Advertisement

ಬಂದಿದೆ ಹೊಸ ಫೀಚರ್ಸ್;ಯಾರಿಗೂ ತಿಳಿಯದಂತೆ ವಾಟ್ಸಪ್‌ ಗ್ರೂಪ್‌ ನಿಂದ ಲೆಫ್ಟ್‌ ಆಗಬಹುದು!

06:18 PM Aug 09, 2022 | Team Udayavani |

ನವದೆಹೆಲಿ: ಮೆಟಾ ಕಂಪೆನಿಯ ವಾಟ್ಸಾಪ್‌ ತನ್ನ ಬಳಕೆದಾರರಿಗೆ ಹೊಸ ಫೀಚರ್ಸ್‌ ಗಳನ್ನು ಹೊರ ತರುತ್ತಲೇ ಇರುತ್ತದೆ. ಬಳಕೆದಾರರ ಅನುಕೂಲಕ್ಕಾಗಿ ಮಂಗಳವಾರ ವಾಟ್ಸಾಪ್‌ ಮತ್ತೆ ಕೆಲ ಹೊಸ ಅಪ್ಡೇಟ್‌ ಗಳನ್ನು ತಂದಿದೆ.

Advertisement

ಮೊದಲು ವಾಟ್ಸಾಪ್‌ ಏನಾದರು ಹೊಸ ಫೀಚರ್ಸ್‌ ಗಳನ್ನು ಹೊರ ತಂದರೆ ಅದು, ಐ-ಫೋನ್‌ ಬಳಕದಾರರಿಗೆ ಮೊದಲು ಲಭ್ಯವಾಗುತ್ತಿದ್ದು, ಆದರೆ ಈ ಬಾರಿಯ ಫೀಚರ್ಸ್‌ ಗಳು ಎಲ್ಲಾ ಸ್ಮಾರ್ಟ್‌ ಫೋನ್‌ ಬಳಸುವವರಿಗೂ ಲಭ್ಯವಾಗಲಿದೆ.

ಹೊಸ ಫೀಚರ್ಸ್‌ ಗಳೇನು ?

  1. ವಾಟ್ಸಪ್‌ ನಲ್ಲಿ ಮೊದಲು ಒಂದು ಮೆಸೇಜ್‌ ಮಾಡಿದರೆ, ಅದನ್ನು ಡಿಲೀಟ್‌ ಫಾರ್‌ ಎವರಿ ಒನ್‌ ಮಾಡಲು ಇಂತಿಷ್ಟು ನಿಮಿಷಗಳ ಆಯ್ಕೆ ಮಾತ್ರ ಇತ್ತು. ಆ ಬಳಿಕ ಅದನ್ನು ಇತ್ತೀಚೆಗೆ 1 ಗಂಟೆ 8 ನಿಮಿಷಕ್ಕೆ ಹೆಚ್ಚಿಸಲಾಗಿತ್ತು. ಆದರೆ ಹೊಸ ಆಪ್ಡೇಟ್‌ ನಲ್ಲಿ, ಈ ಸಮಯದ ಮಿತಿಯನ್ನು 2 ದಿನ 12 ಗಂಟೆಯವರೆಗೆ ಹೆಚ್ಚಿಸಲಾಗಿದೆ. ಇನ್ನು ಮುಂದೆ ಯಾವುದಾದ್ರು ಮೆಸೇಜ್‌ ನ್ನು ಡಿಲೀಟ್‌ ಫಾರ್‌ ಎವರಿವನ್‌ ಮಾಡಲು 2 ದಿನದವರೆಗೆ ಅವಕಾಶವಿರುತ್ತದೆ.
  2. ಇದರೊಂದಿಗೆ ವಾಟ್ಸಪ್‌ ಮತ್ತೊಂದು ಅಪ್ಡೇಟ್‌ ನ್ನು ಹೊರ ತಂದಿದೆ. ನಿಮಗೆ ಇಷ್ಟವಿಲ್ಲದ ಗ್ರೂಪ್‌ ನಿಂದ ಲೆಫ್ಟ್‌ ಆದರೆ ಎಲ್ಲರಿಗೂ ನೀವು ಗ್ರೂಪ್‌ ನಿಂದ ಹೊರ ನಡೆದಿದ್ದೀರಿ ಎಂದು ತಿಳಿಯುತ್ತಿತ್ತು. ಆದರೆ ಈಗ ಆ ಸಾಧ್ಯತೆಗಳಿಲ್ಲ. ಏಕಂದರೆ ವಾಟ್ಸಪ್‌ ನಿಂದ ಬಂದ ಹೊಸ ಆಪ್ಡೇಟ್‌ ನಲ್ಲಿ ನೀವು ಗ್ರೂಪ್‌ ನಿಂದ ಹೊರ ಹೋಗಿದ್ದೀರಿ ಎನ್ನುವುದು ತಿಳಿವುದೇ ಇಲ್ಲ( ‘Leave Groups Silently’) ಫೀಚರ್ ನ್ನು ವಾಟ್ಸಪ್‌ ಪರಿಚಯ ಮಾಡಿದೆ. ನೀವು ಗ್ರೂಪ್‌ ಬಿಟ್ಟಿದ್ದೀರಿ ಎನ್ನುವುದು ಆಡ್ಮಿನ್‌ ಗೆ ಮಾತ್ರ ತಿಳಿಯುತ್ತದೆ.
  3. ವಾಟ್ಸಪ್‌ ನಲ್ಲಿ ನಮ್ಮ ಸ್ಟೇಟಸ್‌, ಲಾಸ್ಟ್‌ ಸೀನ್ ,ಪ್ರೂಫೈಲ್‌ ಎಲ್ಲರಿಗೂ ಕಾಣದ ಹಾಗೆ ಹೈಡ್‌ ಮಾಡುವ ( ಮುಚ್ಚಿಯಿಡುವ) ಆಯ್ಕೆ ಇದೆ. ಆದರೆ ನೀವು ಆನ್ಲೈನ್‌ ನಲ್ಲಿದ್ದೀರಿ, ಅದು ಬೇರೆಯವರಿಗೆ ತಿಳಿಯಬಾರದೇ ? ಹಾಗಾದರೆ ವಾಟ್ಸಪ್‌ ನ ಈ ಅಪ್ಡೇಟ್‌ ನಿಮಗೆ ಸೂಕ್ತ ಅನ್ನಿಸಬಹುದು. ನೀವು ಆನ್ಲೈನ್‌ ಇದ್ದೀರಾ ಇಲ್ಲವೇ, ನಿಮ್ಮ ಆನ್ಲೈನ್‌ ನ್ನು ಯಾರು ನೋಡಬೇಕು ಎನ್ನುವುದನ್ನು ನೀವೇ ಆಯ್ಕೆ ಮಾಡಿಕೊಳ್ಳಬಹುದು. ಇದರಿಂದ ನೀವು ಆಯ್ದ ಜನರಿಗೆ ಆನ್ಲೈನ್‌ ಇದ್ದರೂ ಆಫ್‌ ಲೈನ್‌ ತೋರಿಸಬಹುದು.
  4. ವಾಟ್ಸಪ್‌ ನಲ್ಲಿ ಒಂದು ಮಾತ್ರ ಫೋಟೋ ಕಳಿಸುವ ಹಾಗೂ ನೋಡುವ ವ್ಯೂ ಒನ್ಸ್‌ ನಲ್ಲಿ ಇನ್ಮುಂದೆ ಸ್ಕ್ರೀನ್‌ ಶಾಟ್‌ ತೆಗೆಯುವುದನ್ನು ನಿರ್ಬಂಧಿಸಲಾಗಿದೆ.

ಇವಿಷ್ಟು ಮಾತ್ರವಲ್ಲದೆ ವಾಟ್ಸಪ್‌ ನಲ್ಲಿ ಶೀಘ್ರದಲ್ಲಿ ಲಾಗಿನ್‌ ಫೀಚರ್‌ ಕೂಡ ಬರಲಿದೆ ಎನ್ನಲಾಗಿದೆ. ಈ ಎಲ್ಲಾ ಹೊಸ ಫೀಚರ್‌ ಗಳು ಈ ತಿಂಗಳಿನಿಂದಲೇ ಬರಲಿದೆ. ಯಾವುದಕ್ಕೂ ನಿಮ್ಮ ವಾಟ್ಸಪ್‌ ಒಮ್ಮೆ ಅಪ್ಡೇಟ್‌ ಮಾಡಿ ನೋಡಿ.

Advertisement

Udayavani is now on Telegram. Click here to join our channel and stay updated with the latest news.

Next