Advertisement
ಹೇಳಿಕೆಗೆ ಸಿಮೀತವಾದ ಸಚಿವರ ಹೇಳಿಕೆ: ಶುಕ್ರವಾರ ಮುಕ್ತಾಯಗೊಂಡ ಅಧಿವೇಶನದಲ್ಲೇ ವಿಧಾನ ಪರಿಷತ್ ಸದಸ್ಯ ಸುನೀಲ ವಲ್ಲಾಪುರೆ ಅವರ ಪ್ರಶ್ನೆಗೆ ಪ್ರವಾಸೋದ್ಯಮ ಸಚಿವ ಆನಂದಸಿಂಗ್ ಜಿಲ್ಲೆಯ ಪ್ರವಾಸಿ ತಾಣಗಳ ಬಳಿ ಪ್ರವಾಸಿಗರ ಅನುಕೂಲಕ್ಕಾಗಿ ಮೂಲಸೌಕರ್ಯಗಳಿಗೆ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
Related Articles
ಪ್ರವಾಸೋದ್ಯಮ ದಿನ ಹಂಪಿ ಉತ್ಸವ ಅಷ್ಟೇ ಏಕೆ ಪಕ್ಕದ ಬೀದರ್ ಜಿಲ್ಲೆಯಲ್ಲಿ ಬೀದರ್ ಉತ್ಸವ ನಡೆಯುತ್ತವೆ. ಆದರೆ ಕಲಬುರಗಿಯಲ್ಲಿ ಐತಿಹಾಸಿಕ ಉತ್ಸವಗಳೇ ನಡೆಯೋದಿಲ್ಲ. ಏನಿದ್ದರೂ ರಾಜಕೀಯ ಉತ್ಸವ ಎನ್ನುವಂತಾಗಿದೆ. ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಸಭೆ ಸಕಾಲಕ್ಕೆ ನಡೆಯುವುದೇ ಇಲ್ಲ. ಪ್ರಮುಖವಾಗಿ ರಾಜಕೀಯ ಜನಪ್ರತಿನಿಧಿಗಳಲ್ಲಿಯೇ ಪ್ರವಾಸ ತಾಣಗಳನ್ನು ಅಭಿವೃದ್ಧಿಪಡಿಸಿ, ಪ್ರವಾಸವನ್ನು ಒಂದು ಉದ್ಯಮ ಆಗಿಸಬೇಕೆಂಬ ಇಚ್ಛಾಶಕ್ತಿಯೇ ಇಲ್ಲ. ಆದ್ದರಿಂದಲೇ ಜಿಲ್ಲೆಯ ಪ್ರವಾಸೋದ್ಯಮ ಬೆಳೆದಿಲ್ಲ.
Advertisement
ದಿನಾಚರಣೆಗೆ ಸಿಮೀತ ಇಲಾಖೆಸೆ. 27 ವಿಶ್ವ ಪ್ರವಾಸೋದ್ಯಮ ದಿನ. ಈ ದಿನದಂದು ಮಾತ್ರ ಕಾರ್ಯಕ್ರಮವೊಂದನ್ನು ಆಯೋಜಿಸುವುದನ್ನು ಬಿಟ್ಟರೆ ಉಳಿದ ಸಮಯದಲ್ಲಿ ಇಲಾಖೆ ಯಾವುದೇ ಚಟುವಟಿಕೆಗಳನ್ನು ನಡೆಸುತ್ತಿಲ್ಲ. ವರ್ಷಂಪ್ರತಿ ಪ್ರವಾಸೋದ್ಯಮ ದಿನಕ್ಕೆ ಒಂದು ಘೋಷವಾಕ್ಯ ನೀಡಲಾಗುತ್ತದೆ. ಈ ವರ್ಷ ಸುಸ್ಥಿರ ಹಾಗೂ ಅಂತರ್ಗತ ಬೆಳವಣಿಗೆಗೆ ಪ್ರವಾಸೋದ್ಯಮ ಸಂದೇಶದಡಿ ಬೆಳಕಿಗೆ ಬಾರದ ಪ್ರವಾಸಿ ತಾಣಗಳು ಎಂಬುದಿದೆ. ಈ ಘೋಷ ವಾಕ್ಯವನ್ನು ಇಲಾಖೆ ಕಾರ್ಯರೂಪಕ್ಕೆ ತಂದಲ್ಲಿ ನೂರಾರು ಪ್ರವಾಸಿ ಹಾಗೂ ಐತಿಹಾಸಿಕ ತಾಣಗಳು ಬೆಳಕಿಗೆ ಬರುತ್ತವೆ. ಪ್ರಮುಖವಾಗಿ ಜಿಲ್ಲಾ ಪ್ರವಾಸೋದ್ಯಮದಲ್ಲಿ ಅಗತ್ಯ ಸಿಬ್ಬಂದಿಗಳೇ ಇಲ್ಲ. ಜಂಟಿ ನಿರ್ದೇಶಕರು ಹಾಗೂ ಉಪನಿರ್ದೇಶಕರೇ ಇಲ್ಲ. ಪ್ರಭಾರಿಗಳೇ ಕಾರ್ಯನಿರ್ವಹಿಸುತ್ತಿದ್ದಾರೆ. ಹೀಗಿದ್ದ ಮೇಲೆ ಪ್ರವಾಸಿ ತಾಣಗಳು ಅಭಿವೃದ್ಧಿ ಆಗುವುದು ಹೇಗೆ ಎಂದು ಹವ್ಯಾಸಿ ಪ್ರವಾಸಿಗರು ಪ್ರಶ್ನಿಸುತ್ತಾರೆ. ತೆರವು ಯಾವಾಗ?: ಕಲಬುರಗಿ ಮಹಾನಗರದ ಐತಿಹಾಸಿಕ ಕೋಟೆಯೊಳಗೆ ವಾಸವಾಗಿರುವರಿಗೆ ಬೇರೆಡೆ ವ್ಯವಸ್ಥೆ ಕಲ್ಪಿಸಿ ತೆರವುಗೊಳಿಸಲಾಗುತ್ತದೆ ಎಂಬುದಾಗಿ ಕಳೆದ ದಶಕಗಳ ಅವಧಿಯಿಂದ ಹೇಳುತ್ತಾ ಬರಲಾಗುತ್ತದೆಯೇ ಹೊರತು ಯಾವುದೇ ಕಾರ್ಯವಾಗುತ್ತಿಲ್ಲ. ಕೋಟೆಯೊಳಗಿನ ಜನರ ತೆರವುಗೊಳಿಸಲು ಮುಂದಾಗುವಂತೆ ಆದೇಶಗಳು ಹೊರಬಿದ್ದರೂ ಕಾರ್ಯಗತವಾಗುತ್ತಲೇ ಇಲ್ಲ. ಜಿಲ್ಲೆಯ ಪ್ರವಾಸಿ ತಾಣಗಳ ಮೂಲಕ ಸೌಕರ್ಯಕ್ಕಾಗಿ 8 ಕೋಟಿ ರೂ. ಪ್ರಸ್ತಾವನೆ ಕಳುಹಿಸಲಾಗಿದೆ. ಮಂಜೂರಾತಿಯಾಗಿ ಬಂದರೆ ಮತ್ತಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಸಾಧ್ಯವಾಗುತ್ತದೆ. ಕಲಬುರಗಿ ಬುದ್ಧ ವಿಹಾರ ಸಮೀಪ ಐದು ಎಕರೆ ಜಾಗದಲ್ಲಿ 5 ಕೋಟಿ ರೂ. ವೆಚ್ಚದಲ್ಲಿ ಕಲಾವನ ಸಾಂಸ್ಕೃತಿಕ ಲೋಕ ನಿರ್ಮಿಸಲಾಗುತ್ತಿದೆ.
ಪ್ರಭುಲಿಂಗ ತಳಕೇರಿ, ಡಿಡಿ, ಪ್ರವಾಸೋದ್ಯಮ ಇಲಾಖೆ ಐತಿಹಾಸಿಕ ತಾಣಗಳ ಸಂರಕ್ಷಣೆ, ಅಭಿವೃದ್ಧಿ ನಿಟ್ಟಿನಲ್ಲಿ ಪ್ರವಾಸೋದ್ಯಮ ಹಾಗೂ ಪುರಾತತ್ವ ಇಲಾಖೆ ಜಿಲ್ಲೆಯಲ್ಲಿ ಏನು ಮಾಡುತ್ತಿದೆ ಎಂಬುದು ತಿಳಿಯದಂತಾಗಿದೆ. ಪ್ರವಾಸೋದ್ಯಮ ದ್ವಿಗುಣಗೊಳ್ಳುವ ಬದಲು ಪ್ರಯಾಸವಾಗುತ್ತಿದೆ. ಪ್ರವಾಸಿ ಹೆಲ್ಪ ಡೆಸ್ಕ್ವೂ ಇಲ್ಲ. ವರ್ಷಕ್ಕೊಮ್ಮೆ ಪ್ರವಾಸೋದ್ಯಮ ದಿನಾಚರಣೆಗೆ ಇಲಾಖೆ ಸಿಮೀತವಾಗಿದೆ.
ಬಸವರಾಜ ರಾವೂರ, ಪ್ರವಾಸಿ ಮಾರ್ಗದರ್ಶಿ *ಹಣಮಂತ ರಾವ ಭೈರಾಮಡಗಿ