Advertisement

BBMP: 110 ಹಳ್ಳಿಗಳಿಗೆ ಮೂಲ ಸೌಕರ್ಯ ಯಾವಾಗ?

03:35 PM Dec 08, 2023 | Team Udayavani |

ಬೆಂಗಳೂರು: ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ 110 ಹಳ್ಳಿಗಳಿಗೆ ನೀರು ಸೇರಿ ದಂತೆ ಮೂಲಭೂತ ಸೌಕರ್ಯ ಕಲ್ಪಿಸುವ ವಿಚಾರ ದಲ್ಲಿ ಪಾಲಿಕೆ ಮತ್ತು ಬೆಂಗಳೂರು ಜಲ ಮಂಡಳಿ ವಿಳಂಬ ನೀತಿ ಅನುಸರಿಸುತ್ತಿದೆ. ಕಾಮಗಾರಿ ವಿಚಾರದಲ್ಲಿ ಬಿಬಿಎಂಪಿ ಮತ್ತು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ನಡುವೆ ಡೆಡ್‌ಲೈನ್‌ ಡ್ರಾಮಾ ಶುರುವಾಗಿದ್ದು, ಅದೀಗ 2024ಕ್ಕೆ ಬಂದು ತಲುಪಿದೆ.

Advertisement

2007ರಲ್ಲಿ 110 ಹಳ್ಳಿಗಳು ಪಾಲಿಕೆ ವ್ಯಾಪ್ತಿಗೆ ಸೇರಿದ್ದವು. ಹೀಗಾಗಿ ಆ ಪ್ರದೇಶ ವ್ಯಾಪ್ತಿಯ ಜನರು ಕೂಡ ಖುಷಿಯಲ್ಲಿದ್ದರು. ಆದರೆ, ಈಗ ಈ ಹಳ್ಳಿಗಳಲ್ಲಿ ಕಂಡು ಬಂದಿರುವ ಹಲವು ಮೂಲ ಸೌಕ ರ್ಯ ತೊಂದರೆಯಿಂದಾಗಿ ಜನರ ಸ್ಥಿತಿ ಬಾಣ ಲೆಯಿಂದ ಬೆಂಕಿಗೆ ಬಿದ್ದಂತಾಗಿದೆ. ಕುಡಿ ಯುವ ನೀರು ಇನ್ನಿತರೆ ಸೌಕರ್ಯಗಳಿಲ್ಲದೆ ಸ್ಥಳೀಯರು ನರಳುತ್ತಿದ್ದಾರೆ. ಹಲವು ನೆಪಗಳನ್ನು ಒಡ್ಡಿ ಜಲ ಮಂಡಳಿ ಕಾಮಗಾರಿ ಡೆಡ್‌ಲೈನ್‌ ಮುಂದೂಡುತ್ತಲೇ ಇದೆ. ಈ ಹಳ್ಳಿಗಳಿಗೆ ನೀರು ಒದಗಿಸಲು ಶುರುವಾದ ಕಾವೇರಿ 5ನೇ ಹಂತದ ಯೋಜನೆಯು ಕುಂಟುತ್ತಾ ಸಾಗಿದೆ.

ಇದರಲ್ಲಿ ಪಾಲಿಕೆ ಮತ್ತು ಜಲ ಮಂಡಳಿ ಯದ್ದು ಸಮ ಪಾಲಿದೆ. ಯಲಹಂಕ ವ್ಯಾಪ್ತಿಯ 26, ಮಹದೇವಪುರ ವ್ಯಾಪ್ತಿಯ 23, ರಾಜರಾಜೇಶ್ವರಿ ನಗರ ವ್ಯಾಪ್ತಿಯ 17, ಬೊಮ್ಮನಹಳ್ಳಿ ವ್ಯಾಪ್ತಿಯ 33 ಮತ್ತು ದಾಸರಹಳ್ಳಿ ವ್ಯಾಪ್ತಿಯ 11 ಹಳ್ಳಿಗಳು ಹೊಸದಾಗಿ ಪಾಲಿಕೆ ವ್ಯಾಪ್ತಿಗೆ ಸೇರಿವೆ. ಗುಂಡಿ ಬಿದ್ದಿರುವ ರಸ್ತೆಗಳು ತುಂಬಿ ಹೋಗಿದ್ದು, ದುರಸ್ತಿಗೆ ಪಾಲಿಕೆ ಹೆಣಗಾಡುತ್ತಿದೆ. ದೂಳು ಮತ್ತು ಗುಂಡಿ ಬಿದ್ದಿರುವ ರಸ್ತೆಗಳಲ್ಲಿ ಜನರು ಸಾಗಬೇಕಾಗಿದೆ. ಅವಧಿ ಮೀರಿದ ಕಾಲಾವಧಿ ಹೊರತಾಗಿಯೂ ಈವರೆಗೂ ಸರಿಯಾಗಿ ಬಿಬಿಎಂಪಿ ಹಳ್ಳಿಗರಿಗೆ ಸರಿಯಾಗಿ ಮೂಲಸೌಕರ್ಯ ಒದಗಿಸಿಲ್ಲ. ಹೊರ ವಲಯದಲ್ಲಿನ 110 ಹಳ್ಳಿಗಳಲ್ಲಿ 2.50 ಲಕ್ಷ ಕ್ಕಿಂತ ಹೆಚ್ಚು ಸಂಪರ್ಕಗಳಿಗೆ ನೀರು ಪೂರೈಸಬೇಕಿದೆ.

ಕಾವೇರಿ ನೀರಿನ ಪೂರೈಕೆಯೂ ಇಲ್ಲದೆ, ಸಮರ್ಪಕ ಕೊಳವೆಬಾವಿ ನೀರು ಇಲ್ಲದೇ ಈ ಭಾಗದ ಜನರು ಪರದಾಡುತ್ತಿದ್ದಾರೆ. ಪರಿಸ್ಥಿತಿ ಹೀಗೆ ಮುಂದುವರಿದರೆ ತಮ್ಮ ದುಡಿಮೆಯ ಬಹುಪಾಲು ಹಣವನ್ನು ಖಾಸಗಿ ಟ್ಯಾಂಕರ್‌ಗಳ ನೀರು ಖರೀದಿಸುವ ಸಲುವಾಗಿಯೇ ವ್ಯಯಿಸುವ ಪರಿಸ್ಥಿತಿ ಉಂಟಾಗುವ ಕಾಲ ದೂರವಿಲ್ಲ. ದಾಸರಹಳ್ಳಿ ವಲಯ ವ್ಯಾಪ್ತಿಯಲ್ಲಿನ ಹಳ್ಳಿಗಳಲ್ಲಿ 166 ಕೊಳವೆಬಾವಿಗಳಿದ್ದು, ಈ ಪೈಕಿ 34 ಕೆಟ್ಟು ಹೋಗಿವೆ. 132 ಬೋರ್‌ವೆಲ್‌ಗ‌ಳಷ್ಟೇ ಕಾರ್ಯ ನಿರ್ವಹಿಸುತ್ತಿವೆ. ಕೊಳವೆ ಬಾವಿಗಳ ನಿರ್ವಹಣೆಯ ಟೆಂಡರ್‌ ಪ್ರಕ್ರಿಯೆ ಪೂರ್ಣಗೊಂಡಿದೆ. ಆದರೆ, ಗುತ್ತಿಗೆ ದಾರರಿಗೆ ಕಾರ್ಯಾದೇಶ ನೀಡಿಲ್ಲ. ಹೀಗಾಗಿ, ಕೊಳವೆ ಬಾವಿಗಳ ನಿರ್ವಹಣೆ ಸ್ಥಗಿತಗೊಂಡಿದೆ. ಶೀಘ್ರದಲ್ಲೇ ಕೊಳವೆಬಾವಿ ಕೊರೆಯುವ ಕೆಲಸ ನಡೆಯಲಿದೆ ಎಂದು ಪಾಲಿಕೆಯ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

2024ರ ಆರಂಭಿಕ ತಿಂಗಳಲ್ಲಿ ಪೂರ್ಣ: ಕಾವೇರಿಯಿಂದ 775 ದಶಲಕ್ಷ ಲೀಟರ್‌ ನೀರು ತರುವ 5ನೇ ಹಂತದ ಯೋಜನೆಯನ್ನು ಜಪಾನ್‌ ಇಂಟರ್‌ ನ್ಯಾಷ ನಲ್‌ ಕೋ-ಆಪರೇಟಿವ್‌ ಏಜೆನ್ಸಿ (ಜೈಕಾ) ಆರ್ಥಿಕ ನೆರವಿನೊಂದಿಗೆ ಕೈಗೆತ್ತಿಕೊಳ್ಳ ಲಾಗಿದೆ. 2023ರ ಮಾರ್ಚ್‌ನಲ್ಲೇ ಕಾಮಗಾರಿ ಪೂರ್ಣಕ್ಕೆ ಗಡುವು ಹಾಕಿಕೊಳ್ಳಲಾಗಿತ್ತು. ಆದರೆ ಕೋವಿಡ್‌, ಲಾಕ್‌ಡೌನ್‌, ರಾತ್ರಿ ಕರ್ಫ್ಯೂ, ವಾರಾಂತ್ಯ ಕರ್ಫ್ಯೂ ಕೂಡ ವಿಳಂಬಕ್ಕೆ ಕಾರಣ ವಾಗಿದೆ. ಜತೆಗೆ ಕೆಲವು ಕಡೆಗಳಲ್ಲಿ ನಾವು ಕಾನೂನಿನ ಸವಾಲುಗಳನ್ನು ಎದುರಿಸಿದ್ದೇವೆ. ಪೈಪ್‌ಲೈನ್‌ ಮಾರ್ಗದಲ್ಲಿನ ಸಣ್ಣ ಪರಿಷ್ಕರಣೆಗಳು ಮತ್ತು ರಸ್ತೆ ನಿರ್ಮಾಣ, ಇವೆಲ್ಲವೂ ವಿಳಂಬಕ್ಕೆ ಕಾರಣವಾಗಿದೆ ಎಂದು ಜಲಮಂಡಳಿ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Advertisement

2023ರ ಮಾರ್ಚ್‌ನೊಳಗೆ ಕೆಲಸವನ್ನು ಪೂರ್ಣಗೊಳಿಸುವ ಗುರಿಯಿತ್ತು. 5ನೇ ಹಂತದ ನೀರು ಪೂರೈಕೆಗಾಗಿನ ಜೈಕಾ ಒಪ್ಪಂದದ ಪ್ರಕಾರ 2023ರ ಆಗಸ್ಟ್‌ನಲ್ಲಿ ಕುಡಿವ ನೀರಿನ ಕಾಮಗಾರಿ ಪೂರ್ಣಗೊಳಿಸಲು ನಿರ್ಧರಿಸಲಾಗಿತ್ತು. ಆದರೆ ಈ ಗಡುವನ್ನು ಸಹ ಪೂರೈಸಲಾಗಿಲ್ಲ. ಈಗಾಗಲೇ ಶೇ.80ರಷ್ಟು ಕೆಲಸ ಪೂರ್ಣವಾಗಿದೆ. ಪಂಪ್‌ ಹೌಸ್‌, ನೀರು, ಶುದ್ಧೀಕರಣ ಘಟಕ, ವಿವಿಧ ಕಾಮಗಾರಿ ಅಂತಿಮಗೊಳಿಸಲಾಗುತ್ತಿದೆ. 2024ರ ಫೆಬ್ರವರಿ ವೇಳೆಗೆ 110 ಹಳ್ಳಿಗಳಿಗೆ ನೀರು ಪೂರೈಸುವ ಗುರಿ ಹೊಂದಲಾಗಿದೆ. ಟಿ.ಕೆ.ಹಳ್ಳಿಯ ನೀರು ಶುದ್ಧೀಕರಣ ಘಟಕ ಶೇ.75 ಪ್ರಗತಿ ಕಂಡಿದೆ ಎಂದು ಹೇಳಿದ್ದಾರೆ. ಪಾಲಿಕೆ ವ್ಯಾಪ್ತಿಗೆ ಸೇರಿರುವ 110 ಹಳ್ಳಿಗಳಿಗೆ ಕುಡಿಯುವ ನೀರು ಕಲ್ಪಿಸುವ ಕಾವೇರಿ 5ನೇ ಹಂತದ ಯೋಜನೆಯನ್ನು ಶೀಘ್ರ ಪೂರ್ಣಗೊಳಿಸಲಾಗುವುದು. ಪಂಪ್‌ ಹೌಸ್‌, ನೀರು ಶುದ್ಧೀಕರಣ ಘಟಕ ಮತ್ತು ವಿವಿಧ ಕಾಮಗಾರಿಗಳನ್ನು ಅಂತಿಮಗೊಳಿಸಲಾಗುತ್ತಿದೆ. 2024ರ ಆರಂಭಿಕ ತಿಂಗಳಲ್ಲಿ ಕಾಮಗಾರಿ ಸಂಪೂರ್ಣ ಪೂರ್ಣಗೊಳಿಸುವ ನಿರೀಕ್ಷೆಯಿದೆ. -ಎನ್‌.ಜಯರಾಂ, ಜಲಮಂಡಳಿ ಅಧ್ಯಕ್ಷ

-ದೇವೇಶ ಸೂರಗುಪ್ಪ

Advertisement

Udayavani is now on Telegram. Click here to join our channel and stay updated with the latest news.

Next