Advertisement
200 ಶತಕೋಟಿ ಡಾಲರ್ ನಷ್ಟಎಲಾನ್ ಮಸ್ಕ್ ಅವರ ಎಲೆಕ್ಟ್ರಿಕ್ ಕಾರು ಕಂಪೆನಿ ಟೆಸ್ಲಾ, ಅತ್ಯಂತ ಲಾಭದಾಯಕ ಕಂಪೆನಿಯಾಗಿತ್ತು. ಹೀಗಾಗಿ 2021ರ ನವೆಂಬರ್‌ನಲ್ಲಿ ಈ ಕಂಪೆನಿಯಿಂದಾಗಿಯೇ ಎಲಾನ್ ಮಸ್ಕ್ ಅವರ ಒಟ್ಟಾರೆ ಸಂಪತ್ತು 340 ಬಿಲಿಯನ್ ಡಾಲರ್‌ಗೆ ಏರಿಕೆಯಾಗಿತ್ತು. ಅಲ್ಲದೆ ಅದೇ ವರ್ಷದ ಜನವರಿಯಲ್ಲಿ ಮಸ್ಕ್, ಅಮೆಜಾನ್ ಕಂಪೆನಿಯ ಜೆಫ್ ಬೆಜೋಸ್ ಅವರನ್ನು ಹಿಂದಕ್ಕೆ ಹಾಕಿ ಜಗತ್ತಿನ ನಂ.1 ಖ್ಯಾತಿಗೆ ಒಳಗಾಗಿದ್ದರು. ಆದರೆ ಈ ವರ್ಷ ಟೆಸ್ಲಾದ ಷೇರುಗಳ ಮೌಲ್ಯ ಶೇ.65ರಷ್ಟು ಕುಸಿತವಾಗಿದ್ದು, ಹೀಗಾಗಿ ಮಸ್ಕ್ ಆಸ್ತಿ ಕರಗಿದೆ. ಸದ್ಯ ಜಗತ್ತಿನ ಶ್ರೀಮಂತರಲ್ಲಿ ಎರಡನೇ ಸ್ಥಾನಕ್ಕೆ ಇಳಿದಿದ್ದಾರೆ.
ಫೋರ್ಬ್ಸ್ ನೀಡಿರುವ ಮಾಹಿತಿ ಪ್ರಕಾರ, ರವಿವಾರದ ಲೆಕ್ಕಾಚಾರದಂತೆ ಮಸ್ಕ್ 146 ಬಿಲಿಯನ್ ಡಾಲರ್‌ನಷ್ಟು ಆಸ್ತಿ ಮೌಲ್ಯ ಹೊಂದಿದ್ದಾರೆ. ಮೊದಲ ಸ್ಥಾನದಲ್ಲಿ ಫ್ರಾನ್ಸ್‌ನ ಬರ್ನಾರ್ಡ್ ಅರ್ನಾಲ್ಟ್ ಆ್ಯಂಡ್ ಫ್ಯಾಮಿಲಿ ಇದೆ. ಇವರ ಆಸ್ತಿ ಮೌಲ್ಯ 179 ಬಿಲಿಯನ್ ಡಾಲರ್. ಮೂರನೇ ಸ್ಥಾನದಲ್ಲಿ ಭಾರತದ ಗೌತಮ್ ಅಂಬಾನಿ ಅವರಿದ್ದು, 127 ಬಿಲಿಯನ್ ಡಾಲರ್‌ನಷ್ಟು ಸಂಪತ್ತು ಹೊಂದಿದ್ದಾರೆ.