ನಾನು ಸ್ವಲ್ಪ ಕಪ್ಪು, ಅಲ್ಲಲ್ಲ… ಕಂದು ನನ್ನ ಮೈ ಬಣ್ಣ, ಸ್ವಲ್ಪ ಸಪೂರ. ಹಾಗಂತ, ಗಾಳಿ ಬಂದಾಗ ಹಾರಿ ಹೋಗುವಷ್ಟು ಅಲ್ಲ ಆಯ್ತಾ… ಇನ್ನು ನನ್ನ ಮಾತು, ಅದು ನಿನಗೆ ಕಿರಿಕಿರಿ ಮಾಡಲ್ಲ. ತುಂಬಾ ಜನ ಹೇಳ್ತಾರೆ, ನಾನು ಜಾಸ್ತಿ ಮಾತಾಡಲ್ಲ ಅಂತ. ಆದರೆ, ಅವರ್ಯಾರಿಗೂ ಗೊತ್ತಿಲ್ಲ ನಾನು ಎಷ್ಟು ಮಾತಾಡ್ತೀನಿ ಅಂತ!
ಹೌದು, ಎಲ್ಲಿರುವೆ ನೀನು? ಯಾವಾಗಿಂದ ಕಾಯ್ತಿದ್ದೀನಿ ಗೊತ್ತಾ? ಈಗ ಬರ್ತೀಯಾ, ಮತ್ತೆ ಬರ್ತೀಯಾ ಅಂತ. ನಿನ್ನ ಪತ್ತೆಯೇ ಇಲ್ಲ. ಅದೆಲ್ಲಿರುವೆಯೋ ನಾಕಾಣೆ! ಬೇಗ ಬಾರೋ ಕಣ್ಣ ಮುಂದೆ… ನಿನ್ನ ಬಗ್ಗೆ ಅದೆಷ್ಟು ಹೊತ್ತು ಕನಸು ಕಾಣ್ತೆನೆ ಗೊತ್ತಾ? ಕನಸಲ್ಲಿಯೂ ನೀನೇ- ಮನಸಲ್ಲಿಯೂ ನೀನೇ. ನಿನ್ನ ಯೋಚನೆ ಬಿಟ್ಟು ಬೇರೆ ಏನೂ ಇಲ್ಲ. ನೀನು ಹೇಗಿರಬೇಕು ಎಂದು ಬರೆಯುವ ಮುನ್ನ ನಾನು ಹೇಗಿದ್ದೇನೆ ಎಂದು ಬರೆಯುತ್ತೇನೆ…
ನಾನು ಸ್ವಲ್ಪ ಕಪ್ಪು, ಅಲ್ಲಲ್ಲ… ಕಂದು ನನ್ನ ಮೈ ಬಣ್ಣ, ಸ್ವಲ್ಪ ಸಪೂರ. ಹಾಗಂತ, ಗಾಳಿ ಬಂದಾಗ ಹಾರಿ ಹೋಗುವಷ್ಟು ಅಲ್ಲ ಆಯ್ತಾ… ಇನ್ನು ನನ್ನ ಮಾತು, ಅದು ನಿನಗೆ ಕಿರಿಕಿರಿ ಮಾಡಲ್ಲ. ತುಂಬಾ ಜನ ಹೇಳ್ತಾರೆ, ನಾನು ಜಾಸ್ತಿ ಮಾತಾಡಲ್ಲ ಅಂತ. ಆದರೆ, ಅವರ್ಯಾರಿಗೂ ಗೊತ್ತಿಲ್ಲ ನಾನು ಎಷ್ಟು ಮಾತಾಡ್ತೀನಿ ಅಂತ! ಇನ್ನೊಂದು ಮಾತು, ಬೇರೆಯವರ ಮಾತನ್ನು ನೀ ಎಂದಿಗೂ ಕೇಳಬೇಡ. ನನ್ನ ಬಗ್ಗೆ ಇಷ್ಟು ಸಾಕು ಅಂತ ಅನ್ನಿಸ್ತಿದೆ.
ನೀನು ಹೇಗಾದರೂ ಇರು ಪರವಾಗಿಲ್ಲ, ಆದರೆ, ಸ್ಮಾರ್ಟ್ ಆಗಿದ್ದರೆ ಒಳ್ಳೇದು. ಏಕೆಂದರೆ, ನಾವು ಕೈ ಕೈ ಹಿಡಿದು ದೇವಸ್ಥಾನ, ಪಾರ್ಕ್ ಅಂತ ಸುತ್ತುವಾಗ, ನೋಡಿದವರು ಅವನು ಅಂಕಲ್ ತರಹ ಇದ್ದಾನೆ ಅಂತ ಹೇಳಬಾರದಲ್ಲವೇ? ಅದಕ್ಕೆ ಹಾಗ್ ಹೇಳಿದ್ದು… ಒಕೇನಾ? ಇನ್ನು ನೀನು ಕೆಲಸ ಹಿಡಿದು ಬ್ಯುಸಿ ಆದಮೇಲೆ ಆಗಾಗ್ಗೆ ನನ್ನ ನೆನಪು ಮಾಡಿಕೊಳ್ಳೋದನ್ನ ಮರೆಯಬೇಡ. ಯಾವಾಗಲೂ ಪ್ರಾಜೆಕ್ಟ್, ಡೆಡ್‌ಲೈನ್, ಟಾರ್ಗೆಟ್ ಅಂತ ಕೆಲಸದ ಹಿಂದೆ ಓಡಬೇಡ.
ನಿನಗೋಸ್ಕರ ಒಂದು ಜೀವ ಕಾಯ್ತಾ ಇದೆ ಅಂತ ನೆನಪಿಟ್ಟುಕೊಂಡಿರಬೇಕು ನೀನು. ನಿನ್ನ ಮನೆಯ ಬಗ್ಗೆಯೂ ನಾನು ತುಂಬಾ ಯೋಚಿಸುತ್ತೇನೆ. ಮುಂದೆ ನಿನ್ನದೇ ಮನೆಯಲ್ಲಿ ಇರಬೇಕಾದವಳಲ್ಲವೇ ನಾನು! ಜೈಲಿನಂಥ ನಾಲ್ಕು ಗೋಡೆಯ ಮಧ್ಯೆ ಇರಲು ಸಾಧ್ಯವಿಲ್ಲ ನನಗೆ. ಪ್ರಕೃತಿಯ ಮಡಿಲಲ್ಲಿ ವಿಶಾಲವಾದ ಮನೆ ಇರಬೇಕು. ಎಲ್ಲಿ ನೋಡಿದರೂ ಹಸಿರು ಹಸಿರಾಗಿರಬೇಕು. ಅಂಥ ಮನೆ ನಮ್ಮದಾದ್ರೆ ಅದೇ ಸ್ವರ್ಗ ಕಣೋ.
ನಂಗೆ ನಾಯಿ ಅಂದರೆ ಪ್ರಾಣ. ಅದಕ್ಕೇ ಮನೆಯಲ್ಲಿ ಒಂದು ನಾಯಿಯೂ ಬೇಕು. “ನಾನೇನು ಮಾಡ್ಲಿ ಸ್ವಾಮಿ, ನನ್ ಹುಡುಗಿ ನಾಯಿ ಪ್ರೇಮಿ’ ಅಂತ ನೀನು ಹಾಡಿದ್ರೂ ಪರವಾಗಿಲ್ಲ. ನೀನು ನನ್ನನ್ನು ಶೇಕಡಾ ಹತ್ತರಷ್ಟು ಪ್ರೀತಿಸಿದ್ರೆ, ನಾನು ನಿನ್ನನ್ನು ಶೇಕಡಾ ನೂರರಷ್ಟು ಪ್ರೀತಿಸ್ತೀನಿ ಅನ್ನೋದಂತೂ ಸತ್ಯ. ಅಷ್ಟೊಂದು ಪ್ರೀತಿ ಇದೆ ನನ್ನ ಹೃದಯದಲ್ಲಿ. ಎಲ್ಲರಂತೆ ನನಗೂ ನೂರಾರು ಆಸೆಗಳಿವೆ. ಬೆಟ್ಟದಷ್ಟು ಕನಸುಗಳಿವೆ.
ನನ್ನ ಆಸೆ, ಕನಸುಗಳಿಗೆ ನೀರು ಹಾಕಿ ಪೋಷಿಸುತ್ತೀಯಾ? ಯಾಕೋ ತುಂಬಾ ಕೊರೀತಿದ್ದೀನಿ ಅನ್ನಿಸ್ತಿದೆ. ನಿನಗಾಗಿ ಕ್ಷಣ ಕ್ಷಣವೂ ಕಾಯುತ್ತಿರುವೆ. ಇನ್ನೂ ಕಾಯಿಸಬೇಡ ಪ್ಲೀಸ್… ಆದಷ್ಟು ಬೇಗ ಬಾ… ಹಾ, ಮತ್ತೆ ಹೇಳ್ತಿದ್ದೀನಿ, ಒಂದೆರಡು ವರ್ಷ ಪ್ರೇಮಿಗಳಾಗಿರೋಣ, ಆಮೇಲೆ ಮದುವೆ! ಓಕೇನಾ?
* ರಕ್ಷಿತಾ ಪ್ರಭು