Advertisement
2001ರ ಜನಗಣತಿ ಪ್ರಕಾರ ಜಿಲ್ಲೆಯ ಜನಸಂಖ್ಯೆ 1,25,170 ಇದೆ. 2043ನೇ ಸಾಲಿನ ಅಂದಾಜು ಜನಸಂಖ್ಯೆ 3,69,600 ಆಧರಿಸಿ ಯೋಜನೆ ತಯಾರಿಸಲಾಗಿದೆ. ತಲಾವಾರು 110 ಲೀಟರ್‌ನಂತೆ ಮತ್ತು 2028ಕ್ಕೆ 28.84 ದಶಲಕ್ಷ ಲೀಟರ್, 2043ಕ್ಕೆ 40.79 ದಶಲಕ್ಷ ಲೀಟರ್ ಎಂದು ಅಂದಾಜಿಸಿ ನಗರದ ಒಳಚರಂಡಿ ಯೋಜನೆ ಕಾಮಗಾರಿಯನ್ನು ನಿರ್ವಹಿಸಲಾಗುತ್ತಿದೆ.
ವಾರ್ಡ್‌ಗಳಲ್ಲಿ ಪ್ರಗತಿಯಲ್ಲಿದೆ ಎನ್ನುವುದು ಕಡತಕ್ಕಷ್ಟೇ ಸೀಮಿತವಾಗಿದೆ. 2015ರಲ್ಲೇ ಪೂರ್ಣಗೊಳ್ಳಬೇಕಿತ್ತು: ಚಿತ್ರದುರ್ಗ ನಗರದ ಸಮಗ್ರ ಒಳಚರಂಡಿ ಯೋಜನೆಯನ್ನು ರಾಜ್ಯ ಸರ್ಕಾರ ಶೇ. 70, ಆರ್ಥಿಕ ಸಂಸ್ಥೆ ಶೇ. 20 ಹಾಗೂ ಸ್ಥಳೀಯ ನಗರಸಭೆ ಶೇ. 10 ಅನುದಾನದಂತೆ 78.47 ಕೋಟಿ ರೂ.ಗಳಲ್ಲಿ ಅನುಷ್ಠಾನಗೊಳಿಸಲಾಗಿದೆ. 2015ರ ಡಿಸೆಂಬರ್ ಅಂತ್ಯದ ವೇಳೆಗೆ ಕಾಮಗಾರಿ ಪೂರ್ಣಗೊಳ್ಳಬೇಕಿತ್ತು. ಆದರೆ ಕಾಮಗಾರಿ ಅವಧಿ ಪೂರ್ಣಗೊಂಡು ಮೂರು ವರ್ಷ ಕಳೆದರೂ ಸಮಗ್ರ ಒಳಚರಂಡಿ ಯೋಜನೆ ಕಾಮಗಾರಿ ಪೂರ್ಣಗೊಳ್ಳದೇ ಇರುವುದರಿಂದ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ.
Related Articles
Advertisement
ಯುಜಿಡಿ ಯೋಜನೆಯಡಿ ಬಾಕಿ ಇರುವ ಮೂರು ವೆಟ್‌ವೆಲ್‌ಗಳಿಗೆ ಪಂಪಿಂಗ್ ಮೆಶಿನರಿ ಕಾಮಗಾರಿಗೆ ಕಳೆ ಮಾರ್ಚ್ 7ರಂದು ಮೇ|| ಎಸ್.ಬಿ.ಎಂ ಪ್ರಾಜೆಕ್ಟ್ ಪುಣೆ ಇವರೊಂದಿಗೆ ಗುತ್ತಿಗೆ ಮಾಡಿಕೊಳ್ಳಲಾಗಿದ್ದು ಕಾಮಗಾರಿ ಆರಂಭವಾಗಬೇಕಿದೆ. ಅಲ್ಲದೆ 11 ಕೆವಿ ತ್ವರಿತ ವಿದ್ಯುತ್ ಮಾರ್ಗಗಳನ್ನು ಕಾಮಗಾರಿಗಳಿಗೆ ಟೆಂಡರ್ ಕರೆಯಲಾಗಿದ್ದು ಗುತ್ತಿಗೆದಾರರನ್ನು ನೇಮಕ ಮಾಡಲಾಗಿದೆ. ಮುಂದಿನ ವಾರ ಅಂದರೆ ಜೂನ್ 16ರಂದು ಕರಾರು ಒಪ್ಪಂದ ಮಾಡಿಕೊಂಡು ಆಗಸ್ಟ್‌ನಲ್ಲಿ ಕಾಮಗಾರಿ ಆರಂಭಿಸಲು ಉದ್ದೇಶಿಸಲಾಗಿದೆ.
ಯೋಜನಾ ವೆಚ್ಚದಲ್ಲೂ ಏರಿಕೆ: 2011ರಲ್ಲಿ ಯುಜಿಡಿ ಯೋಜನೆಗೆ 78.47 ಕೋಟಿ ರೂ.ಗೆ ಟೆಂಡರ್ ಕರೆದು ಕಾಮಗಾರಿ ಆರಂಭಿಸಲಾಗಿತ್ತು. ಪೂರ್ಣಗೊಳಿಸಲು ವಿಳಂಬ ಮಾಡಿದ್ದರಿಂದ ಯೋಜನಾ ವೆಚ್ಚದಲ್ಲಿ ಏರಿಕೆಯಾಗಿದೆ. 95.78 ಕೋಟಿ ರೂ.ಗೆ ಯೋಜನಾ ವೆಚ್ಚ ಏರಿಕೆ ಆಗಿರುವುದರಿಂದ 17.31 ಕೋಟಿ ರೂ. ಅಧಿಕ ಹೊರೆ ಬಿದ್ದಿದೆ. ಇಷ್ಟೆಲ್ಲ ಆದರೂ ಸರ್ಕಾರ ಮಾರ್ಚ್ 12ರಂದು 95.78 ಕೋಟಿ ರೂ.ಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡಿರುವುದು ಸೋಜಿಗ ಮೂಡಿಸಿದೆ.
ಹರಿಯಬ್ಬೆ ಹೆಂಜಾರಪ್ಪ