Advertisement
ಮಂಡೆಕೋಲು ಗ್ರಾ.ಪಂ. ಪ್ರಥಮ ಹಂತದ ಗ್ರಾಮಸಭೆ ಗ್ರಾ.ಪಂ. ಅಧ್ಯಕ್ಷೆ ಮೋಹಿನಿ ಅವರ ಅಧ್ಯಕ್ಷತೆಯಲ್ಲಿ ಪೇರಾಲು ಶ್ರೀರಾಮ ಭಜನ ಮಂದಿರದಲ್ಲಿ ಶುಕ್ರವಾರ ನಡೆಯಿತು.
Related Articles
ಜಾಲೂÕರು-ಅಡಾRರು ಅಂಬ್ರೋಟಿ ಭಾಗದಲ್ಲಿ ಲೈನ್‌ಮನ್‌ಗಳು ಎಷ್ಟು ಜನರಿ¨ªಾರೆ? ಲೈನಲ್ಲಿ ಏನಾದರೂ ತೊಂದರೆ ಕಾಣಿಸಿಕೊಂಡು ಅವರ ಗಮನಕ್ಕೆ ತಂದರೆ ಸ್ಪಂದನೆ ಇಲ್ಲ. ಫೋನ್ ರಿಸೀವ್ ಮಾಡುತ್ತಿಲ್ಲ ಯಾಕೆ? ಎಂದು ಜಯರಾಜ್ ಕುಕ್ಕೇಟಿ ಪ್ರಶ್ನಿಸಿದರು. ಉತ್ತರಿಸಿದ ಜೆಇ ಜಯಪ್ರಕಾಶ್ ಈ ಬಗ್ಗೆ ಪರಿಶೀಲಿಸುವೆ. ಅವರಿಗೆ ಹೇಳುತ್ತೇನೆ ಎಂದರು.
Advertisement
ನೆಟ್‌ವರ್ಕ್ ಸಮಸ್ಯೆ ಬಗೆಹರಿಸಿಮೊಬೈಲ್ ನೆಟ್‌ವರ್ಕ್ ಸಮಸ್ಯೆ ಬಗ್ಗೆ ಹಲವು ಬಾರಿ ಸಂಬಂಧಪಟ್ಟವರಿಗೆ ಮನವಿ ಮಾಡಿದ್ದೇವೆ. ಪ್ರಧಾನ ಮಂತ್ರಿ ಕಾರ್ಯಾಲಯಕ್ಕೂ ಪತ್ರ ಬರೆಯಲಾಗಿದೆ. ಖಾಸಗಿ ಸಂಸ್ಥೆ ಸಿಮ್‌ಗಳಾದರೂ ಆಗಬಹುದು ನೆಟ್‌ವರ್ಕ್ ಸಿಗುವಂತೆ ಮಾಡಿ. ಪಂಚಾಯತ್ ಇದರ ಬಗ್ಗೆ ನಿರ್ಣಯ ಕೈಗೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದರು. ತಡೆಗೋಡೆ ನಿರ್ಮಾಣ ಎನಾಯಿತು?
ಕಲ್ಲಪ್ಪಣೆ ಭಾಗದಲ್ಲಿ ಶಾಶ್ವತ ತಡೆಗೋಡೆ ನಿರ್ಮಾಣದ ಕುರಿತು ಕಳೆದ ಗ್ರಾಮಸಭೆಯಲ್ಲಿ ಪ್ರಸ್ತಾವಿಸಲಾಗಿತ್ತು. ಏನಾಯಿತು ಎಂದು ನಾರಾಯಣ ಆಳಂಕಲ್ಯ ಪ್ರಶ್ನಿಸಿದರು. ಉತ್ತರಿಸಿದ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ, ಸರಕಾರ ದಿಂದ ಅನುದಾನ ಬಂದಿದೆ. ಶೀಘ್ರ ವಾಗಿ ಮಾಡಿಕೊಡಲಾಗುವುದು ಎಂದರು. ಉದ್ದನಡ್ಕ ರಸ್ತೆ ಕಾಂಕ್ರೀಟ್ ಮಾಡಿ
ಉದ್ದನಡ್ಕ ರಸ್ತೆ ಸರಿಯಿಲ್ಲ. ಮಕ್ಕಳು ಬೈಕಲ್ಲಿ ಹೋಗುವಾಗ ಬೀಳುತ್ತಾರೆ. ಈ ರಸ್ತೆಗೆ ಕಾಂಕ್ರೀಟ್ ಹಾಕಿ ಎಂದು ವೆಂಕಟರಮಣ ಕಣಜಾಲು ಹೇಳಿದರು. ಉತ್ತರಿಸಿದ ಗ್ರಾ.ಪಂ. ಸದಸ್ಯ ಚಂದ್ರಶೇಖರ್ ಆಲಂಕಲ್ಯ, ಮಳೆಗಾಲ ಕಳೆದ ಮೇಲೆ ಡಾಮರು ಹಾಕಲಾಗುವುದು ಎಂದರು. ಸಾರ್ವಜನಿಕ ಶೌಚಾಲಯವಿಲ್ಲ
ಪೇರಾಲು ಭಾಗದಲ್ಲಿ ಸಾರ್ವಜನಿಕ ಶೌಚಾಲಯವಿಲ್ಲ. ಒಂದು ಶೌಚಾಲಯ ಆಗಬೇಕು ಎಂದು ನಾರಾಯಣ ಆಲಂಕಲ್ಯ ಆಗ್ರಹಿಸಿದರು. ಉತ್ತರಿಸಿದ ಗ್ರಾ.ಪಂ. ಸದಸ್ಯ ಚಂದ್ರಶೇಖರ್ ಆಳಂಕಲ್ಯ ಶೌಚಾಲಯ ಕ್ಲೀನ್ ಮಾಡಲು ಜನ ಸಿಗುವುದಿಲ್ಲ ಎಂದರು. ಕುಡಿಯಲು ನೀರಿಲ್ಲ
ಐತಪ್ಪ ಜೇಡಿಗುಂಡಿ ಕುಟುಂಬಕ್ಕೆ ಕುಡಿಯಲು ನೀರಿಲ್ಲ. ಆದಷ್ಟು ಬೇಗ ಇದಕ್ಕೊಂದು ವ್ಯವಸ್ಥೆ ಮಾಡಬೇಕು ಎಂದು ಮಾಧವ ಅವರು ಆಗ್ರಹಿಸಿದರು. ಉತ್ತರಿಸಿದ ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಬಾವಿ ತೋಡಿಕೊಳ್ಳಿ ಎಂದರು. ಹತ್ತು ಲೆಂತ್ ಪೈಪ್ ಇದ್ರೆ ಮಾಡಬಹುದು ಎಂದು ಮಾಧವ ಹೇಳಿದರು. ಗ್ರಾ.ಪಂ. ಸದಸ್ಯ ಸುಂದರ ಉತ್ತರಿಸಿ ಕುಂಟಿಕಾನ ಜೇಡಿಗುಂಡಿ ಭಾಗಕ್ಕೆ ಪೈಪ್‌ಲೈನ್ ಹಾಕುವ ವ್ಯವಸ್ಥೆ ಮಾಡಲಾಗುವುದು ಎಂದರು. ಆನೆ ಹಾವಳಿ ತಡೆ: ಸಭೆ
ಮಂಡೆಕೋಲು ಭಾಗದಲ್ಲಿ ಆನೆ ಹಾವಳಿಯಿಂದ ಕೃಷಿಕರಿಗೆ ತೊಂದರೆಯಾಗುತ್ತಿದೆ. ಕೃಷಿ ಬೆಳೆಗಳನ್ನು ಆನೆಗಳು ದಾಳಿ ನಡೆಸಿ ಹಾಳು ಮಾಡುತ್ತಿವೆ. ಕಲ್ಲಡ್ಕ, ಅಕ್ಕಪ್ಪಾಡಿ ಸೇರಿದಂತೆ ಇನ್ನಿತರ ಭಾಗಗಳಲ್ಲಿ ಇದರ ಹಾವಳಿ ವಿಪರೀತವಿದೆ. ಇದಕ್ಕೆ ಇಲಾಖೆಯವರು ಏನು ಕ್ರಮ ಕೈಗೊಳ್ಳುತ್ತೀರಿ? ಎಂದು ಉದಯ ಕುಮಾರ್ ಆಚಾರ್ ಪ್ರಶ್ನಿಸಿದರು. ಉತ್ತರಿಸಿದ ಅರಣ್ಯಾಧಿಕಾರಿ ಆನೆಕಂದಕ, ತಡಬೇಲಿಗಳನ್ನು ಮಾಡಿದ್ದರೂ ಆನೆಗಳು ಬರುತ್ತಿವೆ. ಆನೆಗಳ ಸಮಸ್ಯೆಯನ್ನು ಬಗೆಹರಿಸಲು ಈಗಾಗಲೇ ಮಂಗಳೂರಿನಲ್ಲಿ ಕಾಸರಗೋಡು ಮತ್ತು ದ.ಕ. ಜಿÇÉಾಧಿಕಾರಿಗಳ ನೇತೃತ್ವದಲ್ಲಿ ಸಭೆ ನಡೆಸಲಾಗಿದೆ. ದೇಲಂಪಾಡಿಯಲ್ಲಿಯೂ ಸಭೆ ನಡೆದಿದೆ. ಇನ್ನು ಮುಂದೆ ಮಂಡೆಕೋಲಿನಲ್ಲಿ ಸಭೆ ನಡೆಸಿ ಜನರ ಅಭಿಪ್ರಾಯ ಸಂಗ್ರಸಲಿದ್ದೇವೆ. ಸಭೆಗೆ ಗ್ರಾಮಸ್ಥರು ಬಂದು ಸಲಹೆ ನೀಡಬೇಕೆಂದು ಹೇಳಿದರು. ಪಂ. ಎಂಜಿನಿಯರಿಂಗ್ ಉಪ ವಿಭಾಗ ಸುಳ್ಯ ಇಲ್ಲಿನ ಸಹಾಯಕ ಕಾರ್ಯಪಾಲಕ ಅಭಿಯಂತರ ಹನುಮಂತರಾಯಪ್ಪ ಜಿ. ನೋಡಲ್ ಅಧಿಕಾರಿಯಾಗಿದ್ದರು. ಜಯಪ್ರಕಾಶ್ ಜೆ.ಇ. ಜಾಲೂÕರು, ಜಿ.ಪಂ. ಸದಸ್ಯೆ ಪುಷ್ಪಾವತಿ ಬಾಳಿಲ, ಗ್ರಾ.ಪಂ. ಅಧ್ಯಕ್ಷೆ ಮೋಹಿನಿ, ಉಪಾಧ್ಯಕ್ಷ ಪ್ರಕಾಶ್, ಪಿಡಿಒ ಗ್ರಾಮ ಮಟ್ಟದ ಅಧಿಕಾರಿ ವರ್ಗ, ಅಂಗನವಾಡಿ ಕಾರ್ಯಕರ್ತೆಯರು, ಗ್ರಾ.ಪಂ. ಸದಸ್ಯರು ಉಪಸ್ಥಿತರಿದ್ದರು. ಆಯುಷ್ಮಾನ್ ಭಾರತ್
ಅಯುಷ್ಮಾನ್ ಭಾರತ್ ಬಗ್ಗೆ ಮಾಹಿತಿ ನೀಡಿ ಎಂದು ರಾಮಕೃಷ್ಣ ರೈ ಪೇರಾಲು ವಿನಂತಿಸಿದರು. ಉತ್ತರಿಸಿದ ಅಧಿಕಾರಿ ಪ್ರಮೀಳಾ ಟಿ., ದಿನದಲ್ಲಿ ಐವತ್ತು ಟೋಕನ್ ಕೊಡುತ್ತೇವೆ. ಕುಟುಂಬದ ಒಬ್ಬ ಸದಸ್ಯ ಟೋಕನ್ ಪಡೆಯಲು ಬಂದರೆ ಸಾಕು. ಕಾರ್ಡ್ ಮಾಡಿಸುವಾಗ ಕುಟುಂಬ ಸಮೇತ ಬರಬೇಕಾಗುತ್ತದೆ. ಆಧಾರ್ ಕಾರ್ಡ್ ಹಾಗೂ ಪಡಿತರ ಚೀಟಿ ಇರಬೇಕು. ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸಾ ಸೌಲಭ್ಯ ಇಲ್ಲದಿದ್ದರೆ ಮಾತ್ರ ಬೇರೆ ಕಡೆಗೆ ವರ್ಗಾಯಿಸಲಾಗುವುದು ಎಂದರು. ಕ್ಷಯ ರೋಗ ಪತ್ತೆ ಆಂದೋಲನ
ಆರೋಗ್ಯ ಶಿಕ್ಷಣಾಧಿಕಾರಿ ಪ್ರಮೀಳಾ ಟಿ. ಮಾತನಾಡಿ ಕ್ಷಯ ರೋಗದ ಬಗ್ಗೆ ಮಾಹಿತಿ ನೀಡಿದರು. ಈ ತಿಂಗಳು ಜುಲೈ 15ರಿಂದ 27ರ ವರೆಗೆ ಕ್ಷಯ ರೋಗ ಪತ್ತೆ ಆಂದೋಲನ ನಡೆಯಲಿದೆ. ಆರೋಗ್ಯ ಸಹಾಯಕಿಯರು ಹಾಗೂ ಆಶಾ ಕಾರ್ಯಕರ್ತೆಯರು ಕಫದ ಮಾದರಿ ಪರಿಶೀಲಿಸಿ ಸೂಕ್ತ ಸಲಹೆ ಸೂಚನೆಗಳನ್ನು ನೀಡಲಿ¨ªಾರೆ ಎಂದರು. ಸಂಚಾರಿ ಆರೋಗ್ಯ ಘಟಕ: ಅಭಿನಂದನೆ
ಮಂಡೆಕೋಲಿನಲ್ಲಿ ಸಂಚಾರಿ ಆರೋಗ್ಯ ಘಟಕ ಆರಂಭಿಸಿರುವುದಕ್ಕೆ ಆರೋಗ್ಯ ಇಲಾಖೆಗೆ ಸಭೆಯಲ್ಲಿ ಅಭಿನಂದಿಸಲಾಯಿತು. ರಾಮಕೃಷ್ಣ ರೈ ಪೇರಾಲು ಮಾತನಾಡಿ, ಹಿಂದಿನ ಗ್ರಾಮ ಸಭೆಯಲ್ಲಿ ಮಂಡೆಕೋಲು ಗ್ರಾಮಕ್ಕೆ ಸಂಚಾರಿ ಆರೋಗ್ಯ ಘಟಕ ಆರಂಭಿಸಬೇಕೆಂದು ಮನವಿ ಮಾಡಿದ್ದೆವು. ಶೀಘ್ರವಾಗಿ ಪ್ರಾರಂಭಿಸಿದ್ದೀರಿ ಅಭಿನಂದನೆಗಳು ಎಂದು ಹೇಳಿದರು.