ನವದೆಹಲಿ: ಜನಪ್ರಿಯ ಮೆಸೇಜಿಂಗ್ ಆ್ಯಪ್ ವಾಟ್ಸಾಪ್ ನಲ್ಲಿ ಪ್ರತಿ ತಿಂಗಳು ಹೊಸ ಬಗೆಯ ಅಪ್ಡೇಡ್ ಗಳು ಹೊರ ಬೀಳುತ್ತವೆ. ಬಳಕೆದಾರರಿಗೆ ಇನ್ನಷ್ಟು ಸುಲಭವಾಗಲೆಂದು ವಾಟ್ಸಾಪ್ ಹೊಸ ಫೀಚರ್ಸ್ ಗಳನ್ನು ನೀಡುತ್ತದೆ.
ಇತ್ತೀಗಷ್ಟೇ ವಾಟ್ಸಾಪ್ ಪಿಕ್ಚರ್-ಇನ್-ಪಿಕ್ಚರ್ ಮೋಡ್ ಫೀಚರ್ಸ್ ಜಾರಿಗೆ ತಂದಿದೆ. ವಿಡಿಯೋ ಕರೆಗಳನ್ನು ಯಾವುದೇ ಅಡೆತಡೆಗಳಿಲ್ಲದೆ ಬಳಸಬಹುದಾಗಿದೆ. ಮೊದಲು ವಾಟ್ಸಾಪ್ ನಲ್ಲಿ ವಿಡಿಯೋ ಕರೆ ಮಾಡಿದರೆ, ಆ್ಯಪ್ ನಲ್ಲೇ ನಾವು ಇರಬೇಕಿತ್ತು. ಎಕ್ಸಿಟ್ ಬಟನ್ ಒತ್ತಿದರೆ ಕಾಲ್ ಕೂಡ ಕಟ್ ಆಗುವ ಸಾಧ್ಯತೆಯಿತ್ತು. ಆದರೆ ಹೊಸ ಪಿಕ್ಚರ್-ಇನ್-ಪಿಕ್ಚರ್ ಮೋಡ್ ಫೀಚರ್ಸ್ ನಲ್ಲಿ ಹೀಗೆ ಆಗುವುದಿಲ್ಲ. ಎಕ್ಸಿಟ್ ಅಥವಾ ಬ್ಯಾಕ್ ಬಟನ್ ಒತ್ತಿದರೆ ನಮ್ಮ ವಿಡಿಯೋ ಕರೆಗಳು ಕಟ್ ಆಗುವುದಿಲ್ಲ. ವಿಡಿಯೋ ಕಾಲ್ ಮಾಡುತ್ತಲೇ ನಾವು ಬೇರೆ ಆ್ಯಪ್ ಗಳನ್ನು ಬಳಸಬಹುದಾಗಿದೆ.
ಇದೀಗ ವಾಟ್ಸಾಪ್ ಮತ್ತೊಂದು ಹೊಸ ಫೀಚರ್ಸ್ ಗಳನ್ನು ಬಳಕೆದಾರರಿಗೆ ಪರಿಚಯಿಸಲು ರೆಡಿಯಾಗಿದೆ. ಅದು ಎಡಿಟ್ ಸೆಂಟ್ ಮೆಸೇಜ್ ಫೀಚರ್ಸ್ (ಕಳುಹಿಸಿದ ಮೆಸೇಜ್ ಎಡಿಟ್ ಮಾಡುವ ಆಯ್ಕೆ)
ಬಳಕೆ ಹೇಗೆ?: ಸದ್ಯ ವಾಟ್ಸಾಪ್ ನಲ್ಲಿ ಡಿಲೀಟ್ ಫಾರ್ ಎವರಿಒನ್ ಫೀಚರ್ಸ್ ಇದೆ. ನಾವು ಕಳುಹಿಸಿದ ಮೆಸೇಜ್ ಗಳಲ್ಲಿ ಏನಾದರೂ ತಪ್ಪುಗಳಿದ್ದರೆ ಅದನ್ನು ಕೂಡಲೇ ಡಿಲೀಟ್ ಮಾಡಬಹುದು. ಆದರೆ ಒಂದು ವೇಳೆ ನೀವು ಕಳುಹಿಸಿದ ಮೆಸೇಜ್ ನಲ್ಲಿ ಯಾವುದಾದರೂ ಒಂದೇ ಅಕ್ಷರ ತಪ್ಪುಗಳಿದ್ದರೆ, ಅದನ್ನು ಪೂರ್ತಿಯಾಗಿ ಡಿಲೀಟ್ ಮಾಡಬೇಕಾಗಿಲ್ಲ. ಆ ಮೆಸೇಜನ್ನೇ ಒತ್ತಿ, ಎಡಿಟ್ ಮಾಡಿ ಹಾಕಬಹುದಾಗಿದೆ. ಕಳುಹಿಸಿದ 15 ನಿಮಿಷದೊಳಗೆ ಮಾತ್ರ ಈ ಎಡಿಟ್ ಸೆಂಟ್ ಮೆಸೇಜ್ ಆಯ್ಕೆಯನ್ನು ಬಳಸಬಹುದಾಗಿದೆ.
Related Articles
ಸದ್ಯ ಈ ಫೀಚರ್ ಐಒಎಸ್ ಹಂತದಲ್ಲಿದ್ದು, ಅಪ್ಡೇಟ್ ಆಗಿ ಮುಂದಿನ ದಿನಗಳಲ್ಲಿ ಎಲ್ಲರಿಗೂ ಶೀಘ್ರದಲ್ಲಿ ಬಳಕೆಗೆ ಬರಲಿದೆ.
ಇದಲ್ಲದೇ ಇಮೇಜ್ ಕ್ವಾಲಿಟಿ ಎನ್ನುವ ಫೀಚರ್ ಕೂಡ ಮುಂದಿನ ದಿನಗಳಲ್ಲಿ ಬರಲಿದೆ. ಇದರಿಂದ ನಾವು ಒರಿಜಿನಲ್ ಕ್ಲ್ಯಾರಿಟಿಯಲ್ಲಿ ಫೋಟೋಗಳನ್ನು ಕಳುಹಿಸಬಹುದಾಗಿದೆ.