ಉತ್ತರಾಖಂಡ: ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಸಹೋದರಿಯರು ಶುಕ್ರವಾರ (ಆ. 4) ಉತ್ತರಾಖಂಡದ ಗರ್ವಾಲ್‌ನಲ್ಲಿರುವ ದೇವಸ್ಥಾನವೊಂದರಲ್ಲಿ ಭೇಟಿಯಾದ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಶ್ರಾವಣ ಮಾಸದಲ್ಲಿ ಶಿವ ದೇವರಿಗೆ ಪ್ರಾರ್ಥನೆ ಸಲ್ಲಿಸಲು ಪ್ರಧಾನಿ ಮೋದಿ ಅವರ ಸಹೋದರಿ ವಸಂತಿಬೆನ್ ಅವರು ತಮ್ಮ ಪತಿಯೊಂದಿಗೆ ಪೌರಿ ಗರ್ವಾಲ್‌ನಲ್ಲಿರುವ ನೀಲಕಠ ಮಹಾದೇವ ದೇವಸ್ಥಾನಕ್ಕೆ ಆಗಮಿಸಿದ್ದರು.
ನಂತರ ಅವರು ಅಲ್ಲಿಂದ ಕೊಠಾರಿ ಗ್ರಾಮದ ಪಾರ್ವತಿ ದೇವಸ್ಥಾನಕ್ಕೆ ಭೇಟಿ ನೀಡಿದರು, ಅಲ್ಲಿ ಅವರು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಸಹೋದರಿ ಶಶಿ ದೇವಿ ಅವರನ್ನು ಭೇಟಿಯಾಗಿದ್ದಾರೆ.
ವಸಂತಿಬೆನ್ ಮತ್ತು ಶಶಿ ದೇವಿ ಅವರ ಭೇಟಿಯ ವಿಡಿಯೊವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಈಗ ಹರಿದಾಡುತ್ತಿದೆ. ಇಬ್ಬರೂ ಪರಸ್ಪರ ತಬ್ಬಿಕೊಳ್ಳುವುದು ಮತ್ತು ನಗು ಮೊಗದಿಂದ ಶುಭಾಶಯ ಕೋರಿಕೊಂಡರು ನಂತರ ಒಟ್ಟಿಗೆ ದೇವಸ್ಥಾನದ ಕಡೆಗೆ ತೆರಳಿ ಪ್ರಾರ್ಥನೆ ಸಲ್ಲಿಸಿದರು. ಇವರ ಈ ಆತ್ಮೀಯ ಕ್ಷಣಗಳು ವೀಡಿಯೋದಲ್ಲಿ ಸೆರೆಯಾಗಿವೆ.
ತಮ್ಮ ಟ್ವಿಟರ್ ಖಾತೆಯಲ್ಲಿ ಬಿಜೆಪಿ ನಾಯಕ ಅಜಯ್ ನಂದಾ ಅವರು ವಿಡಿಯೋ ವನ್ನು ಹಂಚಿಕೊಂಡಿದ್ದಾರೆ, “ಪ್ರಧಾನಿ ಮೋದಿ ಅವರ ಸಹೋದರಿ ವಸಂತಿಬೆನ್ ಮತ್ತು ಸಿಎಂ ಯೋಗಿ ಅವರ ಸಹೋದರಿ ಶಶಿ ದೇವಿ ಅವರ ಭೇಟಿಯು ಸರಳತೆ, ಭಾರತೀಯ ಸಂಸ್ಕೃತಿ ಮತ್ತು ಸಂಪ್ರದಾಯದ ಸಾರವನ್ನು ತೋರಿಸುತ್ತದೆ” ಎಂದು ಬರೆದಿದ್ದಾರೆ.