ನವದೆಹಲಿ: ವಾಟ್ಸ್‌ಆ್ಯಪ್ ಜಗತ್ತಿನಾದ್ಯಂತ ಇರುವ ತನ್ನ ಬಳಕೆದಾರರಿಗಾಗಿ “3ಡಿ ಅವತಾರ್’ ಸ್ಟಿಕರ್‌ಗಳನ್ನು ಪರಿಚಯಿಸಿದೆ.
ಇದನ್ನು ಬಳಕೆದಾರರು ಪ್ರೊಫೈಲ್ ಫೋಟೋಗಳಾಗಿ ಅಥವಾ ಬೇರೆಯವರಿಗೆ ಕಳುಹಿಸಲು ಕಸ್ಟಮ್ ಸ್ಟಿಕರ್ ಗಳಾಗಿ ಬಳಸಬಹುದಾಗಿದೆ.
ವಿವಿಧ ಭಾವನೆಗಳು ಮತ್ತು ಕ್ರಿಯೆಗಳನ್ನು ಪ್ರತಿಬಿಂಬಿಸುವ 36 ಕಸ್ಟಮ್ ಸ್ಟಿಕರ್ ಗಳನ್ನು ವಾಟ್ಸ್‌ಆ್ಯಪ್ ಪರಿಚಯಿಸಿದೆ. ಇವು ಸ್ನಾಪ್‌ನ ಬಿಟ್‌ಮೊಜಿ ಅಥವಾ ಆ್ಯಪಲ್‌ನ ಮೆಮೊಜಿ ಸ್ಟಿಕರ್‌ಗಳ ರೀತಿಯಲ್ಲೇ ಇವೆ.
“ಶೀಘ್ರ ನಿಮ್ಮ ವಾಟ್ಸ್‌ಆ್ಯಪ್ ಗಳು ಅವತಾರ್ ಸ್ಟಿಕರ್‌ಗಳು ಬರಲಿವೆ. ಬೆಟಾ ಪರೀಕ್ಷೆ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ನಾವು ಇವುಗಳನ್ನು ಪರಿಚಯಿಸುತ್ತಿದ್ದೇವೆ,’ ಎಂದು ಮೆಟಾ ಸಿಇಒ ಮಾರ್ಕ್ ಜುಗರ್‌ಬರ್ಗ್ ಬುಧವಾರ ತಿಳಿಸಿದ್ದಾರೆ.
ಸಾಫ್ಟ್ವೇರ್ ಅಪಡೇಟ್ ಬೆನ್ನಲ್ಲೇ ವಾಟ್ಸ್‌ಆ್ಯಪ್ ಬಳಕೆದಾರರಿಗೆ ಅವತಾರ್ ಸ್ಟಿಕರ್‌ಗಳು ಲಭ್ಯವಾಗಲಿದೆ. ಅಲ್ಲದೇ ಬಳಕೆದಾರರು ಅವತಾರ್ ಸ್ಟಿಕರ್ ಅನ್ನು ತಮ್ಮ ಪ್ರೊಫೈಲ್ ಫೋಟೋ ಮಾಡಿಕೊಳ್ಳಬೇಕಾದರೆ, ಮೊದಲು ವಾಟ್ಸ್‌ಆ್ಯಪ್‌ನ ಸೆಟ್ಟಿಂಗ್ಸ್ ಮೆನುಗೆ ಹೋಗಿ, ನಂತರ ಪ್ರೊಫೈಲ್ ಫೋಟೋಗೆ ಹೋಗಿ, ಅವತಾರ್ ಸ್ಟಿಕರ್ ಆಯ್ಕೆ ಮಾಡಿಕೊಳ್ಳಬಹುದಾಗಿದೆ.