Advertisement

ಕಾಫಿಗೆ ತಾರುಣ್ಯ ತುಂಬಿದವನು ಎಲ್ಲ ಬಿಟ್ಟು ಎಲ್ಲಿಗೆ ಹೋದ ?

03:36 PM Jul 30, 2019 | Nagendra Trasi |

ಮಣಿಪಾಲ : ಘಮ ಘಮ ಎನ್ನುವ ಕಾಫಿಗೊಂದು ತಾರುಣ್ಯವನ್ನು ತುಂಬಿದವನ ನಾಪತ್ತೆ ಬಗ್ಗೆಯೇ ಎಲ್ಲೆಲ್ಲೂ ಚರ್ಚೆ ಹೊಸ ತಲೆಮಾರಿನ (ಜೆನ್‌ ನೆಕ್ಸ್ಟ್) ಕಾಫಿಯನ್ನು ಹುಟ್ಟು ಹಾಕಿ ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಜನಪ್ರಿಯಗೊಳಿಸಿದ ಕೆಫೆ ಕಾಫಿ ಡೇನ ಜನಕ ವಿ.ಜಿ. ಸಿದ್ಧಾರ್ಥ್ ಸೋಮವಾರ ಮಂಗಳೂರಿನ ನೇತ್ರಾವತಿ ನದಿ ಬಳಿ ನಿಗೂಢವಾಗಿ ನಾಪತ್ತೆಯಾಗಿದ್ದಾರೆ. ಈ ಸುದ್ದಿ ಬಯಲಾದ ತಕ್ಷಣವೇ ಟ್ವಿಟ್ಟರ್‌ನಲ್ಲಿ ಕಾಫಿಗೊಂದು ತಾರುಣ್ಯ ತುಂಬಿದವನ ಗ್ರಾಹಕರು ತಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳುತ್ತಿದ್ದಾರೆ.

Advertisement

ಅದೊಂದು ರೀತಿಯಲ್ಲಿ ತೆರೆದು ಇಡುತ್ತಿರುವುದು ಸಿದ್ಧಾರ್ಥ ಕಟ್ಟಿದ ಸಾಮ್ರಾಜ್ಯವನ್ನು. ಒಂದು ಬ್ರಾಂಡ್ ಮೂಲಕ ಯುವಜನರ ಮನವನ್ನು ತಟ್ಟಿದ್ದ ವಿ.ಜಿ. ಸಿದ್ಧಾರ್ಥ್ ನ ಪರಿಚಯ ಲಕ್ಷಾಂತರ ಗ್ರಾಹಕರಿಗಿಲ್ಲ. ಆದರೆ ಅವರೆಲ್ಲರಿಗೂ ಸಿದ್ಧಾರ್ಥರ ಕಾಫಿಯ ಪರಿಚಯ ಚೆನ್ನಾಗಿದೆ. ಕಾಫಿ ಪ್ರಿಯ
ಟ್ವೀಟಿಗರೊಬ್ಬರು, ಇದೊಂದು ಬಹಳ ದುಃಖದ ದಿನ. ಭಾರತದ ಬ್ರ್ಯಾಂಡೊಂದನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಟ್ಟಿ ಬೆಳೆಸಿದವನು ಇಂದು ಕಾಣ ಸಿಗುತ್ತಿಲ್ಲ ಎಂದು ಬರೆದು ಬೇಸರ ವ್ಯಕ್ತಪಡಿಸಿದ್ದಾರೆ.

ಮತ್ತೂಬ್ಬರು ಈ ಅಭಿಪ್ರಾಯವನ್ನು ಮತ್ತಷ್ಟು ವಿಸ್ತರಿಸಿ, ಯಾರು ನಮಗೆ ಕಾಫಿ ಸಂಸ್ಕೃತಿಯನ್ನು ಪರಿಚಯಿಸಿದರೋ ಅವರೇ ಇಂದು ಕಾಣುತ್ತಿಲ್ಲ ಎಂದು ತಿಳಿಸಿದ್ದಾರೆ. ಮತ್ತೂಬ್ಬ ಟ್ವೀಟಿಗರು, ಚಹಾ ಕುಡಿಯುತ್ತಿದ್ದ ದೇಶಕ್ಕೆ ಕಾಫಿಯ ಪರಿಮಳವನ್ನು ಹರಿಸಿದ ಉತ್ಸಾಹಿಯೇ ಇಂದು ನಾಪತ್ತೆಯಾಗಿರುವುದು ದುಃಖದ ಸಂಗತಿ. ಇದು ಭಾರತದ ಉದ್ಯಮ ಕ್ಷೇತ್ರಕ್ಕೆ ದುಃಖದ ದಿನ’ ಎಂದಿದ್ದಾರೆ.

ಇನ್ನು ಕೆಲವು ಕಾಫಿ ಪ್ರಿಯರು, 50 ಸಾವಿರ ಮಂದಿಗೆ ಉದ್ಯೋಗ ಕೊಟ್ಟವರು ಯಾಕೆ ಹೀಗಾದರು ಎಂದು ಬೇಸರವನ್ನೂ ಹೊರ ಹಾಕಿದ್ದಾರೆ. ಅವರ ಕರ್ನಾಟಕದ ಬಗೆಗಿನ ಪ್ರೀತಿಯನ್ನೂ ಒಬ್ಬ ಟ್ವೀಟಿಗರು, ಯಾವುದೇ ಕೆಫೆ ಡೇ ಮಳಿಗಗೂ ಹೋದರೂ ಅಲ್ಲಿ ಒಬ್ಬ ಚಿಕ್ಕಮಗಳೂರಿನವನನ್ನೋ, ಶಿವಮೊಗ್ಗನವನನ್ನೋ, ಹಾಸನದವನನ್ನೋ, ದಕ್ಷಿಣ ಕನ್ನಡದವನನ್ನೋ ಕಾಣಬಹುದಿತ್ತು. ಅದಕ್ಕೆ ಕಾರಣವೆಂದರೆ ಸಿದ್ಧಾರ್ಥರ ತಾಯ್ನಾಡಿನ ಬಗೆಗಿನ ಪ್ರೀತಿ ಎಂದು ಶ್ಲಾ ಸಿದ್ದಾರೆ.

Advertisement

ಸಿದ್ದಾರ್ಥ ಅವರು ತಾವು ಬರೆದಿಟ್ಟ ಪತ್ರದಲ್ಲಿ ಕೆಲವು ಐಟಿ ಅಧಿಕಾರಿಗಳ ಕಿರುಕುಳ ತಾಳಲಾಗುತ್ತಿಲ್ಲ ಎಂದಿದ್ದರು. ಅದನ್ನೂ ಉಲ್ಲೇಖೀಸಿರುವ ಟ್ವೀಟಿಗರೊಬ್ಬರು, ರೆಡ್‌ ಟೇಪಿಸಂ ಗೆ ಮತ್ತೂಬ್ಬ ಉದ್ಯಮಿ ಬಲಿಯಾಗಿದ್ದಾರೆ ಎನ್ನಬಹುದು. ಈಗಲಾದರೂ ಮೋದಿಯವರು ಗಮನ ಹರಿಸಬೇಕೂ ಎಂದು ಹೇಳಿದ್ದಾರೆ.

ನಾನು ಮೂಲತಃ ಆಶಾವಾದಿ. ಆದರೂ ಈ ಪತ್ರ ನೋಡಿ ಚಿಂತೆಗೀಡಾದೆ. ಈ ಮನುಷ್ಯ 50 ಸಾವಿರ ಉದ್ಯೋಗವನ್ನಷ್ಟೇ ಸೃಷ್ಟಿಸಲಿಲ್ಲ. ಅಂತಾರಾಷ್ಟ್ರೀಯ ಪೇಯ ಬ್ರಾಂಡ್ ಗಳಿಗೆ ಪ್ರಬಲವಾದ ಪೈಪೋಟಿ ಕೊಟ್ಟವರು ಎಂದು ಸಿದ್ದಾರ್ಥ ಸಾಧನೆಯನ್ನು ಸ್ಮರಿಸಿದ್ದಾರೆ. ಮತ್ತೂಬ್ಬ ಕಾಫಿ ಪ್ರಿಯರೊಬ್ಬರು, ಕೆಫೆ ಕಾಫಿ ಡೇ ಬಹಳ ಯಶಸ್ಸಿನ ಕಥೆ. ಆದರೆ ಅದರ ಜನಕ ಯಾಕೆ ಅದನ್ನು ಸೋಲು ಎಂದುಕೊಂಡರೋ ತಿಳಿಯುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ. ಎಲ್ಲ ಕಾಫಿ ಪ್ರಿಯರ ಒಂದೇ ಮಾತೆಂದರೆ, ಕಾಫಿಗೆ ಸುಂದರ ತಾರುಣ್ಯವನ್ನು ತುಂಬಿದವ ಎಲ್ಲಿಗೆ ಹೋದ ಎಂಬುದು…

Advertisement

Udayavani is now on Telegram. Click here to join our channel and stay updated with the latest news.

Next