Advertisement
ಸುರಕ್ಷಿತವಲ್ಲಕಲ್ಲಡ್ಕ – ಕಾಂಞಂಗಾಡು ಅಂತಾ ರಾಜ್ಯ ಹೆದ್ದಾರಿಯು ರಾಷ್ಟ್ರೀಯ ಹೆದ್ದಾರಿಯಾಗಲಿದೆ ಎಂಬ ಮಾತು 6 ತಿಂಗಳ ಹಿಂದೆಯೇ ಕೇಳಿಬರುತ್ತಿದೆ. ಕೇರಳದಲ್ಲಿ ಕಾಮಗಾರಿ ಆರಂಭವಾ ಗಿದೆ ಎಂದೂ ಮಾಹಿತಿ ಬಂದಿತ್ತು. ಆದರೆ ಕರ್ನಾಟಕದಲ್ಲಿ ಈ ಬಗ್ಗೆ ಸರ್ವೆಯನ್ನೂ ನಡೆಸಲಾಗಲಿಲ್ಲ ವೆಂದು ಸಂಬಂಧಪಟ್ಟವರು ತಿಳಿಸಿ ದ್ದರು. ಕಲ್ಲಡ್ಕ – ಕಾಂಞಂಗಾಡು ಅಂತಾರಾಜ್ಯ ಹೆದ್ದಾರಿಯು ಬೆಂಗಳೂರು- ಕಾಸರಗೋಡು ಸಂಚರಿಸಲು ಅತ್ಯಂತ ಹತ್ತಿರವಾದ ಮಾರ್ಗವಾಗಿದೆ. ಸರಕು ಸಾಗಾಟಕ್ಕೆ ಈ ಮಾರ್ಗದಲ್ಲಿ ಅನೇಕ ಲಾರಿಗಳೂ ಸಂಚರಿಸುತ್ತವೆ. ಆದರೆ ರಸ್ತೆ ಸುಸಜ್ಜಿತವಾಗಿಲ್ಲ. ಘನ ಲಾರಿಗಳು ಸಂಚರಿಸಿದರೆ ಇತರ ವಾಹನಗಳ ಸಂಚಾರಕ್ಕೆ ಬಹಳಷ್ಟು ಸಮಸ್ಯೆಯಾಗುತ್ತದೆ. ಅಗಲ ಕಿರಿದಾಗಿರುವುದರಿಂದ ರಸ್ತೆ ಸುರಕ್ಷಿತವಾಗಿಲ್ಲ.
ಕಲ್ಲಡ್ಕ – ಕಾಂಞಂಗಾಡು ಅಂತಾರಾಜ್ಯ ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಘೋಷಿಸಲಾಗಿದೆ. ಆದರೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಇನ್ನೂ ರಸ್ತೆಯನ್ನು ಸ್ವಾಧೀನಕ್ಕೆ ಪಡೆದುಕೊಂಡಿಲ್ಲ. ಡಿಪಿಆರ್ ಸಿದ್ಧಪಡಿಸಲು ಕೇಂದ್ರದ ಆದೇಶವಾಗಿದ್ದು, ಆ ವರದಿ ಬಳಿಕ ಹೆದ್ದಾರಿ ಪ್ರಾಧಿಕಾರ ಈ ರಸ್ತೆಗೆ ಅನುದಾನ ಬಿಡುಗಡೆ ಮಾಡಲಿದೆ. ಅಲ್ಲಿಯ ತನಕ ಲೋಕೋಪಯೋಗಿ ಇಲಾಖೆಯೇ ಈ ರಸ್ತೆಯ ಜವಾಬ್ದಾರಿಯನ್ನು ಹೊಂದಿದೆ.
Related Articles
Advertisement
20 ಕಿ.ಮೀ. ದೂರ ಅಭಿವೃದ್ಧಿಯಾಗಬೇಕುಕೇರಳದ ಸಾರಡ್ಕ ಗಡಿಯಿಂದ ಅಡ್ಕಸ್ಥಳ ಸೇತುವೆ ತನಕ ರಸ್ತೆ ವಿಸ್ತರಣೆ ಕಾಮಗಾರಿ ಆರಂಭವಾಗಿದ್ದು, ಬದಿಯಡ್ಕ ವರೆಗೆ ಅಲ್ಲಲ್ಲಿ ವಿಸ್ತರಣೆ ಕಾಮಗಾರಿ ನಡೆಯುತ್ತಿದೆ. ಆರಂಭ ಹಾಗೂ ಕೊನೆಯಲ್ಲಿ ಕಾಮಗಾರಿ ಪೂರ್ತಿಯಾಗಿ ರಸ್ತೆ ಅಗಲವಾಗಿದ್ದರೂ ಮಧ್ಯೆ ಸುಮಾರು 20 ಕಿ.ಮೀ. ದೂರ ರಸ್ತೆ ಕಿರಿದಾಗಿ ಉಳಿದಿದೆ. ಈ ಭಾಗವು ಅಪಘಾತ ಆಹ್ವಾನಿಸುತ್ತಿದೆ. ರಸ್ತೆ ಕುಸಿಯುವ ಭೀತಿಸಾರಡ್ಕ ಗಡಿಯಲ್ಲಿ ತೊರೆಯ ಬದಿಯಲ್ಲಿ ಹೆದ್ದಾರಿ ಹಾದು ಹೋಗುತ್ತಿದ್ದು, ಕೊರೆತಕ್ಕೊಳಗಾಗಿದೆ. ಘನ ಲಾರಿಗಳ ಸಂಚಾರ ಸಂದರ್ಭ ರಸ್ತೆಯ ಭೂಭಾಗ ಕುಸಿತಕೊಳ್ಳಗಾಗುವ ಭೀತಿಯಿದೆ. ಇದೇ ರೀತಿ ಸಾರಡ್ಕ ಚೆಕ್‌ಪೋಸ್ಟ್ ಸಮೀಪವೂ ಕುಸಿತ ಭೀತಿ ಇದೆ.
ತಾತ್ವಿಕ ಒಪ್ಪಿಗೆ ಸಿಕ್ಕಿದೆ
ವಿಟ್ಲ-ಅಡ್ಯನಡ್ಕ ಅಂತಾರಾಜ್ಯ ಹೆದ್ದಾರಿಯು ರಾಷ್ಟ್ರೀಯ ಹೆದ್ದಾರಿ ಯಾಗುವುದಕ್ಕೆ ತಾತ್ವಿಕ ಒಪ್ಪಿಗೆ ಸಿಕ್ಕಿದೆ. ಯಾವುದೇ ಮುಂದಿನ ಬೆಳವಣಿಗೆಗಳು ಲೋಕೋಪಯೋಗಿ ಇಲಾಖೆಗೆ ಬರುವುದಿಲ್ಲ. ಅದು ರಾಷ್ಟ್ರೀಯ ಹೆದ್ದಾರಿ ಇಲಾಖೆ ವ್ಯಾಪ್ತಿಗೆ ಸೇರಿದ್ದು. ಆರಂಭದಲ್ಲಿ ಸರ್ವೆ ಆಗಬೇಕು. ಆ ಮೂಲಕ ಮುಂದಿನ ಅಭಿವೃದ್ಧಿ ಕಾರ್ಯಗಳು ಚಾಲನೆಗೆ ಬರುತ್ತವೆ.
– ಉಮೇಶ್ ಭಟ್, ಕಾರ್ಯನಿರ್ವಾಹಕ ಎಂಜಿನಿಯರ್, ಪಿಡಬ್ಲ್ಯೂಡಿ, ಬಂಟ್ವಾಳ
ಉದಯಶಂಕರ್ ನೀರ್ಪಾಜೆ