Advertisement

ನಾವು ಕಟ್ಟಿದ ವಿಮೆ ಹಣ ಎಲ್ಲಿಗೆ ಹೋಗುತ್ತೆ ?

06:00 AM Aug 06, 2018 | |

ವಿಮೆ ಎಂಬುದು ನಮ್ಮನ್ನು ನಂಬಿಕೊಂಡವರಿಗಾಗಿ, ನಾವು ಇಡುವ ಇಡುಗಂಟು ಎಂಬ ನಂಬಿಕೆ ಹಿಂದಿನಿಂದಲೂ ಇದೆ. ಆದರೆ, ನಾವು ಕಟ್ಟಿದ ಹಣ ಏನಾಗುತ್ತದೆ ಎಂಬ ಪ್ರಶ್ನೆಗೆ ಉತ್ತರ ಯಾರಿಗೂ ಗೊತ್ತಿಲ್ಲ.ನಾವು ಕೊಂಡ ಪಾಲಿಸಿಗಾಗಿ ಪ್ರತಿ ತಿಂಗಳು  ಕಟ್ಟುವ ಪ್ರೀಮಿಯಂ ಹಣವು ಹೇಗೆ ಹೂಡಿಕೆಯಾಗಿ ಯಾವ ರೀತಿ ಗಳಿಕೆಯಾಗುತ್ತದೆ ಎಂಬುದರ ಬಗ್ಗೆ ಅರಿವಿದೆಯಾ? ಇಲ್ಲಿದೆ ನೋಡಿ ಮಾಹಿತಿ. 

Advertisement

ವಿಮೆ ಎಂದರೆ ಸಾಮಾನ್ಯವಾಗಿ ತೆರಿಗೆಯಿಂದ ಪಾರಾಗಲು ಇರುವ ಒಂದು ಮಾರ್ಗ ಎಂದು ಒಂದು ಸರಕೆಂದು ಭಾವಿಸುವುದಿದೆ. ಜೊತೆಗೆ ವಾಹನ ಇತ್ಯಾದಿ ಕಾರಣಗಳಿಗೆ ವಿಮಾ ಪಾಲಿಸಿ ಖರೀದಿಸಿ ಪ್ರೀಮಿಯಂಗಳನ್ನು ತುಂಬುತ್ತಾರೆ. ಹೊಸ ಪೀಳಿಗೆಯ ಯುವಕರು ವಿಮೆ ಬದಲು ಮ್ಯೂಚುಯಲ್‌ ಫ‌ಂಡ್‌ಗಳು ಅಥವಾ ಈಕ್ವಿಟಿ ಶೇರುಗಳಲ್ಲಿ ಹೂಡಿ ಬೇಗ ಹಣವನ್ನು ಹೆಚ್ಚಿಸಿಕೊಳ್ಳಲು ಬಯಸುತ್ತಾರೆ.

 ಗ್ರಾಹಕರನ್ನು ಸೆಳೆಯಲು ವಿಮಾ ಕಂಪನಿಗಳು ನಾನಾ ರೀತಿಯ ತಂತ್ರಗಳನ್ನು ಮಾಡುತ್ತಲೇ ಇರುತ್ತವೆ. ನಮ್ಮ ಕಷ್ಟಕಾಲಕ್ಕೆ ನೆರವಾಗುವ ವಿಶ್ವಾಸಾರ್ಹ ಘಟಕಗಳೇ ನಾದರೂ ಇದ್ದರೆ ಅವು ವಿಮಾ ಕಂಪನಿಗಳೆಂದು ಗ್ರಾಹಕರೂ ನಂಬಿದ್ದಾರೆ.

ಈ ಕಾರಣದಿಂದಲೇ ವಿಮಾ ಏಜೆಂಟರ ಮಾತುಗಳನ್ನು ನಂಬಿ, ಅವನು ಹೇಳಿದ ಕಡೆಗೆ ಸಹಿ ಹಾಕಿ, ಪ್ರೀಮಿಯಂ ಅನ್ನು ಕಟ್ಟುತ್ತಾ ಹೋಗುತ್ತೇವೆ. ಆ ಹಣವನ್ನು ತೆಗೆದುಕೊಂಡು ವಿಮಾದಾರರು ಏನು ಮಾಡುತ್ತಾರೆ. ನಮ್ಮ ಹಣಕ್ಕೆ  ಬಡ್ಡಿ, ಅಸಲು ಎಲ್ಲ ಸೇರಿ ಹೇಗೆ ನಮಗೆ ವಾಪಸ್‌ ಬರುತ್ತದೆ ಎಂಬುದರ ಅರಿವು ನಮಗಾಗುವುದಿಲ್ಲ. ಆದರೂ, ಕಟ್ಟಿದ ಹಣ ಏನಾಗುತ್ತದೆ ಎಂಬ ಪ್ರಶ್ನೆ ಮಾತ್ರ ಉಳಿಯುತ್ತದೆ.

ಗ್ರಾಹಕರನ್ನು ಗುರುತಿಸುವುದು ಸವಾಲಿನ ಕೆಲಸ. ಅವರು ಪಾಲಿಸಿ ಖರೀದಿಸುವಂತೆ ಮಾಡುವುದು ಸಾಹಸ. ಇದಕ್ಕಾಗಿ ವಿಮಾ ಏಜೆಂಟ್‌ಗಳು, ಬ್ರೋಕರ್‌ಗಳು, ಪಾರ್ಟನರ್‌ಗಳು, ಡಿಸ್ಟ್ರಿಬ್ಯೂಟರ್‌, ವಿಶಾಲವಾದ ಸಾಮಾಜಿಕ ವೇದಿಕೆ ಮತ್ತು ಕೆಲವೊಮ್ಮೆ ಪತ್ರಿಕೆ ಮತ್ತು ದೃಶ್ಯ ಮಾಧ್ಯಮಗಳನ್ನು ಬಳಸಿಕೊಳ್ಳುತ್ತವೆ. ಜನ ಸಂದಣಿಯು ಹೆಚ್ಚು ಇರುವ ಪ್ರದೇಶಗಳಲ್ಲಿ ಫ್ಲೆಕ್ಸ್‌, ಬ್ಯಾನರ್‌ ಹಾಕುತ್ತವೆ. ಈ ಖರ್ಚನ್ನೆಲ್ಲ ನಾವು ಕಟ್ಟುವ ಪ್ರೀಮಿಯಂ ನಿಂದಲೇ ಭರಿಸುತ್ತವೆ. ಒಬ್ಬ ಗ್ರಾಹಕ ಖರೀದಿಸಿದ ನೂರು ರೂಪಾಯಿ ಪಾಲಿಸಿಯಲ್ಲಿ 15-18 ರೂ.ಗಳನ್ನು ಇದಕ್ಕಾಗಿ ಮೀಸಲಿಡಲಾಗುತ್ತದೆ. 

Advertisement

ಕಂಪನಿಗಳ ಚಾಲನೆ
ನಮ್ಮ ದೇಶದಲ್ಲಿ ಲೆಕ್ಕವಿಲ್ಲದಷ್ಟು ವಿಮಾ ಕಂಪನಿಗಳಿವೆ.  ಸಾವಿರಾರು ಉದ್ಯೋಗಿಗಳು, ಕಂಪನಿ ಕಟ್ಟಡಗಳ ಬಾಡಿಗೆ, ಕರೆಂಟು, ಸಂಬಳ, ಸಾರಿಗೆ, ವಿಮಾ ಕಂಪನಿಗಳು ವಿಶೇಷ ಸಂದರ್ಭದಲ್ಲಿ ನೀಡುವ ಔತಣ ಕೂಟಗಳಿಗೆ ತಗಲುವ ಖರ್ಚು,ಎಲ್ಲವೂ ನಾವು ಕಟ್ಟುವ ಪ್ರೀಮಿಯಂನಲ್ಲಿಯೇ ಅಡಗಿರುತ್ತದೆ. ನೂರು ರೂ. ಆದಾಯ ಬಂದರೆ ಅದರಲ್ಲಿ 10-12 ರೂ. ಇವಕ್ಕೆ ಪಾವತಿಯಾಗುತ್ತದೆ. 

ಮೂಲ ಇಲ್ಲಿದೆ 
ಗ್ರಾಹಕರು ಹೂಡುವ ದೊಡ್ಡಮಟ್ಟದ ಹಣವು ಎಲ್ಲಿ ಹೂಡಿಕೆಯಾಗುತ್ತದೆ ಎಂಬ ಪ್ರಶ್ನೆಯ ಮೂಲ ಇಲ್ಲಿದೆ. ಈಗಾಗಲೇ 100 ರೂ.ನಲ್ಲಿ 25 ರೂ. ಖಾಲಿಯಾಗಿದೆ ಎಂದು ಕೊಂಡರೆ ಉಳಿದ 75 ರೂ. ನಲ್ಲಿ ಎಪ್ಪತ್ತು ರೂಗಳು ಹೂಡಿಕೆಯಾಗುವುದು ಇಲ್ಲಿಯೇ.

ಅದೂ ಎರಡು ಕಾರಣದಿಂದ ನೀವು ಅದರ ಫ‌ಲಾನುಭವಿಯಾಗುತ್ತೀರಾ..
1.    ದುರಂತದಿಂದಾಗುವ ನಷ್ಟಗಳು: ಸಾಮಾನ್ಯವಾಗಿ ಪ್ರಪಂಚಲ್ಲಿ ನಡೆಯುವ ರಸ್ತೆ ಅಪಘಾತಗಳು. ಊಹಿಸಬಹುದಾದ ಅನಾಹುತಗಳಿಗೆ ಸಂಬಂಧಿಸಿದಂತೆ ವಿಮಾ ಕಂಪನಿಯು ಹಣವನ್ನು ಪ್ರತ್ಯೇಕವಾಗಿ ಹೊಂದಿಸಿಟ್ಟುಕೊಂಡಿರುತ್ತದೆ. ಇದರಿಂದ ಫ‌ಲಾನುಭವಿಗೆ ರಕ್ಷಣೆ ದೊರಕುತ್ತದೆ.
2.     ದೀರ್ಘ‌ ಕಾಲದ ದುರಂತ ನಷ್ಟ: ಇದರಲ್ಲಿ ಯಾವುದೇ ಕಂಪನಿಯ ವಿಮೆಯ ಪಾಲಿಸಿಯಲ್ಲಿ ವಿಮೆಗೆ ಪೂರಕವಾದ ಕವಚವನ್ನು (ಕವರ್‌) ಅನ್ನು ಗ್ರಾಹಕ ಖರೀದಿ ಮಾಡಿದ್ದರೆ ಮಾತ್ರ ಉಪಯೋಗಕ್ಕೆ ಬರುತ್ತದೆ. 

ಫ್ಲಸ್‌ ಎಫೆಕ್ಸ್‌
ಕಂಪನಿಯು ಹಣವನ್ನು ಫ‌ಂಡ್‌ ರೂಪದಲ್ಲಿ ಚಿಕ್ಕ ಚಿಕ್ಕ ಪ್ರೀಮಿಯಂಗಳನ್ನೂ ಶೇರ್‌ಗಳನ್ನಾಗಿ ರೂಪಾಂತರಿಸಿ ಬ್ಯಾಂಕು ಅಥವಾ ವಿತ್ತ ಮಾರುಕಟ್ಟೆಯಲ್ಲಿ ಹೂಡಿರುತ್ತದೆ. ಇದು ಕಂಪನಿಯ ಬೆಳವಣಿಗೆಯನ್ನು ಪ್ರತಿನಿಧಿಸುತ್ತದೆ. ಕಂಪನಿಯ ಹೂಡಿಕೆ ಹೆಚ್ಚಾದಂತೆ ಅದರ ಶೇರುಗಳಿಗೂ ಮೌಲ್ಯ ಹೆಚ್ಚುತ್ತಾ ಕಂಪನಿಯು ಸದೃಢವಾಗುತ್ತದೆ.

ಕಂಪನಿಗೆ ಉಳಿದದ್ದು,
ಈಗಾಗಲೇ 25+70=95 ಎಂದು ಭಾವಿಸಿದರೂ ಇನ್ನೂ ನೂರು ರೂ. ನಲ್ಲಿ 5 ರೂ ಎಲ್ಲಿ ಹೋಯಿತು ಎಂದು ಯೋಚಿಸ ತೊಡಗಿದರೆ ಅದನ್ನು ವಿಮಾ ಕಂಪನಿಯ ಆರ್ಥಿಕ ಬೆಳವಣಿಗೆ ಬಳಸಿರುತ್ತಾರೆ.  ಅದರೆ ಒಟ್ಟು ನೂರು ರೂ.ನಲ್ಲಿ ವಿಮಾ ಕಂಪನಿಯ ವಿತ್ತ ಬೆಳವಣಿಗೆಗೆ ಅನುಗುಣವಾಗಿ ಆಯಾ ದೇಶಕ್ಕೆ ತೆರಿಗೆಯನ್ನು ಪಾವತಿಸಬೇಕಾದದ್ದು ಆರ್ಥಿಕ ನಿಯಮ. ಹೀಗಾಗಿ 3-4 ರೂ. ತೆರಿಗೆ ರೂಪದಲ್ಲಿ ನಮ್ಮ ಹಣವೇ ಪಾವತಿಯಾಗುತ್ತದೆ. ಹೀಗಾಗಿ ಒಂದು ವಿಮಾ ಕಂಪನಿಯು ತಮ್ಮ ನೂರು ರೂ. ಪಾಲಿಸಿಯನ್ನು ಗ್ರಾಹಕನಿಗೆ ಕೊಳ್ಳುವಂತೆ ಮಾಡಬೇಕಾದರೆ ಅದರ ಹಿಂದೆ ವಿವಿಧ ಮಜಲಿನ ಪ್ರಕ್ರಿಯೆಗಳು ನಡೆಯುತ್ತವೆ. 

ನಿಮಗಿದು ತಿಳಿದಿರಲಿ
1.    ವಿಮೆಯಲ್ಲಿ ಅನೇಕ ಮಾದರಿಗಳಿವೆ. ಕೆಲವೊಂದು ಅಪ್‌ಡೇಟ್‌ ಆಗಿರಬಹುದು ಹೀಗಾಗಿ,  ತಾವು ಖರೀದಿ ಮಾಡಲಿಚ್ಚಿಸುವ ಪಾಲಿಸಿ ಬಗ್ಗೆ ಪೂರ್ಣ ಮಾತಿ ತಿಳಿಯುವುದು ಸೂಕ್ತ
2.     ವಿಮಾ ಕಂತುಗಳ ಅವಧಿ, ನಿಮ್ಮ ವಯಸ್ಸು, ಪ್ರೀಮಿಯಂ ಗಾತ್ರ,  ಬರುವ ಮೊತ್ತ ಎಲ್ಲವನ್ನು ಸರಿಯಾಗಿ ಲೆಕ್ಕ ಹಾಕುವುದು ಒಳ್ಳೆಯದು
3.     ವಿಮಾ ಪ್ರೀಮಿಯಂ ಕಂತುಗಳನ್ನು ಕಟ್ಟುವುದು ಮಧ್ಯಕ್ಕೆ ನಿಲ್ಲಿಸಿ ವಿಮಾ ಕಂಪನಿಗಳಿಗೆ ನೀವು ಕಟ್ಟಿರುವ ಹಣವನ್ನು ಲಾಭವಾಗುವಂತೆ ಮಾಡದಿರಿ.
4.     ಕೆಲವು ಕಂಪನಿಗಳಲ್ಲಿ ಪ್ರೀಮಿಯಂ ಕಟ್ಟುವುದು ಮಧ್ಯಕ್ಕೆ ನಿಲ್ಲಿಸಿದರೂ ಮತ್ತೆ ಮುಂದುವರಿಸುವ ಆಯ್ಕೆ ಇರುತ್ತದೆ ಅವುಗಳ ಬಗ್ಗೆ ತಿಳಿದುಕೊಳ್ಳಿ
5.    ವಿಮಾ ಕಂಪನಿಗಳು ಸಾಮಾನ್ಯವಾಗಿ ಪಾಲಿಸಿಗಳನ್ನು ಮಾರುವಾಗ ವಿಮಾದಾರ ಪೂರ್ಣ ಮಾಹಿತಿಯನ್ನು ನೀಡುವುದಿಲ್ಲ ಎಂಬ ಆರೋಪ ಮೊದಲಿನಿಂದಲೂ ಇದೆ. 

Advertisement

Udayavani is now on Telegram. Click here to join our channel and stay updated with the latest news.

Next