Advertisement

ಇಚ್ಛಾಶಕ್ತಿ ಇದ್ದಾಗ ಉತ್ತಮ ಕೆಲಸ ಸಾಧ್ಯ

01:30 PM Mar 06, 2018 | Team Udayavani |

ಉಪ್ಪಿನಂಗಡಿ: ಜನಹಿತ ಗಮನದಲ್ಲಿಟ್ಟು ಇಚ್ಛಾಶಕ್ತಿಯೊಂದಿಗೆ ಮುಂದುವರಿದಾಗ ಉತ್ತಮ ಕೆಲಸ ಮಾಡಲು ಸಾಧ್ಯ ಎಂಬುದಕ್ಕೆ ಉಪ್ಪಿನಂಗಡಿ ಗ್ರಾ.ಪಂ.ಕಟ್ಟಡ ಸಾಕ್ಷಿ. ಆತ್ಮಸಾಕ್ಷಿಗೆ ಅನುಗುಣವಾಗಿ ನಾವೆಲ್ಲ ಕೆಲಸ ಮಾಡಬೇಕು ಎಂದು ಸಚಿವ ಬಿ.ರಮಾನಾಥ ರೈ ತಿಳಿಸಿದರು.

Advertisement

ಸುಮಾರು 2 ಕೋ.ರೂ.ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಉಪ್ಪಿನಂಗಡಿ ಗ್ರಾ.ಪಂ.ನ ಕಟ್ಟಡವನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.

ಪಂಚಾಯತ್‌ಗಳು ಅಭಿವೃದ್ಧಿ ಹೊಂದಿದಾಗ ಗ್ರಾಮದ ಅಭಿವೃದ್ಧಿ ಸಾಧ್ಯ,ಆಗ ದೇಶದ ಅಭಿವೃದ್ಧಿಯೂ ಸಾಧ್ಯ.ಕಷ್ಟ ಎಂದು ಕೈಕಟ್ಟಿ ಕುಳಿತಿದ್ದರೆ ಗ್ರಾಮಕ್ಕೊಂದು ಭವ್ಯ ಪಂಚಾಯತ್‌ ಕಟ್ಟಡ ನಿರ್ಮಾಣವಾಗುತ್ತಿರಲಿಲ್ಲ.ಈ ಕಾರ್ಯ ಶ್ಲಾಘನೀಯ ಎಂದರು.

ಸಭಾಂಗಣ ಉದ್ಘಾಟಿಸಿದ ಶಾಸಕಿ ಶಕುಂತಳಾ ಟಿ.ಶೆಟ್ಟಿ ಮಾತನಾಡಿ, ಮನಸ್ಸಿದರೆ ಮಾರ್ಗ ಎಂಬ ಗಾದೆಗೆ ಪೂರಕವಾಗಿ ಶ್ವೇತ ಭವನದಂತಹ ಕಟ್ಟಡ ಉಪ್ಪಿನಂಗಡಿಯಲ್ಲಿ ಇಂದು ಲೋಕಾರ್ಪಣೆಗೊಂಡಿದೆ ಎಂದರು.

ಗ್ರಾಮ ಕಚೇರಿ ಉದ್ಘಾಟಿಸಿದ ಪುತ್ತೂರು ತಾ.ಪಂ. ಅಧ್ಯಕ್ಷೆ ಭವಾನಿ ಚಿದಾನಂದ ಮಾತನಾಡಿ, ಗ್ರಾ.ಪಂ.ಕಟ್ಟಡ ಸಾಮರಸ್ಯದ ಮಂದಿರದಂತಿದೆ. ಪಂಚಾಯತ್‌ ಮಾದರಿ ಅಭಿವೃದ್ಧಿ ಹೊಂದಲಿ ಎಂದು ಶುಭ ಹಾರೈಸಿದರು.

Advertisement

ಒಂದೇ ಸೂರಿನಡಿ ಸರ್ವ ಸೇವೆ ಅಧ್ಯಕ್ಷತೆ ವಹಿಸಿದ್ದ ಉಪ್ಪಿನಂಗಡಿ ಗ್ರಾ.ಪಂ.ಅಧ್ಯಕ್ಷ ಅಬ್ದುರ್ರಹ್ಮಾನ್‌ ಕೆ. ಮಾತನಾಡಿ, ಸಾರ್ವಜನಿಕರಿಗೆ ಎಲ್ಲ ಸರಕಾರಿ ಸೇವೆಗಳು ಒಂದೇ ಸೂರಿನಡಿ ಸಿಗಬೇಕೆಂಬ ಮಹತ್ವದ ಉದ್ದೇಶವನ್ನಿಟ್ಟುಕೊಂಡು ಈ ಭವ್ಯ ಕಟ್ಟಡವನ್ನು ಅಂದಾಜು 2 ಕೋ.ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ. ಉದ್ಯೋಗ ಖಾತರಿ ಯೋಜನೆಯಡಿ ಈ ಕಟ್ಟಡಕ್ಕೆ 14 ಲಕ್ಷ ರೂ. ಬಂದಿದ್ದು, ಇದರಲ್ಲಿ ಗೋದಾಮು ನಿರ್ಮಿಸಲಾಗಿದೆ. ಉಳಿದ ಎಲ್ಲ ಹಣವನ್ನು ಗ್ರಾ.ಪಂ.ನ ಸ್ವಂತ ನಿಧಿಯಿಂದ ಭರಿಸಲಾಗಿದೆ ಎಂದರು. ದ.ಕ.ಜಿ.ಪಂ.ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಗೋದಾಮು ಕಟ್ಟಡ ಉದ್ಘಾಟಿಸಿದರು.

ಗ್ರಾ.ಪಂ.ಅಧ್ಯಕ್ಷ ಅಬ್ದುರ್ರಹ್ಮಾನ್‌ ಕೆ.,ಉಪಾಧ್ಯಕ್ಷೆ, ಪಿಡಿಒ, ಗುತ್ತಿಗೆದಾರ, ವಾಸುಶಿಲ್ಪಿಗಳನ್ನು ಸಮ್ಮಾನಿಸಲಾಯಿತು.
ತಾ.ಪಂ.ಉಪಾಧ್ಯಕ್ಷೆ ರಾಜೇಶ್ವರಿ, ದ.ಕ. ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಕೆ.ಶಾಹುಲ್‌ ಹಮೀದ್‌,
ಜಿ.ಪಂ.ಸದಸ್ಯೆ ಶಯನಾ ಜಯಾನಂದ್‌,ತಾ.ಪಂ.ಸದಸ್ಯೆ ಸುಜಾತಾ ಕೃಷ್ಣ,ಉಪ್ಪಿನಂಗಡಿ ಗ್ರಾ.ಪಂ.ಉಪಾಧ್ಯಕ್ಷೆ ಹೇಮ ಲತಾ ಶೆಟ್ಟಿ, ತಾ.ಪಂ.ಇಒ ಜಗದೀಶ್‌ ಎಸ್‌.,ಪಂ.ರಾಜ್‌ ಎಂಜಿನಿಯರಿಂಗ್‌ ಇಲಾಖೆಯ ಕಾ.ನಿ.ಎಂಜಿನಿಯರ್‌ ರೋಹಿದಾಸ, ಉ.ಖಾ.ಯೋಜನೆಯ ಸ.ನಿರ್ದೇಶಕ ನವೀನ್‌ ಭಂಡಾರಿ, ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಸ್ಥಾನದ ಆಡಳಿತ ಮೊಕ್ತೇಸರ ರಘುನಾಥ ರೈ, ಮಾಲೀಕ್‌ ದಿನಾರ್‌ ಜುಮಾ ಮಸೀದಿಯ ಅಧ್ಯಕ್ಷ ಹಾಜಿ ಮುಸ್ತಾಫ‌ ಕೆಂಪಿ, ಉಪ್ಪಿನಂಗಡಿ ದೀನರ ಕನ್ಯಾಮಾತೆ ದೇವಾಲಯದ ರೆ|ಫಾ| ರೋನಾಲ್ಡ್‌ ಪಿಂಟೋ, ಉಪ್ಪಿನಂಗಡಿ ಶ್ರೀ ಲಕ್ಷ್ಮೀವೆಂಕಟ್ರಮಣ ದೇವಸ್ಥಾನದ ಆಡಳಿತ ಮೊಕ್ತೇಸರ ಗಣೇಶ್‌ ಶೆಣೈ, ಪುಡಾ ಅಧ್ಯಕ್ಷ ಪ್ರಸಾದ್‌ ಕೌಶಲ್‌ ಶೆಟ್ಟಿ, ನಿರ್ಮಾಣ್‌ ಆರ್ಕಿಟೆಕ್ಟ್ ನ ಸಚ್ಚಿದಾನಂದ, ಗುತ್ತಿಗೆದಾರ ಬಿ. ಅಬ್ದುಲ್‌ ಖಾದರ್‌ ಉಪಸ್ಥಿತರಿದ್ದರು.
ಅಬ್ದುಲ್ಲಾ ಅಸಫ್ ಸ್ವಾಗತಿಸಿ, ಶಾರದಾ ವಂದಿಸಿದರು. ಶಿಕ್ಷಕಿ ಪುಷ್ಪಾ ತಿಲಕ್‌ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next