Advertisement

ಹಾಲು ಉತ್ಪಾದಕರ ಸಂಘದ ಚುನಾವಣಾ ಘೋಷಣೆ ಯಾವಾಗ?

01:34 PM Dec 18, 2021 | Team Udayavani |

ಚನ್ನರಾಯಪಟ್ಟಣ: ತಾಲೂಕಿನ ನುಗ್ಗೇಹಳ್ಳಿ ಹೋಬಳಿ ಹೆಬ್ಬಳಲು ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಚುನಾವಣೆ ದಿನಾಂಕ ಘೋಷಣೆ ಮಾಡಿದ ಸಹಕಾರ ಅಭಿ ವೃದ್ಧಿ ಅಧಿಕಾರಿ ನಾಮಪತ್ರ ಪಡೆಯಲು ಗ್ರಾಮಕ್ಕೆ ಆಗಮಿಸಿಲ್ಲ ಎಂದು ಆರೋಪಿಸಿ ಸಂಘದ ಸದಸ್ಯರು ಹಾಗೂ ಗ್ರಾಮಸ್ಥರು ಸಂಘದ ಕಚೇರಿ ಮುಂಭಾಗ ಧರಣಿ ನಡೆಸಿದರು.

Advertisement

ಹೆಬ್ಬಳಲು ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘ ಸದಸ್ಯೆ ಯಶೋಧಮ್ಮ ಧರಣಿ ನಿರತರನ್ನು ಉದ್ದೇಶಿಸಿ ಮಾತನಾಡಿದರು, ಡಿ.25 ರಂದು ಸಂಘದ ಚುನಾವಣೆ ನಡೆಸುವಂತೆ ಡಿ.3 ರಂದು ಸಂಘದ ಕಚೇರಿ ಒಳಗೆ ಹಾಗೂ ಹೊರಗೆ ಚುನಾವಣಾ ಪ್ರಕ್ರಿಯೆಯ ಮಾಹಿತಿ ಚೀಟಿಯನ್ನುಸಹಕಾರ ಅಭಿವೃದ್ಧಿ ಅಧಿಕಾರಿ ವಿ.ಸುನಿಲ್‌ ಅಂಟಿಸಿಹೋದರು ಈ ವರೆಗೂ ಗ್ರಾಮಕ್ಕೆ ಆಗಮಿಸಿಲ್ಲ ಎಂದು ಆರೋಪಿಸಿದರು.

ಡಿ.11-17ರವರೆಗೆ ನಾಮಪತ್ರ ಸಲ್ಲಿಕೆಗೆ ಕಡೇ ದಿನ ಆಗಿದ್ದು. ಡಿ.16 ಹಾಗೂ ಡಿ.17 ರಂದು ಸಂಘದ ಚುನಾವಣೆ ಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳು ಬೆಳಗ್ಗೆ ಹಾಲು ಹಾಕುವ ಸಮಯ 6 ಗಂಟೆಯಿಂದ ಸಂಜೆ ವರೆಗೆ ಡೇರಿ ಮುಂಭಾಗ ಕುಳಿತರೂ ಅಧಿಕಾರಿ ಇತ್ತ ಸುಳಿಯು ತ್ತಿಲ್ಲ ಚುನಾವಣಾಧಿಕಾರಿ ಸುನಿಲ್‌ ಅವರಿಗೆ ದೂರವಾಣಿ ಕರೆ ಮಾಡಿದರೆ ಸಂಘದ ಸದಸ್ಯರನ್ನೇ ಆಪಾದಿಸುತ್ತಾರೆ.

ರಾಗಿ ಒಕ್ಕಣೆ, ಜೋಳ ಕಟಾವು ಕೆಲಸ ಬಿಟ್ಟು ಸಂಘದ ಚುನಾವಣೆಗಾಗಿ ಕಳೆದ ಎರಡು ದಿವಸದಿಂದ ನಾಮಪತ್ರ ಸಲ್ಲಿಸಲು 9 ಮಂದಿ ಸದಸ್ಯರು ಡೇರಿ ಮುಂದೆ ಕುಳಿತುಕೊಳ್ಳುವಂತಾಗಿದೆ. ತಾಲೂಕು ಮಟ್ಟದ ಅಧಿಕಾರಿ ಈ ರೀತಿ ಚುನಾವಣೆಯನ್ನು ಹಗುರವಾಗಿ ಪರಿಗಣಿಸಿರುವುದರಿಂದ ಗ್ರಾಮದಲ್ಲಿ ಅಶಾಂತಿ ಸೃಷ್ಟಿಯಾಗಿದೆ. ಮೇಲಧಿಕಾರಿಗಳು ಇಂಥ ಅಧಿಕಾರಿಗಳ ವಿರುದ್ದ ಕ್ರಮಕೈಗೊಳ್ಳಬೇಕು ಇಲ್ಲವೆ ಜಿಲ್ಲಾಧಿಕಾರಿ ಕಚೇರಿ ಮುಂದೆ ಧರಣಿ ನಡೆಸಲಾಗುವುದು ಎಂದರು.

ಸದಸ್ಯೆ ಸೌಮ್ಯ ಮಾತನಾಡಿ ಮಹಿಳಾ ಸಹಕಾರ ಸಂಘದ ಪದಾಧಿಕಾರಿಗಳ ಸ್ಥಾನಕ್ಕೆ 13 ಮಂದಿ ಆಯ್ಕೆಯಾಗಬೇಕಿದ್ದು, ಸಾಮಾನ್ಯ ಕ್ಷೇತ್ರದಿಂದ 9 ಮಂದಿ, ಎಸ್‌ಸಿ ಒಬ್ಬರು, ಎಸ್‌ಟಿ ಒಬ್ಬರು, ಹಿಂದುಗಳಿದ ವರ್ಗ ಎ. ಒಬ್ಬರು ಹಿಂದುಗಳಿದ ವರ್ಗ ಬಿಒಬ್ಬರು ಆಯ್ಕೆಯಾಗಬೇಕಿದೆ. ಅಧಿಕಾರಿಗಳೇ ಇತ್ತ ಸುಳಿಯುತ್ತಿಲ್ಲ ಎಂದು ಆರೋಪಿಸಿದರು.

Advertisement

ಗುಪ್ತ ಸಭೆ: ರಾಜಿ ಅನುಮಾನ :

ಚುನಾವಣಾಧಿಕಾರಿಯಾಗಿರುವ ಸಹಕಾರ ಸಂಘದ ಅಭಿವೃದ್ಧಿ ಅಧಿಕಾರಿ ವಿ.ಸುನಿಲ್‌ ಡಿ.15 ರಂದು ಗ್ರಾಮಕ್ಕೆ ಆಗಮಿಸಿ ಸಹಕಾರ ಸಂಘದ ಕಚೇರಿಯಲ್ಲಿ ಈ ಹಿಂದಿನ ಅಧ್ಯಕ್ಷರು ಹಾಗೂ ಕೆಲನಿರ್ದೇಶಕರೊಂದಿಗೆ ಗೌಪ್ಯವಾಗಿ ಮಾತನಾಡಿದ್ದಾರೆ. ಕಚೇರಿಯಲ್ಲಿ ಸಭೆ ನಡೆಯುತ್ತಿರುವ ವಿಷಯತಿಳಿದಾಗ ನಾವು ಕಚೇರಿ ಒಳಗೆ ಹೋಗಲು ಪ್ರಯತ್ನಿಸಿದೆವು ಇದಕ್ಕೆ ಅವಕಾಶ ನೀಡಲಿಲ್ಲ ಎಂದು ದೂರಿದರು. ಸಭೆ ನಡೆಯುತ್ತಿರುವಾಗ ಸದಸ್ಯರು ಡೇರಿಯೊಳಗೆ ಪ್ರವೇಶ ಮಾಡಿದರೆ ನಾವು ಕಚೇರಿಯಿಂದ ಹೊರಗೆ ಹೋಗಬೇಕಾಗುತ್ತದೆ ಎಂದು ಬೆದರಿಸಿ ಸಭೆ ನಡೆಸಿ ತೆರಳಿದವರು ಎರಡು ದಿವಸ ಆದರು ಗ್ರಾಮಕ್ಕೆ ಆಗಮಿಸದೆ ಇರುವುದು ನೋಡಿದರೆ ಹಳೆ ಅಧ್ಯಕ್ಷರೊಂದಿಗೆ ಶಾಮೀಲಾಗಿಅಧಿಕಾರ ಮುಂದುವರಿಸಲು ತಂತ್ರ ತಂತ್ರ ಮಾಡಿದ್ದಾರೆ ಎಂದು ಆರೋಪಿಸಿದರು.

ಹೆಬ್ಬಳಲು ಗ್ರಾಮದಲ್ಲಿ ಎರಡು ಗುಂಪುಗಳ ನಡುವೆ ವ್ಯಾಜ್ಯವಿದೆ. ಹಾಗಾಗಿ ನಾಮಪತ್ರ ಪಡೆಯಲು ಗ್ರಾಮಕ್ಕೆ ತೆರಳಲು ಸಾಧ್ಯವಾಗುತ್ತಿಲ್ಲ, ಚುನಾವಣೆ ಹಿನ್ನೆಲೆಯಲ್ಲಿ ಗುಂಪು ಘರ್ಷಣೆ ಸಂಭವಿಸಬಹುದು ಎಂದುಮುಂದಾಲೋಚನೆಯಿಂದ ನುಗ್ಗೇಹಳ್ಳಿ ಠಾಣೆಗೆ ಶುಕ್ರವಾರ ಅರ್ಜಿ ಸಲ್ಲಿಸಿದ್ದೇನೆ. ಚುನಾವಣೆ ಮುಂದೂಡಿದ್ದು ಮೇಲಧಿಕಾರಿಗೆಪತ್ರ ಬರೆದಿದ್ದೇನೆ ಅಲ್ಲಿಂದ ದಿನಾಂಕನಿಗದಿಯಾದ ಮೇಲೆ ಚುನಾವಣೆ ನಡೆಸಲಾಗುವುದು.-ವಿ.ಸುನಿಲ್‌,ಚುನಾವಣಾಧಿಕಾರಿ.

Advertisement

Udayavani is now on Telegram. Click here to join our channel and stay updated with the latest news.

Next