Advertisement
ದೇವನಹಳ್ಳಿ ಸಾರಿಗೆ ಇಲಾಖೆಯ ಕಚೇರಿ ವ್ಯಾಪ್ತಿಯಲ್ಲಿ 100ಕ್ಕೂ ಹೆಚ್ಚು ಬಸ್‌ಗಳಿವೆ. ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಸುಮಾರು 40ಕ್ಕೂ ಹೆಚ್ಚು ಖಾಸಗಿ ಬಸ್‌ಗಳಿವೆ. ಬೆಂಗಳೂರು, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ ಮೊದಲಾಗಿ ಸಾಮಾನ್ಯ ಮಾರ್ಗ ಗಳಷ್ಟೇ ಅಲ್ಲದೇ, ತಾಲೂಕಿನ ಸಾಸಲು, ದೊಡ್ಡಬೆಳವಂಗಲ, ಮಧುರೆ ಹೋಬಳಿಗಳ ಗ್ರಾಮಾಂತರ ಪ್ರದೇಶಗಳಲ್ಲಿ ಸಂಚರಿಸುತ್ತಿವೆ.
Related Articles
Advertisement
ಕೈಗಾರಿಕಾ ಪ್ರದೇಶದಲ್ಲಿ ಕೇಳ್ಳೋರೇ ಇಲ್ಲ: ದೊಡ್ಡಬಳ್ಳಾಪುರ ತಾಲೂಕಿನ ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಕಾರ್ಖಾನೆಗೆ ನಿತ್ಯ ಪಾಳಿಗಳಿಗೆ ಅನುಗುಣವಾಗಿ ಕಾರ್ಮಿಕರನ್ನು ಕರೆತರಲು ನೂರಾರು ವಾಹನಗಳು ಸಂಚರಿ ಸುತ್ತಿವೆ. ಹಲವಾರು ಕಾರ್ಖಾನೆಗಳು ಖಾಸಗಿ ವಾಹನಗಳಿಗೆ ಗುತ್ತಿಗೆ ನೀಡಿವೆ. ಇದರಲ್ಲಿ ಬಸ್, ಮಿನಿ ಬಸ್ ಹಾಗೂ ಇತರೆ ವಾಹನಗಳು ಸೇರಿವೆ. ಆದರೆ, ಈ ವಾಹನಗಳಲ್ಲಿ ಬಹಳಷ್ಟು ವಾಹನಗಳು, ಬೇರೆಡೆ ಬಳಸಿದ ಗುಜರಿ ವಾಹನಗಳಾಗಿದ್ದು, ಸುಸ್ಥಿ ಯಲ್ಲಿಲ್ಲದೇ ಸಂಚರಿಸುತ್ತಿವೆ. ವಾಹನಗಳಿಗೆ ಎಫ್‌ಸಿ, ವಿಮೆ ಮೊದಲಾದ ದಾಖಲಾತಿ ಗಳಿಲ್ಲ. ಅನನುಭವಿ ಚಾಲಕರು ವಾಹನ ಚಲಾವನರ ಮಾಡಿ ಹಲವಾರು ಅಪಘಾತ ಗಳಾಗಿರುವ ನಿದರ್ಶನಗಳಿವೆ. ಅಪಘಾತ ಗಳಾಗಿ ಮಾಧ್ಯಮಗಳಲ್ಲಿ ವರದಿಯಾದರೆ, ಆಗ ಸಾರಿಗೆ ಇಲಾಖೆಯವರು ಅಡ್ಡಾಡಿ ಕ್ರಮ ಕೈಗೊಳ್ಳುವುದು ಬಿಟ್ಟರೆ ಮತ್ತೆ ಇತ್ತ ತಿರುಗಿಯೂ ನೋಡುವುದಿಲ್ಲ.
15 ವರ್ಷ ದಾಟಿದ ವಾಹನ: 15 ವರ್ಷ ದಾಟಿದ ವಾಹನಗಳನ್ನು ನಿಯಮಾನುಸಾರ ಮುಟ್ಟುಗೋಲು ಹಾಕಿಕೊಂಡು ಕ್ರಮ ಕೈಗೊಳ್ಳುವ ಅಧಿಕಾರ ಸಾರಿಗೆ ಇಲಾಖೆಗೆ ಇದೆ.
ಆದರೆ, ಸಾರಿಗೆ ಇಲಾಖೆ ಈ ಬಗ್ಗೆ ಕ್ರಮ ಕೈಕೊಳ್ಳುತ್ತಿಲ್ಲ. ಕೈಗಾರಿಕಾ ಪ್ರದೇಶದಲ್ಲಿ ಸಂಚರಿ ಸುವ ನೂರಾರು ವಾಹನಗಳಲ್ಲಿ ಸುರಕ್ಷತೆಯೇ ಇಲ್ಲ. ಕೆಲಸಕ್ಕೆ ಹೋದ ಕಾರ್ಮಿಕರು ಮತ್ತೆ ಅದೇ ವಾಹನದಲ್ಲಿ ಸುರಕ್ಷಿತವಾಗಿ ಮನೆ ತಲುಪುವ ಖಾತ್ರಿ ಇಲ್ಲ. ಸಾರಿಗೆ ಇಲಾಖೆ ಅಧಿಕಾರಿಗಳುಕೆಲವೊಮ್ಮೆ ಬರುವುದನ್ನು ಬಿಟ್ಟು ಕಟ್ಟುನಿಟ್ಟಾಗಿ ಎಲ್ಲಾ ರೀತಿಯ ವಾಹನಗಳ ಮೇಲೆ ಕ್ರಮ ಕೈಗೊಂಡರೆ ಪ್ರಯಾಣಿಕರು ಸುರಕ್ಷಿತವಾಗಿ ಸಂಚರಿಸುವ ಧೈರ್ಯ ಮೂಡುತ್ತದೆ ಎನ್ನುತ್ತಾರೆ ಕಾರ್ಮಿಕ ಮುಖಂಡ ಕೊತ್ತೂರಪ್ಪ 15 ವರ್ಷ ದಾಟಿದ ವಾಹನಗಳನ್ನು ಏಕಾಏಕಿ ಮುಟ್ಟು ಗೋಲು ಹಾಕಿಕೊಳ್ಳಲು ಆಗುವುದಿಲ್ಲ. ವಾಹನಗಳ ಕಾರ್ಯಕ್ಷಮತೆ ಪರಿಶೀಲಿಸಿ, ವಾಹನಗಳು ಸುಸ್ಥಿತಿಯಲ್ಲಿ ಇಲ್ಲದಿದ್ದಾಗ ದಂಡ ವಿಧಿಸಿ ಎಚ್ಚರಿಕೆ ನೀಡಲಾಗುತ್ತದೆ. ಮತ್ತೆ ಇದೇ ರೀತಿ ಮುಂದು ವರಿದರೆ ವಾಹನ ಮಾಲೀಕರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಕೈಗಾರಿಕಾ ಪ್ರದೇಶಗಳಲ್ಲಿ ಸೇರಿದಂತೆ ನಮ್ಮ ಸಾರಿಗೆ ಇಲಾಖೆ ಕಚೇರಿ ವ್ಯಾಪ್ತಿಯಲ್ಲಿ ವಿಮೆ, ಪರವಾನಗಿ, ವಾಹನ ಚಾಲನೆ ಪರವಾನಗಿ ಇಲ್ಲದ ವಾಹನಗಳ ನ್ನು ಪರಿಶೀಲಿಸಿ ದಂಡ ವಿಧಿಸಲಾಗುತ್ತಿದೆ.
ಮಂಜುನಾಥ್, ಸಹಾಯಕ ಸಾರಿಗೆ ಅಧಿಕಾರಿ, ದೊಡ್ಡಬಳ್ಳಾಪುರ ಡಿ.ಶ್ರೀಕಾಂತ್