Advertisement

ನಾಯಕನಾದಾಗ….

08:29 PM Feb 12, 2020 | Sriram |

ಚಾರಣ ಎಂಬ ಹವ್ಯಾಸ ದೇಹ ಹಾಗೂ ಮನಸ್ಸಿನ ಆರೋಗ್ಯಕ್ಕೆ ಸಹಕಾರಿ. ಬೆಟ್ಟ-ಗುಡ್ಡ ಹತ್ತುವುದು, ನದಿ, ತೋಡು, ಕಾಡುಗಳಲ್ಲಿ ಸಂಚಾರ ಇತ್ಯಾದಿ ದೇಹ ಹಾಗೂ ಮನಸ್ಸಿಗೆ ವಿಶ್ರಾಂತಿ ನೀಡುತ್ತದೆ.ಚಾರಣ ಸುರಕ್ಷಿತ ರೀತಿಯಲ್ಲಿ ಆದ್ದರೆ ಇನ್ನೂ ಒಳಿತು.

Advertisement

ಫ್ಯಾಮಿಲಿ, ಫ್ರೆಂಡ್ಸ್ ಹೀಗೆ ತಂಡವಾಗಿ ಚಾರಣಕ್ಕೆ ಹೊರಡುತ್ತಾರೆ. ಹೀಗೆ ಚಾರಣ ಹೊರಟವರಿಗೆ ಸಹಾಯ ನೀಡುವುದು ಮಾರ್ಗದರ್ಶಿಗಳು ಅಥವಾ ಚಾರಣ ಯೋಜ ನೆಕಾರರು. ಇಡೀ ತಂಡದ ಜವಾಬ್ದಾರಿಯನ್ನು ಹೊತ್ತು ಚಾರಣಿಗರ ಅಗತ್ಯಗಳನ್ನು ತಿಳಿದುಕೊಂಡು, ಚಾರಣ ಉದ್ದಕ್ಕೂ ಉತ್ಸಾಹ ತುಂಬಿ ಸುತ್ತಾ, ಚಾರಣಿಗರನ್ನು ಪ್ರೇರೆಪಿಸುತ್ತಾ ಇಡೀ ತಂಡವನ್ನು ಮುನ್ನಡೆಸುವ ಖುಷಿಯೇ ಬೇರೆ. ಹೀಗೆ ಚಾರಣಗರಿಗೆ ಮಾರ್ಗದರ್ಶನ ನೀಡುತ್ತಾ ನೀವು ತಂಡದ ನಾಯಕನಾಗಿ ಇಡೀ ಗುಂಪನ್ನು ಮುನ್ನಡೆಸುವ ಆಸೆ ಇದ್ದರೆ ಈ ಮನೋಭಾವವನ್ನು ಬೆಳೆಸಿಕೊಳ್ಳಿ.

ಪ್ರಕೃತಿಯನ್ನು ಆಸ್ವಾದಿಸುವ ಕಲೆ
ಚಾರಣ ಆಯೋಜಿಸುವ ನಾಯಕ ಪ್ರಕೃತಿ ಪ್ರಿಯನಾಗಿರುತ್ತಾನೆ. ಜತೆಗೆ ಹುಚ್ಚು ಮೋಜು, ಮಸ್ತಿಗೆ, ಹುಚ್ಚು ಅಪಾಯಕಾರಿ ಸೆಲ್ಫಿಗೆ, ಹುಚ್ಚು ಸಾಹಸಕ್ಕೆ ಆತ ಅಸ್ಪದ ನೀಡುವುದಿಲ್ಲ. ಹುಚ್ಚಾಟಕ್ಕೆ ಕಾಡು ಪ್ರದೇ ಶಗಳು ಸೂಕ್ತವಲ್ಲ ಎಂಬ ಸಿದ್ಧಾಂತ ಅವನ ದಾಗಿರುತ್ತದೆ. ಪ್ಲಾಸ್ಟಿಕ್‌ಗಳನ್ನು, ಬಾಟಲ್‌ಗ‌ಳನ್ನು ಅಲ್ಲಲ್ಲಿ ಬಿಸಾಡಿ ಪರಿಸರಕ್ಕೆ ಹಾನಿ ಮಾಡಬಾರದು ಎಂಬ ಸ್ಥಿತ ಪ್ರಜ್ಞೆ ಇರುತ್ತದೆ.

ಸಣ್ಣ ಸಣ್ಣ ಖುಷಿ
ಚಾರಣದ ಮಜವೇ ಅಂಥದ್ದು. ಇದು ಕೆಲ ವರಿಗೆ ಹವ್ಯಾಸವಾದರೆ, ಕೆಲವರಿಗೆ ಹುಚ್ಚು, ಮತ್ತೆ ಕೆಲವರಿಗೆ ಇದು ಜೀವನೋಪಾಯ. ಒಟ್ಟಿನಲ್ಲಿ, ಟ್ರೆಕ್ಕಿಂಗ್‌ ಎಂದರೆ ಜೀವನಪೂರ್ತಿ ಮರೆಯಲಾರದ ಅನುಭೂತಿ ನೀಡುವ ಘಟನೆ. ಇಂಥದ್ದೊಂದು ಅನುಭವ ಎಷ್ಟೇ ಸುಂದರ ಸ್ಥಳಕ್ಕೆ ಪ್ರವಾಸ ಹೋದರೂ ಸಿಗಲು ಸಾಧ್ಯವೇ ಇಲ್ಲ! ಏಕೆಂದರೆ, ಚಾರಣದಲ್ಲಿ ಕಷ್ಟವೂ ಇಷ್ಟವೇ. ಆಯಾಸದ ನಡುವೆಯೂ ಸಿಗುವ ಸಣ್ಣ ಪುಟ್ಟ ಖುಷಿಯನ್ನು ಸಂಭ್ರ ಮಿಸುವ ಮನಸ್ಥಿತಿ ನಾಯಕನದ್ದಾಗಿರುತ್ತದೆ.

ಜವಾಬ್ದಾರಿ ಹೊರೆ ಅಲ್ಲ
ಜವಾಬ್ದಾರಿ ಎಂದರೆ ಮೂಗು ಮುರಿ ಯುವವರ ಮಧ್ಯೆ ಇಡೀ ತಂಡದ ಹೊಣೆ ಗಾರಿಕೆ ಹೊತ್ತು ಸಾಗುವ ತಂಡ ನಾಯಕನಿಗೆ ಇದು ಹೊರೆ ಆಗುವುದಿಲ್ಲ. ಪ್ರವಾಸದ ಮಟ್ಟಿಗೆ ಹೇಳುವುದಾದರೆ, ಇಲ್ಲಿ ಮಾಡಿಕೊಳ್ಳುವ ಪೂರ್ವ ಸಿದ್ಧತೆ, ಪ್ರಯಾಣದ ಅವಧಿ, ಪ್ರವಾಸಿ ತಾಣಗಳಲ್ಲಿ ತೆಗೆದುಕೊಳ್ಳುವ ವಿರಾಮ. ಊಟ, ನಿದ್ದೆ ಇವುಗಳೆಲ್ಲಾ ಯಾಂತ್ರಿಕ ಮತ್ತು ಸ್ವಯಂ ನಿರ್ಧಾರವಾಗಿರುತ್ತದೆ. ಜತೆಗೆ ಇಲ್ಲಿ ಸ್ವಲ್ಪ ಹೆಚ್ಚಾ ಕಮ್ಮಿಯಾದರೆ ಪ್ರಯಾಣ ಪ್ರಯಾಸ ಎನಿಸಿಬಿಡುತ್ತದೆ. ಆದರೆ ಇಲ್ಲಿ ನಾಯಕ ಎಲ್ಲರ ಸಮ್ಮತಿ ಪಡೆದು ಒಂದು ನಿರ್ದಿಷ್ಟ ವೇಳೆ ನಿಗದಿ ಮಾಡುತ್ತಾನೆ. ಅವನೇ ಸ್ವ ಆಸಕ್ತಿಯಿಂದ ಪ್ರಯಾಣದ ಸಿದ್ಧತೆ ಮಾಡಿಕೊಳ್ಳುತ್ತಾನೆ. ಪ್ರಯಾಣದ ಅನುಭವದಿಂದ ಹಿಡಿದು ಪ್ರತಿಯೊಂದು ಘಟ್ಟವೂ ಮಹತ್ವ ಎನ್ನಿಸುವಾಗ ಸಿದ್ಧತೆ ಮಾಡಿ ಕೊಳ್ಳುತ್ತಾನೆ. ಜೀವನಪರ್ಯಂತ ನೆನಪಿನಲ್ಲಿ ಉಳಿಯುವಂಥ ನೆನಪುಗಳನ್ನು ನೀಡುವ ಕೃತಿ ಎಂದಿಗೂ ಹೊರೆ ಅನ್ನಿಸುವುದಿಲ್ಲ.

Advertisement

ತಂಡದ ಉತ್ಸಾಹ
ಚಾರಣ ಪ್ರವಾಸದಿಂದ ಜಂಜಡದ ಮನಸ್ಸಿಗೆ ನೆಮ್ಮದಿ ಸಿಗುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಕಾಡು ಮೇಡಿನ ಮಧ್ಯೆ, ಕಲ್ಲು ಮುಳ್ಳುಗಳ ನಡುವೆ ಸಾಗು ವಾಗ ಆಯಾಸವಾಗಿ ಬಿಡುತ್ತದೆ. ಇಂತಹ ಸಮಯದಲ್ಲಿ ತಂಡದ ಜನರನ್ನು ಹುರಿ ದುಂಬಿಸಿ ಮಾತುಗಳಾನ್ನಾಡುವ ಮೂಲಕ ಅವರ ಆಯಾಸವನ್ನು ಮಾಯ ಮಾಡುವ ಚಾಣಾಕ್ಷತನ ಅವನಲ್ಲಿರುತ್ತದೆ. ಪ್ರಯಾಣದ ಮಧ್ಯೆ ಆಟಗಳನ್ನು ಚಟುವ ಟಿಕೆಗಳನ್ನು ಆಯೋಜನೆ ಮಾಡುತ್ತಾ ಚಾರಣಿಗರನ್ನು ಖುಷಿ ಖುಷಿಯಾಗಿ ಉಲ್ಲಾಸದಿಂದ ಇಟ್ಟುಕೊಳ್ಳುತ್ತಾನೆ.

Advertisement

Udayavani is now on Telegram. Click here to join our channel and stay updated with the latest news.

Next