Advertisement
ವಿದೇಶದಲ್ಲಿ ಅಂಗವೈಕಲ್ಯ ಸಮಸ್ಯೆ ಹೊಂದಿದವರಿಗೆ ತಂತ್ರಜ್ಞಾನ ವರವಾಗಿ ಪರಿಣಮಿಸಿದೆ. ಇದಕ್ಕೊಂದು ನಿದರ್ಶನವೆಂಬಂತೆ ಕಾರು ವ್ಹೀಲ್‌ಚೇರ್ ಮೂಲಕ ಅಂಗವಿಕಲರೂ ಎಲ್ಲರಂತೆ ನಗರವನ್ನು ಸುತಾಡುವ ವಾತಾವರಣ ನಿರ್ಮಾಣವಾಗಿದೆ.
ಕಾರು ಈ ವ್ಹೀಲ್‌ಚೇರ್ ಅನ್ನುವ ಕಲ್ಪನೆ ಹುಟ್ಟಿಕೊಂಡದ್ದು ಲಡಿಸ್ಲಾವ್ ಬ್ರಾಜ್ಡಿಲ್ ಎಂಬುವವರಿಂದ. ಇದು ವಿಶೇಷವಾಗಿ ಅಂಗವಿಕಲರನ್ನು ಗುರಿಯಾಗಿಸಿಕೊಂಡು ಈ ಚೇಯರನ್ನು ವಿನ್ಯಾಸಗೊಳಿಸಲಾಗಿದೆ. ಈ ವ್ಹೀಲ್‌ಚೇರ್‌ನಿಂದ ಜೀವನ ಸಾಗಿಸುವವರಿಗೆ ನಗರವನ್ನು ಸುತ್ತು ಹಾಕಲು ತಮಗೆ ಬೇಕೆಂದಾಗ ಈ ವೀಲ್ ಚಯರ್ ಕಾರ್ ನಲ್ಲಿ ಸುತ್ತು ಹಾಕಬಹುದು. ಇಲ್ಲಿಗೂ ಪರಿಚಯವಾಗಲಿ ನಗರವನ್ನು ಸುತ್ತಾಡುವ ಬಯಕೆ ಇರುವ ಅದೆಷ್ಟೋ ಮಂದಿ ನಮ್ಮಲ್ಲಿ ಇರುತ್ತಾರೆ. ಆದರೆ ಅವರ ಅಂಗವಿಕಲತೆ ಅವರಿಗೆ ಶಾಪವಾಗಿ ಪರಿಣಮಿಸಿರುತ್ತದೆ. ಇಂತಹ ಕಾರುಗಳು ನಮ್ಮ ನಗರದಲ್ಲಿ ಪರಿಚಯವಾದಲ್ಲಿ ಯಾರ ಸಹಾಯವೇ ಇಲ್ಲದೆ ಈ ವ್ಹೀಲ್‌ಚೇರ್ ಕಾರ್‌ನಲ್ಲಿ ನಗರವನ್ನು ಸುತ್ತಾಡಬಹುದಾಗಿದೆ. ಪರ್ಯಾಯ ಪರಿಕಲ್ಪನೆ ಅಳವಡಿಕೆ ಇಂದಿನ ತುರ್ತು ಅಗತ್ಯ.
Related Articles
ಈ ಕಾರಿನ ಮುಂಭಾಗದಿಂದ ಬಲಕ್ಕೆ ತೆರೆದರೆ, ಅದು ಚಾಲಕನಿಗೆ ಅವನ / ಅವಳ ಗಾಲಿಕುರ್ಚಿಯೊಂದಿಗೆ ನೇರವಾಗಿ ಸವಾರಿ ಮಾಡಲು ಅನುವು ಮಾಡಿಕೊಡುತ್ತದೆ. ಕಾರಿನ ಫ್ರಂಟ್ -ಎಂಡ್ ಒಪನಿಂಗ್ ಎನ್ನುವುದು ನಾವೀನ್ಯತೆಯಾಗಿದ್ದು ಅದು ಚಾಲನೆ ಮಾಡುವ ಗಾಲಿಕುರ್ಚಿ ಬಳಕೆದಾರರ ಸ್ವಾವಲಂಬನೆಯನ್ನು ಹೆಚ್ಚಿಸುತ್ತದೆ.
Advertisement