Advertisement

ಬ್ಲಾಕ್‌ಬೆರಿ ಒಎಸ್‌ಗಳಲ್ಲಿ ವಾಟ್ಸ್‌ ಆ್ಯಪ್‌ ಬಂದ್‌!

01:30 AM Jun 13, 2017 | Team Udayavani |

ಹೊಸದಿಲ್ಲಿ: ನೋಕಿಯಾ ಸಿಂಬಿಯನ್‌, ಬ್ಲ್ಯಾಕ್‌ಬೆರಿ ಆಪರೇಟಿಂಗ್‌ ಸಿಸ್ಟಂ ಇರುವ ಫೋನ್‌ಗಳನ್ನು ಹೊಂದಿದ್ದೀರಾ? ಹಾಗಾದರೆ ಇನ್ನು ಅದರಲ್ಲಿ ವಾಟ್ಸ್‌ ಆ್ಯಪ್‌ ಕೆಲಸ ಮಾಡಲ್ಲ. ಜೂ.30ರ ಬಳಿಕ ಬ್ಲ್ಯಾಕ್‌ಬೆರಿ 10, ನೋಕಿಯಾ ಎಸ್‌40, ನೋಕಿಯಾ ಎಸ್‌60 ಫೋನ್‌ಗಳಿರುವ ತಾಂತ್ರಿಕ ಸಪೋರ್ಟ್‌ ಅನ್ನು ಸ್ಥಗಿತಗೊಳಿಸಲು ವಾಟ್ಸ್‌ಆ್ಯಪ್‌ ಮುಂದಾಗಿದೆ.

Advertisement

2016ರಲ್ಲಿ ಇದರ ಸ್ಥಗಿತಕ್ಕೆ ಮುಂದಾಗಿದ್ದರೂ, ಒಂದು ವರ್ಷ ಮುಂದುವರಿಸಲಾಗಿತ್ತು. ಇನ್ನು ಹೆಚ್ಚಾಗಿ ಬಳಕೆಯಲ್ಲಿಲ್ಲದ ಆ್ಯಂಡ್ರಾಯಿಡ್‌ 2.2 ಫ್ರೋಯೊ, ಐಒಎಸ್‌ 6, ವಿಂಡೋಸ್‌ ಫೋನ್‌ 7ಗೆ ವಾಟ್ಸ್‌ಆ್ಯಪ್‌ ಈಗಾಗಲೇ ತಾಂತ್ರಿಕ ಸಪೋರ್ಟ್‌ ಅನ್ನು ಕೈಬಿಟ್ಟಿದೆ. ಇದಕ್ಕಾಗಿ ಹೊಸ ಆಪರೇಟಿಂಗ್‌ ಸಿಸ್ಟಂ ಇರುವ ಫೋನ್‌ಗಳನ್ನು ಬಳಸುವಂತೆ ಬಳಕೆದಾರರಿಗೆ ಫೇಸ್‌ಬುಕ್‌ ಒಡೆತನದ ವಾಟ್ಸ್‌ಆ್ಯಪ್‌ ಸಲಹೆ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next