ಭಾಲ್ಕಿ: ಪ್ರಾಪಂಚಿಕ ವ್ಯವಹಾರದಲ್ಲಿರುವ ವ್ಯಾಮೋಹ ಬದಿಗೊತ್ತಿ ಪರಮಾತ್ಮನ ಮೇಲೆ ಭಕ್ತಿ ಬೆಳೆಸಿಕೊಂಡಾಗ ನಮ್ಮ ಜೀವನ ಸಾರ್ಥಕವಾಗುತ್ತದೆ ಎಂದು ಗುರುದೇವಾಶ್ರಮ ಬೀದರಿನ ಶ್ರೀ ಗಣೇಶಾನಂದ ಮಹಾರಾಜರು ಹೇಳಿದರು.
ಬ್ಯಾಲಹಳ್ಳಿ(ಕೆ) ಗ್ರಾಮದ ಶ್ರೀ ಶಿವಾನಂದ ಕೈಲಾಸ ಆಶ್ರಮದಲ್ಲಿ ಗುರುವಾರ ಸದ್ಗುರು ಶ್ರೀಸಿದ್ಧಾರೂಢರ ಮೂರ್ತಿ ಪ್ರತಿಷ್ಠಾಪನೆಯ 6ನೇ ವಾರ್ಷಿಕೋತ್ಸವ ಹಾಗೂ ಶಿವನಾಂದ ಸ್ವಾಮಿಗಳು ಮತ್ತ ಸಚ್ಚಿದಾನಂದ ಮಹಾಸ್ವಾಮಿಗಳ ಪುಣ್ಯಾರಾಧನೆ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ನಾವು ಪ್ರಪಂಚಕ್ಕಾಗಿ ಎಷ್ಟೇ ತ್ಯಾಗ ಮಾಡಿದರೂ, ಸಂತರ ಕೃಪೆ ಪಡೆಯುವುದು ಅತ್ಯವಶ್ಯಕವಾಗಿದೆ ಎಂದರು. ಸಂತರ ಸಂಗಕ್ಕೆ ಎಂದಿಗೂ ಬೇಸರ ಪಡಬಾರದು.
ನಾವು ಪ್ರಾಪಂಚಿಕ ವಸ್ತು ಗಳಿಸಲು ಯಾವುತ್ತು ಬೇಸರ ಪಡುವುದಿಲ್ಲ. ಆದರೆ ಪರಮಾತ್ಮನನ್ನು ಪಡೆಯಲು ಬೇಸರ ಪಡುತ್ತೇವೆ. ದೇವರ ಧ್ಯಾನ, ಪೂಜೆ ಮಾಡಲು ನಮಗೆ ಸಮಯವಿಲ್ಲ. ನಾವು ಮನುಷ್ಯರಾಗಿ ಹುಟ್ಟಿರುವುದೇ ಪರಮಾತ್ಮನ ಪ್ರಾಪ್ತಿಗಾಗಿ. ಇದನ್ನು ಮರೆತು ಪ್ರಾಪಂಚಿಕ ವ್ಯವಹಾರದಲ್ಲಿ ಕಾಲ ಹರಣ ಮಾಡುತ್ತಲಿದ್ದೇವೆ.
ನಾವು ಸದಾ ಪರಮಾತ್ಮನ ಸ್ಮರಣೆಯಿಂದ ನಮ್ಮ ಜೀವನ ಸಾರ್ಥಕ ಮಾಡಿಕೊಳ್ಳಬೇಕು ಎಂದು ಹೇಳಿದರು. ಶ್ರೀ ನಾಗಯ್ನಾ ಸ್ವಾಮಿ ಮಾತನಾಡಿ, ಪ್ರಪಂಚದ ಮೇಲಿನ ಭಕ್ತಿ ಪರಮಾತ್ಮನ ಮೇಲಿಟ್ಟಾಗ ನಮ್ಮ ಜೀನವ ಪಾವನವಾಗುತ್ತದೆ ಎಂದು ಹೇಳಿದರು. ಬೆಳ್ಳೂರಿನ ಮಾತೆ ಅಮೃತಾನಂದಮಯಿ ಮಾತನಾಡಿ, ಸದ್ಗುರುವಿನ ಮೇಲೆ ನಿಷ್ಠೆ, ಶ್ರದ್ಧೆ ಇದ್ದರೆ ಮಾತ್ರ ನಮಗೆ ಜ್ಞಾನ ಪ್ರಾಪ್ತಿ ಸಾಧ್ಯ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಶ್ರೀ ಗುರುಲಿಂಗ ಮಹಾಸ್ವಾಮಿಗಳು ಮಾತನಾಡಿ, ಮಾನವ ಜನ್ಮ ಸಿಗುವುದು ಬಲು ದುರ್ಲಭ, ಈ ಜನ್ಮ ನಮಗೆ ಸಿಕ್ಕಿದ ಮೇಲೆ ಪರಮಾತ್ಮನ ಸ್ಮರಣೆಯಿಂದ ಜನ್ಮ ಸಾರ್ಥಕ ಮಾಡಿಕೊಳ್ಳಬೇಕು ಎಂದು ಹೇಳಿದರು.
ಶಾಮರಾಯ ಸಂತಪುರೆ, ಶಾರದಾದೇವಿ, ಶೋಭಾ ಜಯರಾಜ, ಜಯಶ್ರೀ ಗೌಡಗಾವೆ, ಬಾಬುರಾವ್ ಸಂಗೋಳಗಿ, ಶಂಕರರಾವ್ ಶಿಕಾರಖಾನಿ, ಓಂ ಶೆಟ್ಟಿ ಮರಕಲ್ ಬ್ಯಾಲಹಳ್ಳಿ, ಶಿಲ್ಪಾ ಶಿವಪುತ್ರ, ವೈಜಿನಾಥಪ್ಪ ಕನಕಟ್ಟೆ, ವೈಜಿನಾಥ ದಾಬಶೆಟ್ಟಿ ನಾವದಗಿ, ಶಿವಪುತ್ರ ವೈಜಿನಾಥ ಉಪಸ್ಥಿತರಿದ್ದರು. ಪ್ರಸಾದ ದಾನಿ ಜಯರಾಜ ದಾಬಶೆಟ್ಟಿ ಸ್ವಾಗತಿಸಿದರು. ರಮೇಶ ಶ್ರೀಮಂಡಲ ಶಕ್ಕರಗಂಜವಾಡಿ ನಿರೂಪಿಸಿದರು. ಸತ್ಯದೇವಿ ಪಾಟೀಲ ಧನ್ನೂರ (ಎಸ್) ವಂದಿಸಿದರು.