Advertisement
ಶಿಕ್ಷಣ ಇಲಾಖೆ ಸಹಿತ ಸರಕಾರಿ, ಖಾಸಗಿ ಶಿಕ್ಷಣ ಸಂಸ್ಥೆ, ಎಸ್ಡಿಎಂಸಿ, ಇತರ ಎನ್ಜಿಒ ಸಂಸ್ಥೆಗಳ ಮೂಲಕ ಶಾಲೆ, ಕಾಲೇಜುಗಳಲ್ಲಿ ಇಲ್ಲಿನ ಕಡಲ ತೀರ, ಅದರಲ್ಲಿನ ಅಪಾಯ, ಎಚ್ಚರ ವಹಿಸಬೇಕಾದ ಅಗತ್ಯ ಇತ್ಯಾದಿ ಕುರಿತು ಮಾಹಿತಿ ನೀಡುವ ಜಾಗೃತಿ ಕಾರ್ಯಕ್ರಮಗಳನ್ನು ಜಿಲ್ಲಾ ಪಂಚಾಯತ್ ಆಯೋಜಿಸಲು ಯೋಜನೆ ರೂಪಿಸಲಾಗುತ್ತಿದೆ. ಶಾಲೆಗಳಲ್ಲಿ ಅಪಾಯಕಾರಿ ಸ್ಥಳಗಳ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸುವ ಉದ್ದೇಶವೂ ಇದೆ.
ಮಲ್ಪೆ, ಕಾಪು, ಪಡುಬಿದ್ರಿ, ಕೋಡಿ ಕನ್ಯಾನ, ಮರವಂತೆ, ಬೈಂದೂರು, ಸೋಮೇಶ್ವರ ಬೀಚ್ಗಳಲ್ಲಿ ಈಗಾಗಲೇ ಟೂರಿಸ್ಟ್ ಮಿತ್ರರು ಕಾರ್ಯ ನಿರ್ವಹಿಸುತ್ತಿದ್ದಾರೆ. ಶಾಲಾ ಪ್ರವಾಸ ಹಾಗೂ ರಜಾ ದಿನಗಳಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚು. ಹೀಗಾಗಿ 25 ಮಂದಿ ಹೋಂ ಗಾರ್ಡ್ಗಳನ್ನು ಹೆಚ್ಚುವರಿಯಾಗಿ ನೇಮಿಸಲಾಗುತ್ತಿದ್ದು, ಅವರಿಗೆ 5 ದಿನಗಳ ತರಬೇತಿ ನೀಡಲಾಗುತ್ತದೆ ಎನ್ನುತ್ತಾರೆ ಅಧಿಕಾರಿಯೊಬ್ಬರು. ಸದಾ ಇರಲಿ ಎಚ್ಚರ
ಗೆಳೆಯ/ಗೆಳತಿಯರ ಜತೆ ಸಮುದ್ರ, ನದಿ, ಕೆರೆಗೆ ಈಜಾಡಲು ಹೋದ ಮಕ್ಕಳು, ಯುವಕರು ಶವವಾಗಿ ಮನೆ ಸೇರುತ್ತಿರುವ ಆಘಾತಕಾರಿ ವಿದ್ಯಮಾನ ಗಳು ಹೆಚ್ಚುತ್ತಿವೆ. ಉಡುಪಿ ಜಿಲ್ಲೆಯಲ್ಲಿ 2024ರಲ್ಲಿ 10 ಕ್ಕೂ ಅಧಿಕ ಮಕ್ಕಳು ನದಿ/ಸಮುದ್ರಕ್ಕೆ ಈಜಲು ಹೋಗಿ ಪ್ರಾಣ ಕಳೆದುಕೊಂಡಿದ್ದಾರೆ. ಹಾಗಾಗಿ ಪೋಷಕರು, ಶಾಲೆ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ನೀರಿನ ಅಪಾಯಗಳ ಬಗ್ಗೆ ಅರಿವು ಮೂಡಿಸಬೇಕಿದೆ.
Related Articles
ನೀರು, ಬೆಂಕಿ, ಗಾಳಿ ಜತೆಗೆ ಆಟ ಸಲ್ಲದು ಎಂಬು ದು ಹಿರಿಯರ ಅನುಭವದ ನುಡಿ. ಆದರೂ ಮಕ್ಕಳು ಮತ್ತು ಯುವಜನರು ತಮಗೆ ಏನೂ ಆಗದು ಎಂದು ನೀರಿಗಿಳಿಯುತ್ತಾರೆ. ಆದರೆ, ಯಾರ ಲೆಕ್ಕಾ ಚಾರಕ್ಕೂ ಸಿಗದ ನೀರಿನ ಸೆಳೆತಕ್ಕೆ ಸಿಲುಕಿ ಸಾಯು ತ್ತಿದ್ದಾರೆ. ಅದರಲ್ಲೂ ನವೆಂಬರ್ನಿಂದ ಮೇ ತಿಂಗಳಲ್ಲಿ ಇಂಥ ಘಟನೆಗಳು ಹೆಚ್ಚು. ಸಾವನ್ನಪ್ಪುವವರಲ್ಲಿ 20 ವರ್ಷಕ್ಕಿಂತ ಸಣ್ಣ ವಯಸ್ಸಿನವರೇ ಹೆಚ್ಚು.
Advertisement
ಸುಳ್ಳು ಹೇಳಿ ತೆರಳುವ ಮಕ್ಕಳುಬಹುತೇಕ ದುರಂತಗಳಲ್ಲಿ ಮಕ್ಕಳು ಪೋಷಕರು ಅಥವಾ ಶಾಲೆಯ ಮುಖ್ಯಸ್ಥರಲ್ಲಿ ಸುಳ್ಳು ಹೇಳಿ ಮೋಜಿನಾಟಕ್ಕೆ ತೆರಳಿ ಪ್ರಾಣಕ್ಕೆ ಕುತ್ತು ತಂದುಕೊಂ ಡಿರುವ ಪ್ರಕರಣಗಳೇ ಹೆಚ್ಚು. ರಜೆ ಇದ್ದರೂ ವಿಶೇಷ ತರಗತಿ, ಗ್ರಂಥಾಲಯ, ಪಠ್ಯೇತರ ಶಿಬಿರ ಮೊದಲಾದ ಕಾರಣಗಳನ್ನು ನೀಡಿ ಮಕ್ಕಳು ಹೊರ ನಡೆಯುತ್ತಾರೆ. ಪದವಿ ತರಗತಿಗಳಲ್ಲಿ ಹಾಜರಾತಿ ಕಡ್ಡಾಯ ಇರದ ಕಾರಣ ಕೆಲವರು ತರಗತಿಗಳಿಗೆ ಗೈರು ಹಾಜರಾಗಿ ಮೋಜಿನಾಟಕ್ಕೆ ಹೊಳೆ, ಕೆರೆಗಳೇ ಆಗಿರುತ್ತವೆ. ಇದರ ವಿರುದ್ಧ ಜಾಗೃತಿ ಮೂಡಿಸುವುದು ಹಾಗೂ ನಿಗಾ ಇಡುವುದು ಸವಾಲಾಗಿ ಪರಿಣಮಿಸಿದೆ. ಪೋಷಕರು ಏನು ಮಾಡಬೇಕು?
ರಜೆ ದಿನಗಳಲ್ಲಿ ಮಕ್ಕಳ ಬಗ್ಗೆ ಹೆಚ್ಚು ನಿಗಾ ವಹಿಸಬೇಕು
ಶಿಕ್ಷಕರೊಂದಿಗೆ ಸಂಪರ್ಕವಿರಿಸಿ ಮಕ್ಕಳ ಬಗ್ಗೆ ಮಾಹಿತಿ ಪಡೆಯುತ್ತಿರಬೇಕು
ಈಜು ಸಹಿತ ಆತ್ಮರಕ್ಷಣೆ ಕಲೆಗಳನ್ನು ಕಲಿಸಬೇಕು.
ಬೆಟ್ಟ, ಕಾಡು, ನದಿಗಳಲ್ಲಿ ಮೋಜಿ ನಾಟಕ್ಕೆ ಪ್ರೋತ್ಸಾಹ ನೀಡಬಾರದು.
ನದಿ, ಬೆಂಕಿ, ಇತರೆ ಪ್ರಾಕೃತಿಕ ದುರಂತಗಳ ಅಪಾಯದ ಬಗ್ಗೆ ತಿಳಿಸಬೇಕು. ಶಾಲೆಗಳಲ್ಲಿ ಏನು ಮಾಡಬಹುದು?
ವರ್ಷಕ್ಕೊಮ್ಮೆ ಅರಿವು ಕಾರ್ಯಕ್ರಮ
ಹಿಂದೆ ನಡೆದ ದುರಂತಗಳ ಬಗ್ಗೆ ತಿಳಿಸಿ ಎಚ್ಚರಿಸುವುದು
ಮೋಜಿನಾಟ ತರುವ ಆಪತ್ತಿನ ಬಗ್ಗೆ ದೃಶ್ಯಗಳ ಮೂಲಕ ಜಾಗೃತಿ
ಅಪಾಯಕಾರಿ ನದಿ, ಕೆರೆಗಳ ಬಗ್ಗೆ ಗ್ರಾ. ಪಂ. ಪಟ್ಟಿ ಮಾಡಿ ಕ್ರಮ ಕೈಗೊಳ್ಳಬೇಕು.
ಮಕ್ಕಳ ಗ್ರಾಮ ಸಭೆಯಲ್ಲಿ ಪೋಷಕರು, ಮಕ್ಕಳಿಗೆ ತಿಳುವಳಿಕೆ ಮೂಡಿಸಬೇಕು. ಹೋಂಗಾರ್ಡ್ಗಳ ನಿಯೋಜನೆ
ಜಿಲ್ಲೆಯ ಬೀಚ್ಗಳಲ್ಲಿ ಪ್ರವಾಸಿ ಗರ ಹಿತದೃಷ್ಟಿಯಿಂದ ವಿಶೇಷ ಎಚ್ಚರಿಕೆ ವಹಿಸಲು ಪ್ರವಾಸೋದ್ಯಮ ಇಲಾಖೆ, ಪೊಲೀಸರಿಗೆ ಈಗಾಗಲೇ ಸೂಚಿಸಲಾಗಿದೆ. ಸುರಕ್ಷತೆ ದೃಷ್ಟಿಯಿಂದ 25 ಹೋಂಗಾರ್ಡ್ಗಳನ್ನು ಹೊಸದಾಗಿ ನಿಯೋಜಿಸಲಾಗುತ್ತಿದೆ. -ಡಾ| ಕೆ. ವಿದ್ಯಾಕುಮಾರಿ, ಜಿಲ್ಲಾಧಿಕಾರಿ ಉಡುಪಿ ಪೋಷಕರು ಮಕ್ಕಳ ಬಗ್ಗೆ ನಿಗಾಇಡಿ
ಅಗ್ನಿ ಶಾಮಕ ದಳವು ಪ್ರಾಕೃತಿಕದುರಂತ ಸಹಿತ ಬೆಂಕಿ, ನೀರು ಇವುಗಳಿಂದ ಸಂಭವಿಸಬಹು ದಾದ ದುರ್ಘಟನೆಗಳು, ಪ್ರಾಣ ರಕ್ಷಣೆ ಬಗ್ಗೆ ಶಾಲೆ, ಕಾಲೇಜುಗಳಲ್ಲಿ ಅರಿವು ಮೂಡಿಸಲಾಗುತ್ತಿದೆ. ನದಿ, ಹಳ್ಳ, ಕೆರೆಗಳಲ್ಲಿ ಮೋಜಿನಲ್ಲಿತೊಡಗದಂತೆ ಪೋಷಕರು ಮಕ್ಕಳ ಬಗ್ಗೆ ನಿಗಾವಹಿಸಬೇಕು.
– ವಿನಾಯಕ್ ಕಲ್ಗುಟ್ಕರ್, ಜಿಲ್ಲಾ ಅಧಿಕಾರಿ, ಅಗ್ನಿಶಾಮಕದಳ. ಶಾಲೆ, ಕಾಲೇಜುಗಳಲ್ಲಿ ಜಾಗೃತಿಗೆ ಯೋಜನೆ
ಗ್ರಾ.ಪಂ. ಮಟ್ಟದ ಮಕ್ಕಳ ವಿಶೇಷ ಗ್ರಾಮ ಸಭೆಗಳಲ್ಲಿ ಮಕ್ಕಳಿಗೆ ಪೋಷಕರಿಗೆ ಈ ಬಗ್ಗೆ ವಿಶೇಷ ಜಾಗೃತಿ ಮೂಡಿಸಲು ಸೂಚಿಸಲಾಗುವುದು. ಅಪಾಯಕಾರಿ ನದಿ, ಕೆರೆಗಳನ್ನು ಪಟ್ಟಿ ಮಾಡಿ, ಸುರಕ್ಷತೆ ಕ್ರಮ ವಹಿಸಲು ಗ್ರಾ.ಪಂ. ಆಡಳಿತಗಳಿಗೆ ತಿಳಿಸಲಾಗುತ್ತದೆ. ಶಿಕ್ಷಣ ಇಲಾಖೆ ಸಹಿತ ಸರಕಾರಿ, ಖಾಸಗಿ ಶಿಕ್ಷಣ ಸಂಸ್ಥೆ, ಎಸ್ಡಿಎಂಸಿ, ಇತರ ಎನ್ಜಿಒ ಸಂಸ್ಥೆಗಳ ಮೂಲಕ ಶಾಲೆ, ಕಾಲೇಜುಗಳಲ್ಲಿ ಈ ಬಗ್ಗೆ ಜಾಗೃತಿ ಕಾರ್ಯಕ್ರಮ ಏರ್ಪಡಿಸಲು ಯೋಜನೆ ರೂಪಿಸಲಾಗುವುದು.
– ಪ್ರತೀಕ್ ಬಯಾಲ್, ಜಿ. ಪಂ. ಸಿಇಒ. ಉಡುಪಿ ಜಿಲ್ಲೆ:ಸಂಭವಿಸಿದ ಕರಾಳ ಘಟನೆಗಳು
ಡಿ. 7: ಕೋಡಿ ಬೀಚ್ನಲ್ಲಿ ಧನರಾಜ್ (23), ದರ್ಶನ್ (18) ಸಹೋದರರ ದುರ್ಮರಣ ಡಿ. 1: ಬೆಳ್ವೆ ಸಮೀಪದ ಗುಮ್ಮಲ ಡ್ಯಾಂನ ಹಿನ್ನೀರಿನಲ್ಲಿ ಬಾಲಕರಾದ ಶ್ರೀಶ (13), ಪ್ರಜ್ವಲ್(14) ಮೃತ್ಯು ನ. 29: ಕಾರ್ಕಳ ದುರ್ಗಾಫಾಲ್ಸ್ನಲ್ಲಿ ಕಲ್ಯಾಣ ಪುರ ನಿವಾಸಿ ಜಾಯಲ್ ಡಯಾಸ್(19) ಮರಣ ಅ. 25: ಮಣಿಪಾಲ ಅಲೆವೂರು ನೈಲ್ಪಾದೆ ಚಶ್ಮಾವತಿ ನದಿಯಲ್ಲಿ ರೋಜರ್ ಲೀನ್(17), ಮಾಧವ್(18) ಸಾವು ಅ. 25: ಉಡುಪಿ ಕರಂಬಳ್ಳಿ ಕೆರೆಯಲ್ಲಿ ಸಿದ್ಧಾರ್ಥ್ ಶೆಟ್ಟಿ(17) ಸಾವು ಮೇ 2: ಶಿರ್ವ ಮೂಡುಬೆಳ್ಳೆ ಸಮೀಪದ ಹೊಳೆಯಲ್ಲಿ ಕ್ವಾಲ್ವಿನ್(21), ಜಾಬೀರ್(18), ರಿಝಾÌನ್(28) ಮೃತ್ಯು ಮಾ.26: ಹೊಸಾಳ ಗ್ರಾಮದ ಸೀತಾನದಿಯಲ್ಲಿ ಶ್ರೀಶ(21), ಪ್ರಶಾಂತ್ ಪೂಜಾರಿ(30) ಮರಣ ಫೆ.2: ಹೆಬ್ರಿ ನಾಡಾ³ಲು, ನೆಲ್ಲಿಕಟ್ಟೆ ಬಳಿ ಡಾ| ದೀಪಕ್ ಮತ್ತು ಶೈನು ಡೇನಿಯಲ್ ನೀರಿನಲ್ಲಿ ಮುಳುಗಿ ಮೃತ್ಯು ದ.ಕ ಜಿಲ್ಲೆಯಲ್ಲಿ 17ಕ್ಕೂ ಅಧಿಕ ವಿದ್ಯಾರ್ಥಿಗಳು ಸಾವು
ಮಂಗಳೂರು: 2024ರ ಜನವರಿಯಿಂದ ಡಿ.2ರವರೆಗೆ ದ.ಕ ಜಿಲ್ಲೆಯಲ್ಲಿ 17ಕ್ಕೂ ಅಧಿಕ ವಿದ್ಯಾರ್ಥಿಗಳು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ನ. 27: ವೇಣೂರು ಬರ್ಕಜೆ ಡ್ಯಾಂ ಬಳಿ ಫಲ್ಗುಣಿ ನದಿಯಲ್ಲಿ ಸ್ನಾನಕ್ಕೆಂದು ಹೋಗಿದ್ದ ಮಂಗಳೂರಿನ ಖಾಸಗಿ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳಾದ ಜೈಸನ್ (19), ಸೂರಜ್ (19) ಹಾಗೂ ಲಾರೆನ್ಸ್ (20) ಮೃತಪಟ್ಟಿದ್ದರು. ನ. 17: ಉಳ್ಳಾಲ ಸೋಮೇಶ್ವರದ ರೆಸಾರ್ಟ್ನ ಈಜುಕೊಳದಲ್ಲಿ ಮುಳುಗಿ ಮೈಸೂರಿನ ಜಿಎಸ್ಎಸ್ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿನಿಯರಾದ ಕೀರ್ತನಾ ಎನ್.(21), ನಿಶಿತಾ ಎಂ.ಡಿ.(21) ಮತ್ತು ಪಾರ್ವತಿ ಎಸ್(20) ಮೃತಪಟ್ಟಿದ್ದರು. ಮಾ. 3: ಪಣಂಬೂರಿನಲ್ಲಿ ಪಿಯುಸಿ ವಿದ್ಯಾರ್ಥಿ ಲಿಖೀತ್(18), ಖಾಸಗಿ ಸಂಸ್ಥೆಯ ಉದ್ಯೋಗಿಗಳಾಗಿದ್ದ ಮಿಲನ್(20) ಮತ್ತು ನಾಗರಾಜ್(24) ಸಮುದ್ರದಲ್ಲಿ ಮುಳುಗಿ ಮೃತಪಟ್ಟಿದ್ದರು. ಫೆ. 27: ಹಳೆಯಂಗಡಿ ಸಮೀಪ ನಂದಿನಿ ನದಿಯಲ್ಲಿ ಈಜಾಡಲು ಹೋಗಿದ್ದ 10ನೇ ತರಗತಿಯ ವಿಧ್ಯಾರ್ಥಿಗಳಾಗಿದ್ದ ಯಶ್ವಿತ್ ಚಂದ್ರಕಾಂತ್, ನಿರುಪ್, ಅನ್ವಿತ್ ಮತ್ತು ರಾಘವೇಂದ್ರ ಮೃತಪಟ್ಟಿದ್ದರು. ಮೇ 5: ಬಂಟ್ವಾಳ ನಾವೂರು ಗ್ರಾಮದ ನೀರಕಟ್ಟೆಯಲ್ಲಿ ನೇತ್ರಾವತಿ ನದಿ ನೀರಿನಲ್ಲಿ ಮುಳುಗಿ ಉಳ್ಳಾಲದ ಮರಿಯಮ್ ನಾಫಿಯಾ(14) ಮತ್ತು ಆಶುರಾ(11) ಮೃತಪಟ್ಟಿದ್ದರು. ಜ. 18: ನಾವೂರು ಗ್ರಾಮದ ಕೂಡಿಬೈಲಿನಲ್ಲಿ ನದಿ ಕಿನಾರೆಗೆ ಆಟವಾಡಲು ಹೋಗಿ ಬಾಲಕ ಪ್ರಜ್ವಲ್ ನಾಯಕ್ (14) ಮೃತಪಟ್ಟಿದ್ದರು. ಮಾ. 31: ನರಿಕೊಂಬು ಗ್ರಾಮದ ಪೊಯಿತ್ತಾಜೆಯಲ್ಲಿ ಈಜಲು ತೆರಳಿದ ಬಿಕ್ರೋಡಿ ನಿವಾಸಿ ಅನುಷ್(20) ಸಾವು. ಎ. 20: ಕಡೇಶ್ವಾಲ್ಯದ ನೆಚ್ಚಬೆಟ್ಟುನಲ್ಲಿ ಈಜಲು ತೆರಳಿದ್ದ ಬಾಲಕ ಸುಹೈಲ್ (13) ಸಾವು . ಅ. 23: ಮುಕ್ಕದಲ್ಲಿ ಬಂಟ್ವಾಳ ತಾಲೂಕಿನ ಪ್ರಜ್ವಲ್(21) ಸಮುದ್ರದಲ್ಲಿ ಈಜಾಡುವಾಗ ಮುಳುಗಿ ಸಾವು.