ಲವಲವಿಕೆಯಿಂದಿದ್ದ ಬಡಾವಣೆಯಲ್ಲಿ ಸಹೃದಯ ನೆರೆಹೊರೆಯವರೂ ಇದ್ದು ಆರಾಮವಾಗಿದ್ದೆವು. ಬೆಳಗಾಗುತ್ತಿದ್ದಂತೆ ಹಿಂದಿನ ಮನೆ ಬೀದಿಯಲ್ಲಿ ಸೈಕಲ್ ಟ್ರಿಣ್‌ಗುಟ್ಟಿದರೆ ಹಾಲಿನವನು ಬಂದ ಎಂದು ಅರ್ಥ. ಪಾತ್ರೆ ರೆಡಿ ಮಾಡಿಕೊಳ್ಳುವಷ್ಟರಲ್ಲಿ ಮನೆ ಮುಂದೆ ಆತ ಬರುತ್ತಿದ್ದ. ಇನ್ನು ಸ್ವಲ್ಪ ಹೊತ್ತಿನಲ್ಲಿ “ಮೊಲ್ಲೇ ಮರ್ಲೆಜಾಜಿ ಹೂವೇ’ ಎಂದು ಕೂಗುತ್ತ ತನ್ನ ತಲೆಯಲ್ಲಿ ಬಿದಿರಿನ ದೊಡ್ಡ ತಟ್ಟೆಯನ್ನು ಇರಿಸಿಕೊಂಡು ಹೂ ಮಾರುವ ಅಜ್ಜಿಯ ಸರದಿ. ಅಷ್ಟರಲ್ಲಿ ಸೈಕಲ್‌ನಲ್ಲಿ ಬರುವ ಪೇಪರ್ ಹಾಕುವ ಹುಡುಗನು ಪೇಪರ್ ಅನ್ನು ಸುರುಟಿ ಕೊಳವೆಯಂತೆ ಮಾಡಿ, ಕೆಳಗಡೆಯಿಂದಲೇ ನಮ್ಮ ಬಾಲ್ಕನಿಗೆ ಎಸೆಯುತ್ತಿದ್ದ.
Advertisement
ಇನ್ನೂ ಏಳು ಗಂಟೆ ಆಗುವಷ್ಟರಲ್ಲಿ ದಂಟೀನ್ ಸೊಪ್ಪು , ಪಾಲಕ್ ಸೊಪ್ಪು, ಮೆಂತ್ಯ ಸೊಪ್ಪು ಎಂದು ರಾಗವಾಗಿ ಹಾಡುತ್ತ ತರಕಾರಿ ಗಾಡಿಯನ್ನು ತಳ್ಳುತ್ತ ಮಹಿಳೆಯೊಬ್ಬರು ಬರುತ್ತಿದ್ದರು. ಹಿಂದಿನ ಬೀದಿಯಲ್ಲಿ ಅವರ ದನಿ ಕೇಳಿಸಿದೊಡನೆ, ನಮ್ಮ ಎರಡು ವರ್ಷದ ಮಗ ಅದನ್ನು ಅನುಕರಿಸಿ ತಾನೂ “ಸೊಪ್ಪಿನ ಹಾಡು’ ಹಾಡುತ್ತಿದ್ದ. ಇದಾದ ಮೇಲೆ “ಹಳೆ ಪಾತ್ರೆ ಹಳೇ ಪೇಪರ್’ ಎನ್ನುವ ವ್ಯಾಪಾರಿ, ರಂಗೋಲಿ ಪುಡಿ ಮಾರುವವಳು, ಆಯಾ ಸೀಸನ್‌ನಲ್ಲಿ ಕರಬೂಜ, ಸೀಬೆ ಹಣ್ಣು, ಮಾವಿನಹಣ್ಣು, ಕಡಲೇಕಾಯಿ ಮಾರುವವರು… ಇವರೂ ತಮ್ಮ ತಳ್ಳುಗಾಡಿಗಳ ಸಮೇತ ಪ್ರತ್ಯಕ್ಷವಾಗುತ್ತಿದ್ದರು. ಒಂದಿಬ್ಬರು ಬೆಳೆಗಾರರು ತಾವು ಬೆಳೆಸಿದ ತರಕಾರಿಗಳನ್ನು ಚೀಲಗಳಿಗೆ ತುಂಬಿಸಿ, ಸೈಕಲ್‌ನಲ್ಲಿ ಮನೆ ಮುಂದೆ ಮಾರುತ್ತ ಬರುತ್ತಿದ್ದರು.
Related Articles
Advertisement
“ಗಡ್ಡೆ ಕೋಸು ಇದ್ಯಾ’ ಎಂದು ವಿಚಾರಿಸುತ್ತಾರೆ ಇನ್ನೊಬ್ಬರು. “ನಿನ್ನೆ ಇತ್ತು ಅಕ್ಕ. ಈವತ್ತಿಲ್ಲ, ನಾಳೆ ತತೇìನೆ. ಈ ನಡುವೆ ನೀವು ತರಕಾರಿಗೆ ಬರೋದೇ ಇಲ್ಲ, ಬೀಟ್‌ರೂಟ್ ತೊಗೊತೀರಾ? ಈವತ್ತೇ ಕಿತ್ತಿದ್ದು , ತ್ವಾಟದಿಂದೆÉà ಬಂದೆ. ಹೂಕೋಸು ಹಾಕಿವ್ನಿ. ಮುಂದಿನ್ವಾರ ತರ್ತೀನಿ’ ಇತ್ಯಾದಿ ಮಾತು ಸಾಗುತ್ತದೆ. ಗಡ್ಡೆ ಕೋಸು ಕೇಳಿದವರು, ಬೀಟ್‌ರೂಟ್ ಕೊಂಡು ವಾಪಸಾಗುತ್ತಾರೆ. ಅವರು ತಂದಿರೋ ದುಡ್ಡು ಸ್ವಲ್ಪ ಕಡಿಮೆಯಿರುತ್ತದೆ. “ಅಯ್ಯೊ ನಾಳೆ ಕೊಡುವಿರಂತೆ’ ಎಂದು ಇವನೇ ಸಮಜಾಯಿಷಿ ಹೇಳುತ್ತಾನೆ.
ನಮ್ಮ ಮಗ ಚಿಕ್ಕವನಿ¨ªಾಗ ಅವನಿಗೆ ಬೇಯಿಸಿದ ನೇಂದ್ರಬಾಳೆ ಹಣ್ಣನ್ನು ಹೆಚ್ಚಿ ಕೊಟ್ಟರೆ ಇಷ್ಟಪಟ್ಟು ತಿನ್ನುತಿದ್ದ. ಮೈಸೂರಿನಲ್ಲಿ ಎÇÉಾ ಹಣ್ಣಿನ ಅಂಗಡಿಗಳಲ್ಲಿ ಕೇರಳದ ನೇಂದ್ರ ಬಾಳೆಹಣ್ಣು ಸಿಗುತ್ತಿರಲಿಲ್ಲವಾದುದರಿಂದ ಬೀದಿಯಲ್ಲಿ ಬಾಳೆಹಣ್ಣು ಮಾರುತ್ತಿದ್ದ ಅಜ್ಜ ಒಬ್ಬರನ್ನು ಪರಿಚಯಿಸಿಕೊಂಡು ನಮಗೆ ವಾರಕ್ಕೆ ಒಂದು ಚಿಪ್ಪು ನೇಂದ್ರ ಬಾಳೆಹಣ್ಣು ತಂದುಕೊಡಬೇಕೆಂದು ಒಪ್ಪಂದ ಮಾಡಿಕೊಂಡಿ¨ªೆವು. ಆ ಅಜ್ಜ ತಪ್ಪದೇ ಹಣ್ಣು ತರುತ್ತಿದ್ದರು. ನನ್ನ ಮಗನೂ ತನಗೆ ಆ ತಾತ ಬಹಳ ಪರಿಚಯದವರೇನೋ ಎಂಬಂತೆ ಅವರ ಬಳಿ ನಗುನಗುತ್ತಾ ತೊದಲು ಮಾತನಾಡುತ್ತಿದ್ದ. ಅಷ್ಟರಲ್ಲಿ ನಾನು ಚಹಾ ಕೊಡುತ್ತಿ¨ªೆ. ಅದನ್ನು ಕುಡಿದು “ಟೀ ಚನ್ನಾಗೈತೆ ಮಗಾ’ ಎಂದು ಹೇಳಿ ಅಜ್ಜ ಹೊರಡುತ್ತಿದ್ದರು.
ನಗರ ಪ್ರದೇಶದ ಕೆಲವು ಬಡಾವಣೆಗಳಲ್ಲಿ ಈ ರೀತಿಯ ವ್ಯಾಪಾರ-ಸಂಸ್ಕೃತಿ ಈಗಲೂ ಇದೆ. ಆದರೆ, ಮಾಲ್‌ಗಳಲ್ಲಿ, ಗ್ರಾಹಕರಾದ ನಾವೇ ಗಾಡಿಯನ್ನು ತಳ್ಳುತ್ತ ನಮಗೆ ಬೇಕಾದುದನ್ನು ಗಾಡಿಗೆ ಹಾಕಿಕೊಳ್ಳುತ್ತೇವೆ. ಗೃಹಿಣಿಯರ ಶ್ರಮ ಕಡಿಮೆ ಮಾಡಲು ಕತ್ತರಿಸಿದ ಬೀನ್ಸ್, ಸುಲಿದ ಬೆಳ್ಳುಳ್ಳಿ, ಹೆಚ್ಚಿದ ಕ್ಯಾಬೇಜ್ ಕೂಡ ಸಿಗುತ್ತವೆ. ಬೇಕಿದ್ದನ್ನು ಕೊಂಡು ಮಾತಿಲ್ಲದೆ ನಿಗದಿತ ದುಡ್ಡನ್ನು ಕಾರ್ಡ್ ಸ್ವೆ„ಪ್ ಮಾಡಿ ಅಥವಾ ಕ್ಯಾಶ್ ಕೊಟ್ಟು ಬಂದರೆ ಕೌಂಟರ್‌ನಲ್ಲಿ ಕುಳಿತವರು ನಿರ್ಭಾವುಕತೆಯಿಂದ “ಥ್ಯಾಂಕ್ಸ್ ‘ ಅನ್ನುತ್ತಾರೆ. ಅಲ್ಲಿಗೆ ಮುಗಿಯಿತು ಶಾಪಿಂಗ್.
ಹೊಸ ಪದ್ಧತಿಗಳಿಗೆ ಕೆಲವು ಅನುಕೂಲತೆಗಳು ಇವೆ. ಆದರೂ ಮನುಷ್ಯ ಮನುಷ್ಯನೇ, ಯಂತ್ರ ಯಂತ್ರವೇ. ಎಲ್ಲಿ ಹೋದುವು ತಳ್ಳು ಗಾಡಿಗಳು, ಅವುಗಳ ಒಡೆಯರು, ಅವರ ಮಾತುಗಳು ಮತ್ತು ಗಾರ್ಡನ್ ಫ್ರೆಶ್ ತರಕಾರಿಗಳು?
– ಹೇಮಮಾಲಾ ಬಿ.