Advertisement
1928ರಿಂದ ಮೊದಲ್ಗೊಂಡು ಎಂಟು ಚಿನ್ನ, ಒಂದು ಬೆಳ್ಳಿ, ಎರಡು ಕಂಚು ಹೆದ್ದ ಹೆಗ್ಗಳಿಕೆ ಭಾರತದ್ದು.
Related Articles
Advertisement
1980ರಲ್ಲಿ ಸ್ಪೇನ್ ತಂಡವನ್ನು 4-3 ಅಂತರದಿಂದ ಮಣಿಸುವ ಮೂಲಕ ಭಾರತ ಬಂಗಾರಕ್ಕೆ ಮುತ್ತಿಕ್ಕಿತ್ತು. 1980ರ ಜುಲೈ 29ರಂದು ಭಾರತಕ್ಕೆ ಈ ಪದಕ ಒಲಿದಿತ್ತು. ಬುಧವಾರ ಇದಕ್ಕೆ ಭರ್ತಿ 40 ವರ್ಷ ತುಂಬಿತು.
ಆರೇ ತಂಡಗಳ ಸ್ಪರ್ಧೆಆದರೆ ಇದೇನೂ ಹೆಗ್ಗಳಿಕೆಯ ಪದಕವಾಗಿರಲಿಲ್ಲ. ಅಂದಿನ ಮಾಸ್ಕೊ ಕೂಟಕ್ಕೆ ಬಹಳಷ್ಟು ದೇಶಗಳು ಬಹಿಷ್ಕಾರ ಹಾಕಿದ್ದವು. ಹಾಕಿಯಲ್ಲಿ ಕಣಕ್ಕಿಳಿದದ್ದು 6 ತಂಡಗಳು ಮಾತ್ರ! ಭಾರತ, ಸ್ಪೇನ್ ಹೊರತುಪಡಿಸಿ ಉಳಿದೆಲ್ಲವೂ ಲೆಕ್ಕದ ಭರ್ತಿಯ ತಂಡಗಳಾಗಿದ್ದವು. ಇವುಗಳೆಂದರೆ ಪೋಲೆಂಡ್, ಕ್ಯೂಬಾ, ತಾಂಜಾನಿಯಾ ಮತ್ತು ಆತಿಥೇಯ ರಶ್ಯ. ದುರ್ಬಲ ತಾಂಜಾನಿಯಾವನ್ನು 18-0 ಗೋಲುಗಳಿಂದ ಮಣಿಸಿದ ಭಾರತ ಭರ್ಜರಿ ಆರಂಭ ಮಾಡಿತು. ಆದರೆ ಪೋಲೆಂಡ್ ಮತ್ತು ಸ್ಪೇನ್ ವಿರುದ್ಧ ಡ್ರಾ ಸಾಧಿಸಿತು. ಬಳಿಕ ಕ್ಯೂಬಾವನ್ನು 13-0 ಅಂತರದಿಂದ, ರಶ್ಯವನ್ನು 4-2ರಿಂದ ಹಿಮ್ಮೆಟ್ಟಿಸಿ ಪ್ರಶಸ್ತಿ ಸುತ್ತಿಗೆ ಲಗ್ಗೆ ಇರಿಸಿತು. ರೋಚಕ ಹಣಾಹಣಿ
ಫೈನಲ್ ಹಣಾಹಣಿಯ ಮೊದಲಾರ್ಧದಲ್ಲಿ 2-0 ಮುನ್ನಡೆ ಸಾಧಿಸಿದ ಭಾರತ 16 ವರ್ಷಗಳ ಬಳಿಕ ಚಿನ್ನವನ್ನು ಖಾತ್ರಿಪಡಿಸಿತು. ಎರಡೂ ಗೋಲುಗಳನ್ನು ಸುರೀಂದರ್ ಸಿಂಗ್ ಸೋಧಿ ಬಾರಿಸಿದ್ದರು. ವಿರಾಮದ ಆರಂಭದಲ್ಲೇ ಎಂ.ಕೆ. ಕೌಶಿಕ್ ಮತ್ತೂಂದು ಗೋಲು ಸಿಡಿಸಿದರು. ಬಳಿಕ ಸ್ಪೇನ್ ನಾಯಕ ಜುವಾನ್ ಅಮಟ್ 2 ಗೋಲು ಬಾರಿಸಿ ಹೋರಾಟ ಜಾರಿಯಲ್ಲಿರಿಸಿದರು. ಬಳಿಕ ಮೊಹಮ್ಮದ್ ಶಾಹಿದ್ 4ನೇ ಗೋಲಿನ ಕಾಣಿಕೆ ನೀಡಿದರು. ಅಮಟ್ ಹ್ಯಾಟ್ರಿಕ್ ಪೂರೈಸಿದರು. ಆದರೆ ಅದೃಷ್ಟ ವಿ. ಭಾಸ್ಕರನ್ ಬಳಗಕ್ಕೆ ಒಲಿದಿತ್ತು! ಟೋಕಿಯೊದಲ್ಲಿ ಭಾರತದ ಹಾಕಿ ಸುವರ್ಣ ಯುಗ ಮರುಕಳಿಸೀತೇ ಎಂಬ ನಿರೀಕ್ಷೆಯೀಗ ಒಂದು ವರ್ಷ ಮುಂದೂಡಲ್ಪಟ್ಟಿದೆ.