಧ್ಯಾನ ಪ್ರಾರ್ಥನೆ ಭಕ್ತಿ ಶೃದ್ದೆಯಿಂದ ದೇವಿ ಆರಾಧನೆ ಮಾಡಬೇಕು ಎಂದು ಯುವ ನಾಯಕ ಸರ್ವೋತ್ತಮ ಜಾರಕಿಹೊಳಿ ಹೇಳಿದರು.
ಅವರು ಮೂಡಲಗಿ ತಾಲೂಕಿನ ಹಳ್ಳೂರ ಗ್ರಾಮದ ಶ್ರೀ ಧ್ಯಾಮವ್ವದೇವಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವದ ನಿಮಿತ್ತ 9 ದಿನಗಳವರಗೆ ನಡೆದ ಶ್ರೀ ದೇವಿ ಪುರಾಣ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ, ನಮ್ಮ ಮುಂದಿನ ಜನತೆಗೆ ಉತ್ತಮ ಸಂಸ್ಕಾರ ಕೊಡೋಣ ಎಂದರು.
ಅಂಕಲಗಿ ಅಡವಿಸಿದ್ದೇಶ್ವರ ಮಠದ ಶ್ರೀ ಅಮರಸಿದ್ದೇಶ್ವರ ಮಹಾಸ್ವಾಮೀಜಿ ಮಾತನಾಡಿ, ಎಲ್ಲಿ ಹೆಣ್ಣು ಮಕ್ಕಳು ಪೂಜಿಸಲು ಪಡುತ್ತಾರೋ ಅಲ್ಲಿ ಸಾಕ್ಷಾತ್ ದೇವತೆಗಳು ವಾಸವಾಗಿರುತ್ತಾರೆ. ಹಾಗಾಗಿ ನಮ್ಮ ನಾಡಿನ ಸಂಸ್ಕೃತಿಯನ್ನು ಬೆಳೆಸಲು ತಾಯಂದಿರ ಪಾತ್ರ ಬಹಳ ಇದೆ. 9 ದಿನಗಳಲ್ಲಿ ಕೇಳಿದ ಈ ಒಳ್ಳೆಯ ವಿಚಾರ ದಿನನಿತ್ಯ ರೂಡಿಯಲ್ಲಿರಬೇಕು ಎಂದು ಹೇಳಿದರು.
ಕಪರಟ್ಟಿ-ಕಳ್ಳಿಗುದ್ದಿಯ ಶ್ರೀ ಬಸವರಾಜ ಸ್ವಾಮೀಜಿ ಮಾತನಾಡಿ, ಗ್ರಾಮದ ಗುರು ಹಿರಿಯರು ಸಹಕಾರದಿಂದ ಹಳ್ಳೂರ ಗ್ರಾಮದಲ್ಲಿ 9 ದಿನಗಳ ದೇವಿ ಪುರಾಣ ವಿಶೇಷವಾಗಿ ನಡೆಯಿತು. ಆದಿಶಕ್ತಿ ಪರಾಕ್ರಮಿ ದೇವಿಯ ಹಲವಾರು ಅವತಾರಗಳು ನಾವು ನೀವು ನೋಡಿದೆವು ಎಂದರು.
ಸಮಾರಂಭದಲ್ಲಿ ದೈವದ ಹಿರಿಯರಾದ ಬಸವಣೆಪ್ಪಾ ಡಬ್ಬಣ್ಣವರ, ಶಿವಪ್ಪ ನಿಡೋಣಿ, ಮಲ್ಲಿಕಾರ್ಜುನ ಸಂತಿ, ಬಾಳಗೌಡ ಪಾಟೀಲ, ಭೀಮಸಿ ಹೊಸಟ್ಟಿ, ಅಡಿವೆಪ್ಪ ಪಾಲಬಾವಿ, ಶಿವಲಿಂಗ ಗುರ್ಲಾಪುರ, ಶಿವನಗೌಡ ಪಾಟೀಲ, ಹಣಮಂತ ತೇರದಾಳ, ರವಿ ಪಾಟೀಲ, ಶಂಕರಯ್ಯ ಹಿರೇಮಠ, ದುಂಡಪ್ಪ ಮಹಾರಾಜರು, ಶ್ರೀಶೈಲ ಹಿರೇಮಠ, ಅಬ್ದುಲ್ ಮಿರ್ಜಾನಾಯಕ, ಶಿದಗಿರೆಪ್ಪ ಬಡಿಗೇರ, ಲಕ್ಷ್ಮಣ ಹೊಸಮನಿ, ಲಕ್ಷ್ಮಣ ಬಡಿಗೇರ ಸಿದ್ದು ಬಡಿಗೇರ ಮೂಡಲಗಿ ತಾಲೂಕ ಬಡಿಗೇರ ಅಧ್ಯಕ್ಷ ಶಿವು ಬಡಿಗೇರ ಮುಂತಾದವರು ಉಪಸ್ಥಿತರಿದ್ದರು.
ಸ್ವಾಮಿ ವಿವೇಕಾನಂದ ರಾಜ್ಯ ಯುವ ಪ್ರಶಸ್ತಿ ವಿಜೇತ ಸಿದ್ದಣ್ಣ ದುರದುಂಡಿ ಕಾರ್ಯಕ್ರಮ ಸ್ವಾಗತಿಸಿ, ನಿರೂಪಿಸಿದರು . ಪೂರ್ವದಲ್ಲಿ ಹಳ್ಳೂರ ಗ್ರಾಮದ ಪಿರಸಾಬ್ ದರ್ಗಾದಿಂದ ದೇವಸ್ಥಾನದಿಂದ ಸುಮಂಗಲೆಯರಿಂದ ಆರತಿ ಹಾಗೂ ಕುಂಭಮೇಳ ಸಕಲ ವಾದ್ಯಗಳೊಂದಿಗೆ ಗ್ರಾಮದ ಪ್ರಮುಖ ಬಿದಿಗಳ ಮೂಲಕ ದೇವಿಯ ಭಾವಚಿತ್ರ ಭವ್ಯ ಮೆರವಣಿಗೆ ಕಾರ್ಯಕ್ರಮ ನಡೆಯಿತು.
ನಂತರ ದೇವಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಎಲ್ಲರನ್ನೂ ಸನ್ಮಾನಿಸಲಾಯಿತು.