Advertisement
ಶಾರ್ಜಾದಲ್ಲಿ ನಡೆದ 1998ರ “ಕೋಕಾ ಕೋಲ ಕಪ್’ ಪಂದ್ಯಾವಳಿ ಸಚಿನ್ ತೆಂಡುಲ್ಕರ್ ಅವರ ಅಮೋಘ ಮೆರೆದಾಟಕ್ಕೆ ಸಾಕ್ಷಿಯಾಗಿತ್ತು. ಅಂದು ಆಸ್ಟ್ರೇಲಿಯ ವಿರುದ್ಧ ಸಚಿನ್ ಬೆನ್ನು ಬೆನ್ನಿಗೆ ಶತಕ ಬಾರಿಸಿ ಅಬ್ಬರಿಸಿದ್ದರು. ತಾನಿದನ್ನು ಕ್ಲಾಸಿಗೆ ಚಕ್ಕರ್ ಹೊಡೆದು ಕಣ್ತುಂಬಿಸಿಕೊಂಡಿದ್ದೆ ಎಂದು ರೈನಾ ನೆನಪಿಸಿಕೊಂಡಿದ್ದಾರೆ. ಅಂದ ಹಾಗೆ ರೈನಾಗೆ ಅಂದು ಕೇವಲ 12 ವರ್ಷ, 7ನೇ ತರಗತಿ ವಿದ್ಯಾರ್ಥಿ.
“ಪಾಜಿ (ತೆಂಡುಲ್ಕರ್) ಅಂದು ಆಸ್ಟ್ರೇಲಿಯ ವಿರುದ್ಧ ಸತತ 2 ಶತಕ ಬಾರಿಸಿ ಮೆರೆದಾಡಿದ್ದರು. ಕ್ಯಾಸೊವಿಚ್ ಎಸೆತಗಳನ್ನು ಸಿಕ್ಸರ್‌ಗೆ ಬಡಿ ದಟ್ಟಿದ್ದರು. ಆಗ ನಮ್ಮ ಮನೆಯಲ್ಲಿದ್ದುದು ಅಪ್‌ಟಾÅನ್ ಟಿವಿ. ದೂರದರ್ಶನ ಮಾತ್ರ ಪ್ರಸಾರವಾಗುತ್ತಿತ್ತು. ಶಾರ್ಜಾ ಪಂದ್ಯವಾದ ಕಾರಣ ನಾನು ಕೊನೆಯ 2 ಪೀರಿಯಡ್ಸ್ ಬಂಕ್ ಮಾಡಿ ಮನೆಗೆ ಓಡಿ ಬಂದು ಟಿವಿ ಮುಂದೆ ಕೂತಿದ್ದೆ…’ ಎಂದು ರೈನಾ ತಮ್ಮ ಶಾಲಾ ದಿನದ ಕ್ರಿಕೆಟ್ ಹುಚ್ಚನ್ನು ಬಣ್ಣಿಸಿದ್ದಾರೆ. “ನಾವು ನೋಡುತ್ತಿದ್ದುದು ಸಚಿನ್ ಪಾಜಿ ಮತ್ತು ದ್ರಾವಿಡ್ ಭಾಯ್ ಆಟ ಮಾತ್ರ. ಸಚಿನ್ ಔಟಾದೊಡನೆ ನಾವು ಖಾಲಿ ಮಾಡುತ್ತಿದ್ದೆವು’ ಎಂದು ಸುರೇಶ್ ರೈನಾ ನೆನಪಿಸಿಕೊಂಡರು.
Related Articles
Advertisement