ನವದೆಹಲಿ: ತನ್ನ ಬಳಕೆದಾರರಿಗೆ ಖಾಸಗಿತನವನ್ನು ಕಾಪಾಡುವ ನಿಟ್ಟಿನಲ್ಲಿ ಮತ್ತೊಂದು ಹೆಜ್ಜೆಯಿಟ್ಟಿರುವ ವಾಟ್ಸ್‌ಆ್ಯಪ್, ಬಳಕೆದಾರರ ಚಾಟಿಂಗ್ ಸಂದೇಶಗಳು ಹಾಗೂ ಮತ್ತಿತರ ಮಲ್ಟಿಮೀಡಿಯಾ ಸಂದೇಶಗಳ ಬ್ಯಾಕಪ್ ಗೂ “ಎಂಡ್-ಟು-ಎಂಡ್’ ಎನ್‌ಕ್ರಿಪ್ಷನ್ ನೀಡಲಾಗಿದೆ.
ಈವರೆಗೆ, ಚಾಟಿಂಗ್ ಸಂದೇಶಗಳು ಹಾಗೂ ಮಲ್ಟಿಮೀಡಿಯಾ ಸಂದೇಶಗಳಿಗೆ ಮಾತ್ರ “ಎಂಡ್-ಟು-ಎಂಡ್’ ಎನ್‌ಕ್ರಿಪ್ಷನ್ ಭದ್ರತೆ ನೀಡಲಾಗಿತ್ತು.
ಇದನ್ನೂ ಓದಿ:2022 ಚುನಾವಣೆ ಟಾರ್ಗೆಟ್ : ‘ಜನ್ ಮನ್ ವಿಜಯ್’ ಅಭಿಯಾನಕ್ಕೆ ಅಖಿಲೇಶ್ ಯಾದವ್ ಚಾಲನೆ
ಆದರೆ, ವಾಟ್ಸ್‌ಆ್ಯಪ್ ಬಳಕೆದಾರ ತನ್ನ ಮೊಬೈಲ್ ಬದಲಾಯಿಸುವಾಗ ಪಡೆಯುವ ಸಂದೇಶಗಳ ಬ್ಯಾಕಪ್‌ಗೆ ಯಾವುದೇ ಸುರಕ್ಷತೆಯಿರಲಿಲ್ಲ.
ಇದನ್ನು ಅಂತರ್ಜಾಲದಲ್ಲಿ ಯಾರಾದರೂ ದುರ್ಬಳಕೆ ಮಾಡಿಕೊಳ್ಳುವಂಥ ಅಪಾಯವನ್ನು ತಪ್ಪಿಸಲು ಈ ರೀತಿಯ “ಎಂಡ್-ಟು-ಎಂಡ್’ ಎನ್‌ಕ್ರಿಪ್ಷನ್ ಒದಗಿಸಲಾಗಿದೆ ಎಂದು ವಾಟ್ಸ್‌ಆ್ಯಪ್ ತಿಳಿಸಿದೆ.