ನ್ಯೂಯಾರ್ಕ್: ಸದಾ ಹೊಸತನದಿಂದ ಕೂಡಿರುವ ವಾಟ್ಸಾಪ್ ಇದೀಗ ಹೊಸ ಫೀಚರ್ ಒಂದನ್ನು ಬಳಕೆಗೆ ತರಲು ಯೋಜನೆ ರೂಪಿಸುತ್ತಿದೆ. ಈಗಾಗಲೇ ವಾಟ್ಸಾಪ್ ನಿಯಮಿತವಾಗಿ ಹೊಸ ಹೊಸ ಫೀಚರ್ ಗಳನ್ನು ಜಾರಿಗೆ ತರುತ್ತಿದ್ದು ಮಾತ್ರವಲ್ಲದೆ ಹಳೆ ಫೀಚರ್ ಗಳನ್ನು ಸುಧಾರಿಸುವತ್ತ ಕೂಡ ಗಮನಹರಿಸಿದೆ.
ಹೊಸ ಮಾಹಿತಿಯ ಪ್ರಕಾರ ವಾಟ್ಸಾಪ್ ಸಂಸ್ಥೆ ತನ್ನ ಆ್ಯಂಡ್ರಾಯ್ಡ್ ಮತ್ತು ಐಓಎಸ್ ಆಧಾರಿತ ಆ್ಯಪ್ ಗಳಿಗೆ ಆ್ಯನಿಮೇಟೆಡ್ ಸ್ಟಿಕ್ಕರ್ ಫೀಚರ್ ಅಳವಡಿಸುವತ್ತ ಗಮನಹರಿಸಿದೆ. WABetaInfo ವರದಿಯ ಪ್ರಕಾರ, ಆ್ಯನಿಮೇಟೆಡ್ ಸ್ಟಿಕ್ಕರ್ಸ್ ಫೀಚರ್ ಮೂರು ಮಾದರಿಗಳಲ್ಲಿ ಲಭ್ಯವಿದೆ.
ಪ್ರಮುಖವಾಗಿ ಚಾಟ್ ಮಾಡುವಾಗ ಈ ಸ್ಟಿಕ್ಕರ್ಸ್ ಗಳು ಕಾಣಿಸಿಕೊಳ್ಳಲಿದ್ದು ಇದನ್ನು ಬಳಕೆದಾರರು ಸೇವ್ ಮಾಡಿ ಸೆಂಡ್ ಮಾಡಬಹುದು. ಎರಡನೇಯಾದಾಗಿ ಈ ಸ್ಟಿಕ್ಕರ್ ಗಳನ್ನು ಬೇರೆ ಆ್ಯಪ್ ಗಳ (Third Party apps) ಮೂಲಕ ಇಂಪೋರ್ಟ್ ಮಾಡಿಕೊಳ್ಳಬಹುದು. ಮೂರನೇ ಭಾಗವಾಗಿ ವಾಟ್ಸಾಪ್ ಸ್ಟೊರ್ ನಿಂದ ಢೀಫಾಲ್ಟ್ ಸ್ಟಿಕ್ಕರ್ ಗಳನ್ನು ಡೌನ್ ಲೋಡ್ ಮಾಡಿಕೊಳ್ಳಬಹುದು.
ಈಗಾಗಲೇ ಕೆಲವು ನಿರ್ದಿಷ್ಟ ಬಳಕೆದಾರರಿಗೆ ಮಾತ್ರ ಈ ಫೀಚರ್ ಲಭ್ಯವಿದ್ದು ಪರೀಕ್ಷಾರ್ಥ ಹಂತದಲ್ಲಿದೆ. ವಾಟ್ಸಾಪ್ ನ ಬೇಟಾ ಅವೃತ್ತಿಯನ್ನು ಬಳಸುತ್ತಿದ್ದರೇ ಮಾತ್ರ ಈ ಫೀಚರ್ ಬಳಸಿಕೊಳ್ಳಬಹುದಾಗಿದೆ. ಇದಕ್ಕಾಗಿ ವಾಟ್ಸಾಪ್ ಬೇಟಾ ಆ್ಯಂಡ್ರಾಯ್ಡ್ ವರ್ಷನ್ 2.20.194.7 ಮತ್ತು ವಾಟ್ಸಾಪ್ ಬೇಟಾ ಐಓಎಸ್ ವರ್ಷನ್ 2.20.70.26 ಗೆ ಅಪ್ ಡೇಟ್ ಮಾಡಿಕೊಳ್ಳಬಹುದು.