ಬೆಳಗಾವಿ: ತನ್ನ ಮಗಳ ಮೇಲೆ ಅತ್ಯಾಚಾರ ಎಸಗಲು ಹೋದ ಪಾಪಿ ಪತಿಯನ್ನು ಪತ್ನಿಯೇ ಹತ್ಯೆಗೈದು ದೇಹವನ್ನು ಎರಡು ತುಂಡು ಮಾಡಿ ನಿರ್ಜನ ಪ್ರದೇಶದಲ್ಲಿ ವಿಲೇವಾರಿ ಮಾಡಿರುವ ಆಘಾತಕಾರಿ ಘಟನೆಯೊಂದು ಬೆಳಗಾವಿಯ ಜಿಲ್ಲೆಯ ಚಿಕ್ಕೋಡಿ ಗ್ರಾಮದ ಉಮರಾಣಿ ಗ್ರಾಮದಲ್ಲಿ ನಡೆದಿದೆ.
ಹತ್ಯೆಯಾದ ವ್ಯಕ್ತಿಯನ್ನು ಶ್ರೀಮಂತ ಇಟ್ನಾಳೆ ಎನ್ನಲಾಗಿದ್ದು ಆತನ ಪತ್ನಿ ಸಾವಿತ್ರಿ ಇಟ್ನಾಳೆ(30) ಹತ್ಯೆ ಆರೋಪಿಯಾಗಿದ್ದಾಳೆ.
ರಾತ್ರಿ ಮಕ್ಕಳು ಮಲಗಿದ್ದ ವೇಳೆ ಕುಡಿದ ಮತ್ತಿನಲ್ಲಿ ಶ್ರೀಮಂತ ಇಟ್ನಾಳೆ ತನ್ನ ಪತ್ನಿಯ ಜೊತೆ ಸರಸಕ್ಕೆ ಮುಂದಾಗಿದ್ದಾನೆ ಆದರೆ ಪತ್ನಿ ಒಪ್ಪದೇ ಇದ್ದಾಗ ತನ್ನ ಮಗಳ ಮೇಲೆ ಎರಗಲು ಹೋಗಿದ್ದಾನೆ ಇದರಿಂದ ಕೋಪಗೊಂಡ ಪತ್ನಿ ಪತಿಯ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಹತ್ಯೆಗೈದಿದ್ದಾಳೆ ಬಳಿಕ ಮೃತದೇಹ ಇಲ್ಲೇ ಇದ್ದರೆ ತಾನು ಹಾಗೂ ಮಕ್ಕಳಿಗೆ ತೊಂದರೆ ಆಗುತ್ತದೆ ಎಂದು ಯೋಚಿಸಿ ಮನೆಯಿಂದ ದೂರ ನಿರ್ಜನ ಪ್ರದೇಶದಲ್ಲಿ ವಿಲೇವಾರಿ ಮಾಡಲು ಯೋಚಿಸಿದ್ದಾಳೆ ಆದರೆ ಇದು ಒಬ್ಬಳಿಂದ ಕಷ್ಟ ಸಾಧ್ಯ ಎಂದು ತಿಳಿದು ಪತಿಯ ದೇಹವನ್ನು ಮಾರಾಕಾಸ್ತ್ರದಿಂದ ಎರಡು ತುಂಡು ಮಾಡಿ ಒಂದು ಬ್ಯಾರೆಲ್ ನ ಒಳಗೆ ಹಾಕಿ ಮಧ್ಯರಾತ್ರಿ ಬ್ಯಾರೆಲ್ ಅನ್ನು ದೂಡಿಕೊಂಡು ಹೋಗಿ ನಿರ್ಜನ ಪ್ರದೇಶದಲ್ಲಿ ದೇಹವನ್ನು ವಿಲೇವಾರಿ ಮಾಡಿ ಬಂದು ಬ್ಯಾರೆಲ್ ಅನ್ನು ನೀರಿನಲ್ಲಿ ತೊಳೆದು ಬಳಿಕ ಬಾವಿಗೆ ಎಸೆದಿದ್ದಾಳೆ.
ಇದಾದ ಬಳಿಕ ಮನೆಗೆ ಬಂದು ಕೃತ್ಯಕ್ಕೆ ಬಳಸಿದ್ದ ಮಾರಕಾಸ್ತ್ರ, ರಕ್ತಸಿಕ್ತವಾದ ಹಾಸಿಗೆ, ಬಟ್ಟೆಗಳನ್ನು ಒಂದು ಚೀಲದಲ್ಲಿ ಹಾಕಿ ಚೀಲಕ್ಕೆ ಕಲ್ಲು ಕಟ್ಟಿ ಬಾವಿಗೆ ಎಸೆದಿದ್ದಾಳೆ. ಅಲ್ಲದೆ ಮನೆಯನ್ನು ಸ್ವಚ್ಛಗೊಳಿಸಿ, ತಾನು ಸ್ನಾನ ಮಾಡಿ ಬಳಿಕ ಕೃತ್ಯ ಎಸಗಿದ ವೇಳೆ ಮೈಮೇಲೆ ಇದ್ದ ಬಟ್ಟೆಯನ್ನು ಸುಟ್ಟು ಹಾಕಿ ಬೂದಿಯನ್ನು ತಿಪ್ಪೆಗೆ ಎಸೆದಿದ್ದಾಳೆ, ಅಲ್ಲದೆ ಕೃತ್ಯಕ್ಕೆ ಎಸಗಿದ ಕಲ್ಲನ್ನ ತೊಳೆದು ಬಚ್ಚಿಟ್ಟಿದ್ದಾಳೆ. ಗಂಡನ ಮೊಬೈಲ್ ಕೂಡ ಸ್ವಿಚ್ ಆಫ್ ಮಾಡಿ ಮನೆಯಲ್ಲಿಟ್ಟಿದ್ದಳು ಅಷ್ಟೋತ್ತಿಗೆ ಎಚ್ಚರಗೊಂಡ ಮಗಳಿಗೆ ತಂದೆಯನ್ನು ಹತ್ಯೆ ಮಾಡಿರುವ ವಿಚಾರ ಯಾರ ಬಳಿಯೂ ಹೇಳದಂತೆ ಗದರಿಸಿದ್ದಾಳೆ.
ಇತ್ತ ಬೆಳಗಾಗುತ್ತಿದ್ದಂತೆ ಶ್ರೀಮಂತ ಇಟ್ನಾಳೆ ಶವ ಜಮೀನಿನಲ್ಲಿ ಪತ್ತೆಯಾಗಿದೆ ಜೊತೆಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿದೆ ಪ್ರಕರಣ ಕೈಗೆತ್ತಿಕೊಂಡ ಪೊಲೀಸರು ಮೊದಲು ಶ್ರೀಮಂತ ಇಟ್ನಾಳೆ ಪತ್ನಿ ಸಾವಿತ್ರಿಯನ್ನು ವಿಚಾರಣೆ ನಡೆಸಿದ್ದಾರೆ ಮೊದ ಮೊದಲು ತನಗೆ ಗೊತ್ತೇ ಇಲ್ಲ ಎಂದ ಪತ್ನಿ ಬಳಿಕ ಪೊಲೀಸರು ಅವರ ಶೈಲಿಯಲ್ಲೇ ವಿಚಾರಣೆ ನಡೆಸಿದ ವೇಳೆ ತಾನು ಮಾಡಿದ ಕೃತ್ಯವನ್ನು ಒಪ್ಪಿಕೊಂಡಿದ್ದಾಳೆ.
ನಿತ್ಯ ಕಿರುಕುಳ ನೀಡುತ್ತಿದ್ದ ಪತಿ:
ವಿಚಾರಣೆ ವೇಳೆ ಪತಿ ದಿನಾ ಕುಡಿದು ಹಣ ಕೊಡುವಂತೆ ಪೀಡಿಸುತ್ತಿದ್ದ ಅಲ್ಲದೆ ತನಗೆ ಬೈಕ್ ತೆಗಿಸಿಕೊಡುವಂತೆ ಕಿರುಕುಳ ನೀಡುತ್ತಿದ್ದ ಹಣ ಇಲ್ಲದಿದ್ದರೆ ಯಾರ ಜೊತೆಗಾದರೂ ಮಲಗಿ ಹಣ ಕೊಡು ಎನ್ನುತ್ತಿದ್ದ ಇದೇ ಕಾರಣಕ್ಕೆ ತಾನು ಪರ ಪುರುಷರ ಜೊತೆಗೆ ಸಂಬಂಧ ಇಟ್ಟುಕೊಂಡಿದ್ದಾಗಿ ಒಪ್ಪಿಕೊಂಡಿದ್ದಾಳೆ.
ಕೊನೆಯಲ್ಲಿ ಮಗಳ ಮೇಲೆ ಎರಗಳು ಹೋದ ವಿಚಾರದಲ್ಲಿ ಕೋಪಗೊಂಡು ಪತಿ ಮಲಗಿದ್ದಾಗ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆಗೈದಿರುವುದಾಗಿ ಒಪ್ಪಿಕೊಂಡಿದ್ದಾಳೆ, ಸದ್ಯ ಆರೋಪಿ ಸಾವಿತ್ರಿಯನ್ನು ಪೊಲೀಸರು ಬಂಧಿಸಿ ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: Udupi: ಪುನಃ ಥಿಯೇಟರ್ ಪ್ರಸ್ತುತಪಡಿಸುತ್ತದೆ – ಯೋಗಿ ಮತ್ತು ಭೋಗಿ