Advertisement

WhatsApp: ವಾಟ್ಸಾಪ್‌ ನಲ್ಲಿ ಬಂತು ʼಚಾಟ್‌ ಲಾಕ್‌ʼ ಫೀಚರ್:‌ ಬಳಕೆ ಹೇಗೆ?

11:18 AM May 16, 2023 | Team Udayavani |

ನವದೆಹಲಿ: ಜನಪ್ರಿಯ ಮೆಸೇಜಿಂಗ್ ಆ್ಯಪ್‌ ವಾಟ್ಸಾಪ್ ನಲ್ಲಿ ತಿಂಗಳಿಗೆ ಹೊಸ ಹೊಸ ಅಪ್ಡೇಟ್‌ ಗಳು ಬರುತ್ತಿರುತ್ತದೆ. ಇದೀಗ ಮತ್ತೊಂದು ನೂತನ ಫೀಚರ್‌ ವೊಂದು ಬಂದಿದೆ. ವಾಟ್ಸಾಪ್ ಹೊಸ ಚಾಟ್ ಲಾಕ್ ಫೀಚರ್‌ ನ್ನು ಪರಿಚಯಿಸಿದೆ.

Advertisement

ದಿನನಿತ್ಯ ವಾಟ್ಸಾಪ್‌ ನಲ್ಲಿ ನೂರಾರು ಮೆಸೇಜ್‌ ಗಳು ಬರುತ್ತಿರುತ್ತದೆ. ನಾವು ನಮ್ಮ ಆತ್ಮೀಯರೊಂದಿಗೆ ಚಾಟ್‌ ಗಳನ್ನು ಮಾಡುತ್ತೇವೆ. ಕೆಲವೊಮ್ಮೆ ನಮ್ಮ ಮೊಬೈಲ್‌ ನ್ನು ಸ್ನೇಹಿತರಿಗೆ ಅಥವಾ ಬೇರೆಯವರ ಕೈಗೆ ಕೊಟ್ಟರೆ ಅವರು ನಮ್ಮ ವಾಟ್ಸಾಪ್‌ ಚಾಟ್ ನ್ನು ಅನಿರೀಕ್ಷಿತವಾಗಿ ನೋಡಬಹುದು. ಆದರೆ ಇದಕ್ಕೆ ಈಗ ಹೊಸ ಪರಿಹಾರವನ್ನು ಮೆಟಾ ಒಡೆತನದ ವಾಟ್ಸಾಪ್‌ ಹೊರ ತಂದಿದೆ. ಅದುವೇ ಚಾಟ್‌ ಲಾಕ್‌ ಫೀಚರ್.‌

ಮೊಬೈಲ್‌ ಸ್ಕ್ರೀನ್‌ ಗೆ ನಾವು ಫಿಂಗರ್‌ ಪ್ರಿಂಟ್‌ ಲಾಕ್‌ ಸಿಸ್ಟಂನ್ನು ಅಳವಡಿಸುತ್ತೇವೆ. ಇದೇ ರೀತಿ ಈಗ ವಾಟ್ಸಾಪ್‌ ಚಾಟ್‌ ನ್ನು ನಾವು ಲಾಕ್‌ ಹಾಕಿ ಇಡಬಹುದು. ನಾವು ವಾಟ್ಸಾಪ್‌ ಚಾಟ್‌ ಲಾಕ್‌ ಬಳಸುವುದರಿಂದ ಹಲವು ಉಪಯೋಗವಿದೆ.

ಬಳಕೆ ಹೇಗೆ?:

  1. ಮೊದಲು ನೀವು ಚಾಟ್‌ ಲಾಕ್‌ ಮಾಡಲು ಬಯಸುವ ನಂಬರ್‌ ಅಥವಾ ಗ್ರೂಪ್‌ ನ ಪ್ರೂಫೈಲ್‌ ಪಿಕ್ಚರ್‌ ನ್ನು ಸೆಲೆಕ್ಟ್‌ ಮಾಡಿ
  2. ಬಳಿಕ ಮೇಲೆ ಕಾಣಸಿಗುವ ಮೂರು ಡಾಟ್‌ ಮೇಲೆ ಕ್ಲಿಕ್‌ ಮಾಡಿ,ʼ disappearing messageʼ ಕೆಳಗೆ ʼಚಾಟ್‌ ಲಾಕ್‌ʼ ಎನ್ನುವ ಆಯ್ಕೆ ಸಿಗುತ್ತದೆ.
  3. ಬಳಿಕ ಫಿಂಗರ್‌ ಪ್ರಿಂಟ್‌ ಅಥವಾ ಪಾಸ್‌ ವರ್ಡ್‌ ಆಯ್ಕೆ ಬರುತ್ತದೆ. ನಿಮಗೆ ಬೇಕಾದ ಆಯ್ಕೆಯನ್ನು ಒತ್ತಿ ಚಾಟ್‌ ಲಾಕ್‌ ನ್ನು ಬಳಸಬಹುದು.
  4. ಒಮ್ಮೆ ನೀವು ಚಾಟ್ ಲಾಕ್ ಅನ್ನು ಸಕ್ರಿಯಗೊಳಿಸಿದ ನಂತರ, ನೀವು ಅದನ್ನು ಅನ್‌ಲಾಕ್ ಮಾಡುವವರೆಗೆ ಚಾಟ್‌ನಲ್ಲಿರುವ ಎಲ್ಲಾ ಸಂದೇಶಗಳು ಮರೆಯಾಗಿರುತ್ತದೆ. ಪ್ರತಿ ಚಾಟ್‌ಗೆ ಪ್ರತ್ಯೇಕವಾಗಿ ಲಾಕ್‌ ಗಳನ್ನು ಹಾಕಬಹುದು.
  5. ಚಾಟ್‌ ಲಾಕ್‌ ನಿಂದ ನಮಗೆ ಸಂದೇಶ ಕಳುಹಿಸಿದವರ ಹೆಸರು ಹೈಡ್‌ ಆಗಿ ನೋಟಿಫಿಕೇಶನ್ ಬರುವುದಿಲ್ಲ.
  6. ಲಾಕ್‌ ಆದ ಚಾಟ್‌ ಗಳು ಪ್ರತ್ಯೇಕ ಫೋಲ್ಡರ್‌ ನಲ್ಲಿರುತ್ತದೆ.

ಹೆಚ್ಚುವರಿಯಾಗಿ ಮುಂದೆ ವಾಟ್ಸಾಪ್ ಚಾಟ್ ಲಾಕ್‌ಗಾಗಿ ಹೆಚ್ಚಿನ ಆಯ್ಕೆಗಳನ್ನು ಸೇರಿಸುವುದಾಗಿ ಘೋಷಿಸಿದೆ.

Advertisement

ಆಂಡ್ರಾಯ್ಡ್ ಮತ್ತು ಐಒಎಸ್ ಸಾಧನಗಳಿಗೆ ಜಾಗತಿಕವಾಗಿ Chat Lock ನ್ನು ಹೊರತರುತ್ತಿದೆ. ಈ ಹೊಸ ಫೀಚರ್ ಪಡೆಯಲು ಬಳಕೆದಾರರು ತಮ್ಮ ಅಪ್ಲಿಕೇಶನ್ ಅನ್ನು ಅಪ್ಢೇಟ್‌ ಮಾಡಿಕೊಳ್ಳಬೇಕು.

 

Advertisement

Udayavani is now on Telegram. Click here to join our channel and stay updated with the latest news.

Next