Advertisement

ಆರೋಗ್ಯ ಸೇವೆಯಲ್ಲಿ ನಿಷ್ಕಾಳಜಿ ಎಚ್ಚೆತ್ತುಕೊಳ್ಳುವುದು ಯಾವಾಗ?

06:00 AM Nov 16, 2018 | Team Udayavani |

ಈಗಷ್ಟೇ ಮಕ್ಕಳ ದಿನಾಚರಣೆಯನ್ನು ನಮ್ಮ ದೇಶ ಸಂಭ್ರಮದಿಂದ ಆಚರಿಸಿದೆ. ಎಂದಿನಂತೆಯೇ ಮಕ್ಕಳಿಗೆ ಭದ್ರ ಭವಿಷ್ಯವನ್ನು ಸೃಷ್ಟಿಸುವ ಬಗ್ಗೆ ಪುಂಖಾನುಪುಂಖವಾಗಿ ರಾಜಕಾರಣಿಗಳಿಂದ ಭಾಷಣಗಳು ಬಂದು ಹೋಗಿವೆ. ಆದರೆ ನಿಜಕ್ಕೂ ನಮ್ಮ ಸರಕಾರಗಳು ಮಕ್ಕಳ ವಿಷಯದಲ್ಲಿ ಅಗತ್ಯವಿರುವ ಕಾಳಜಿ ತೋರಿಸುತ್ತಿವೆಯೇ? ಆರೋಗ್ಯಪೂರ್ಣ ಭವಿಷ್ಯ ಸೃಷ್ಟಿಯಾಗಬೇಕಾದರೆ ಮಕ್ಕಳು ಆರೋಗ್ಯವಂತರಾಗಿರಬೇಕು. ಆದರೆ ಇಂದು ನಮ್ಮ ದೇಶದಲ್ಲಿ ಸಾವಿರಾರು ಮಕ್ಕಳು ಗುಣಪಡಿಸಬಹುದಾದ ರೋಗಗಳಿಗೆ ತುತ್ತಾಗಿ ಮೃತರಾಗುತ್ತಿದ್ದಾರೆ. ಇದು ಪ್ರತಿ ವರ್ಷ ದೇಶದಲ್ಲಿ ಹರಡುವ ರೋಗಗಳಿಂದ ರುಜುವಾತಾಗುತ್ತಲೇ ಇದೆ. ಆದರೆ ಸರಕಾರಗಳು ರೋಗ ತಡೆಗೆ ಪೂರ್ವ ತಯಾರಿ ಹೆಸರಿಗೆ ಮಾತ್ರ ನಡೆಸುತ್ತಿವೆ. 

Advertisement

ಒಮ್ಮೆ ಡೆಂಗ್ಯೂ, ಮತ್ತೂಮ್ಮೆ ಚಿಕೂನ್‌ಗುನ್ಯಾ, ಮಗದೊಮ್ಮೆ ಎನ್ಸೆಫ‌ಲೈಟಿಸ್‌ನಂಥ ರೋಗಗಳಿಗೆ ತುತ್ತಾಗುತ್ತಲೇ ಇವೆ ಮಕ್ಕಳು. ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಸಿಗದೇ ಅನೇಕ ಮಕ್ಕಳು ಸಾವನ್ನಪ್ಪುತ್ತಿವೆ. ಕೆಲವು ರೋಗಗಳು ಅನೇಕ ವರ್ಷಗಳಿಂದ ಎಲ್ಲಾ ರಾಷ್ಟ್ರಗಳಿಗೂ ಸವಾಲೆಸೆಯುತ್ತಲೇ ಇವೆ. ಇವುಗಳ ಬಗ್ಗೆ ಸಾಕಷ್ಟು ಅಧ್ಯಯನಗಳೂ ನಡೆಯುತ್ತಿವೆ. 

ಇತ್ತೀಚೆಗೆ ಬ್ರಿಟನ್‌ನ “ಸೇವ್‌ ದಿ ಚಿಲ್ಡ್ರನ್‌’  ಎಂಬ ಸರಕಾರೇತರ ಸಂಸ್ಥೆ ನಡೆಸಿದ ವಿಶ್ವಾಧ್ಯಯನದ ವರದಿಯ ಪ್ರಕಾರ, ಭಾರತದಲ್ಲಿ 2030ರ ವೇಳೆಗೆ ನ್ಯೂಮೋನಿ ಯಾದಿಂದ 17 ಲಕ್ಷಕ್ಕೂ ಹೆಚ್ಚು ಮಕ್ಕಳು ಮೃತಪಡಬಹುದು ಎಂದು ಆತಂಕಪಡಲಾಗಿದೆ. ಈ ರೋಗದ ಜಾಲಕ್ಕೆ ಸಿಲುಕಿ ಪ್ರಪಂಚದಾದ್ಯಂತ ಮುಂದಿನ 12 ವರ್ಷಗಳಲ್ಲಿ 1 ಕೋಟಿಗೂ ಹೆಚ್ಚು ಮಕ್ಕಳ ಜೀವ ಹೋಗಬಹುದು ಎನ್ನುವ ಆತಂಕಕಾರಿ ಅಂಶ ಈ ವರದಿಯಲ್ಲಿ ಬಹಿರಂಗಗೊಂಡಿದೆ. ಅದರಲ್ಲೂ ಭಾರತ, ಪಾಕಿಸ್ತಾನ, ನೈಜೀರಿಯಾ ಮತ್ತು ಕಾಂಗೋ ಈ ರೋಗದಿಂದ ಅತಿಹೆಚ್ಚು ತೊಂದರೆ ಅನುಭವಿಸಲಿವೆಯಂತೆ. ಈ ರೀತಿಯ ವರದಿಗಳು ಸಹಜವಾಗಿಯೇ ಒಂದು ದೇಶ ಮತ್ತು ಅದರ ಸರ್ಕಾರಗಳಿಗೆ ಚಿಂತೆಯ ವಿಷಯವಾಗಬೇಕಲ್ಲವೇ? ಆದರೆ ನಮ್ಮ ದೇಶದಲ್ಲಿ ಇಂಥ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸುವ ಪರಿಪಾಠವೇ ಇಲ್ಲವಾಗಿದೆ. 

ದೌರ್ಭಾಗ್ಯವೇನೆಂದರೆ, ಯಾವುದಾದರೂ ರೋಗ ಹರಡಲಾರಂಭಿಸಿ ಬಹುಬೇಗನೇ ಹತ್ತಾರು ಜನರ ಜೀವ ಹೋಗಿ, ಮಾಧ್ಯಮಗಳಲ್ಲಿ ಈ ಸುದ್ದಿ ಸದ್ದಾಗುವವರೆಗೂ ಸರಕಾರಗಳಿಗೆ ತಲೆಕೆಡಿಸಿಕೊಳ್ಳುವುದೇ ಇಲ್ಲ. ಈ ವರದಿಯ ಪ್ರಕಾರ ಭಾರತದಲ್ಲಿ 2016ರೊಂದರಲ್ಲೇ ನ್ಯೂಮೋನಿಯಾ ಮತ್ತು ಡಯೇರಿಯಾಕ್ಕೆ ತುತ್ತಾಗಿ 5 ವರ್ಷಕ್ಕಿಂತ ಕಡಿಮೆ ವಯೋಮಾನದ 2 ಲಕ್ಷ 60 ಸಾವಿರ ಮಕ್ಕಳ ಮೃತಪಟ್ಟಿವೆ. ಸಮಯಕ್ಕೆ ಸರಿಯಾಗಿ ಲಸಿಕೆ, ಉಪಚಾರ, ಚಿಕಿತ್ಸೆ ಮತ್ತು ಪೌಷ್ಟಿಕಾಹಾರ ಪೂರೈಕೆಯಲ್ಲಿ ಸುಧಾರಣೆ ಮಾಡುತ್ತಾ ಬಂದಿದ್ದರೆ ಅರ್ಧಕ್ಕರ್ಧ ಮಕ್ಕಳಾದರೂ ಬದುಕುಳಿಯುತ್ತಿದ್ದರು. ಈ ವರದಿಯಲ್ಲಿ ಭಾರತ ಸೇರಿದಂತೆ 15 ದೇಶಗಳು ಮಕ್ಕಳ ರಕ್ಷಣೆಗಾಗಿ ಈ ರೀತಿಯ ಸ್ವಾಸ್ಥ್ಯ ಪ್ರಣಾಳಿ ಜಾರಿಗೆ ತರುವಲ್ಲಿ ಹಿಂದುಳಿದಿವೆ ಎನ್ನಲಾಗಿದೆ. ದುರಂತವೆಂದರೆ ಇದೇ ಅಲ್ಲವೇನು? ಇಂದು ವೈದ್ಯಕೀಯ ಮತ್ತು ವೈಜ್ಞಾನಿಕ ವಲಯ ಅತ್ಯಂತ ಮುಂದುವರಿದೆ. 

ಭಾರತವೂ ಕೂಡ ಔಷಧೋದ್ಯಮ ಮತ್ತು ವೈದ್ಯಕೀಯ ಸಂಶೋಧನಾ ವಲಯದಲ್ಲಿ ಸದ್ದುಮಾಡುತ್ತಲೇ ಇದೆ. ಬಹುತೇಕ ರೋಗಗಳಿಗೆ ಚಿಕಿತ್ಸೆ ನೀಡುವ ತಂತ್ರಜ್ಞಾನ ಮತ್ತು ಜ್ಞಾನ ನಮ್ಮ ದೇಶಕ್ಕಿದೆ. ಆದರೆ, ಅನುಷ್ಠಾನ ಮಾತ್ರ ಸಾಧ್ಯವಾಗುತ್ತಲೇ ಇಲ್ಲ. ಸರ್ಕಾರಗಳು ಗಂಭೀರವಾಗುವವರೆಗೂ ಇದು ಸಾಧ್ಯವಾಗುವುದೂ ಇಲ್ಲ.  

Advertisement

ಸತ್ಯವೇನೆಂದರೆ, ಪ್ರತಿ ವರ್ಷ ಲಕ್ಷಾಂತರ ಮಕ್ಕಳು ದೇಶದಲ್ಲಿ “ಗುಣಪಡಿಸ ಬಹುದಾದ’ ರೋಗಗಳಿಂದ ಸಾಯುತ್ತಿದ್ದಾರೆ. ಮಕ್ಕಳನ್ನು ಕಾಪಾಡಿಕೊಳ್ಳಲಾಗದ ದೇಶ ಆರ್ಥಿಕವಾಗಿ ಎಷ್ಟೇ ಮುಂದುವರಿದರೇನು ಪ್ರಯೋಜನವಿದೆ? ಈ ಅಂಕಿ-ಸಂಖ್ಯೆಗಳು ನಮ್ಮ ದೇಶದಲ್ಲಿ ಸ್ವಾಸ್ಥ್ಯ ಸೇವೆಗಳಲ್ಲಿ ಯಾವ ರೀತಿಯ ಕೊರೆತೆಯಿದೆ ಎನ್ನುವುದಕ್ಕೆ ಹಿಡಿ  ದ ಕನ್ನಡಿಯಾಗಿದೆ. ಯಾವುದೇ ರೋಗವೂ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾದಾಗಲೇ ಸರಕಾರ‌ಗಳ ಕಣ್ಣುತೆರೆಯಬೇಕೇ? “ಪ್ರಿವೆನÒನ್‌ ಈಸ್‌ ಬೆಟರ್‌ ದೆನ್‌ ಕ್ಯೂರ್‌’ ಎನ್ನುವ ಮಾತು ಕೇವಲ ಭಾಷಣಕ್ಕಷ್ಟೇ ಸೀಮಿತವಾಗಬೇಕೇ? 

Advertisement

Udayavani is now on Telegram. Click here to join our channel and stay updated with the latest news.

Next