ಹೊಸದಿಲ್ಲಿ: ವಾಟ್ಸ್‌ಆ್ಯಪ್ ತನ್ನ ಬಳಕೆದಾರರಿಗೆ ಸುರಕ್ಷಿತ ಮತ್ತು ವೈಶಿಷ್ಟéಪೂರ್ಣ ಅನುಭವಕ್ಕಾಗಿ ಆಗಾಗ್ಗೆ ಹೊಸ ಅಪ್ಡೇಟ್ ಗಳನ್ನು ಪರಿಚಯಿಸುತ್ತಲೇ ಇರುತ್ತದೆ. ಸದ್ಯ ಅಪರಿಚಿತ ಸಂಖ್ಯೆಗಳಿಂದ ಬರುವ ಸಂದೇಶಗಳಿಂದ ಬೇಸತ್ತಿರುವ ಬಳಕೆದಾರರಿಗೆ ಶೀಘ್ರದಲ್ಲಿ ಪರಿಹಾರ ಒದಗಿಸಲು ವಾಟ್ಸ್ ಆ್ಯಪ್ ಮುಂದಾಗಿದ್ದು, ಅಪರಿಚಿತರ ಸಂದೇ ಶಗಳನ್ನು ಬ್ಲಾಕ್ ಮಾಡುವ ಸೌಲಭ್ಯ ಕಲ್ಪಿಸಲಿದೆ. ಅಲ್ಲದೇ ತಮ್ಮ ಪ್ರೀತಿ ಪಾತ್ರರು ವಾಟ್ಸ್‌ಆ್ಯಪ್‌ನಲ್ಲಿ ಹಂಚಿಕೊಳ್ಳುವ ಸ್ಟೇಟಸ್‌ಗಳಿಗೆ ಸುಲಭವಾಗಿ ಲೈಕ್ ಒತ್ತುವ ಅವಕಾಶವನ್ನೂ ಒದಗಿಸಲಿದೆ ಎನ್ನಲಾಗಿದೆ.
ಅಪರಿಚಿತ ಸಂದೇಶಗಳಿಗೆ ಗುಡ್‌ಬೈ
ಬಳಕೆದಾರರ ಹಿತದೃಷ್ಟಿ, ಸುರಕ್ಷೆಯ ಉದ್ದೇಶದಿಂದ ಅಪರಿಚಿತ ಸಂಖ್ಯೆಗಳಿಂದ ನಿರ್ದಿಷ್ಟ ಪ್ರಮಾಣ ಮೀರಿ ಸಂದೇಶಗಳು ಬರಲಾರಂಭಿಸಿದರೆ ಆ ಸಂದೇಶಗಳನ್ನು ಸ್ವಯಂಚಾಲಿತವಾಗಿ ವಾಟ್ಸ್‌ಆ್ಯಪ್ ಬ್ಲಾಕ್ ಮಾಡಲಿದೆ. ಬಳಕೆ ದಾರರು ವಾಟ್ಸ್‌ಆ್ಯಪ್ ಪ್ರೈವೆಸಿ ಸೆಟ್ಟಿಂಗ್‌ನಲ್ಲಿ “ಬ್ಲಾಕ್ ಅನ್ನೋನ್ ಅಕೌಂಟ್ ಮೆಸೇಜಸ್’ ಎಂಬ ಈ ಫೀಚರ್ ಆಯ್ಕೆ ಮಾಡುವ ಮೂಲಕ ಈ ಸೌಲಭ್ಯ ಪಡೆಯಬಹುದು.
ಸ್ಟೇಟಸ್‌ಗೂ ಲೈಕ್
ಇನ್‌ಸ್ಟಾಗ್ರಾಂ ಮತ್ತು ಫೇಸ್‌ಬುಕ್ ಬಳಕೆದಾರರಿಗೆ ಸದ್ಯ ಲಭ್ಯವಿರುವ ಸ್ಟೋರಿ ಲೈಕ್ ಅವಕಾಶದಂತೆಯೇ ಸೋದರ ಸಂಸ್ಥೆ ವಾಟ್ಸ್‌ಆ್ಯಪ್‌ನ ಲ್ಲಿಯೂ ಬರಹ, ಚಿತ್ರ, ವೀಡಿಯೋ ಅಥವಾ ಆಡಿಯೋಗಳ ರೂಪದಲ್ಲಿ ಹಂಚಿಕೊಳ್ಳಲಾಗುವ ಸ್ಟೇಟ ಸ್‌ಗಳಿಗೆ ಇನ್ನು ಮುಂದೆ ಲೈಕ್ ಒತ್ತಲು ವಾಟ್ಸ್‌ಆ್ಯಪ್ ಅವಕಾಶ ಕಲ್ಪಿಸಲಿದೆ. ಅಲ್ಲದೇ ಸ್ಟೇಟಸ್‌ಗೆ ಲೈಕ್ ಒತ್ತಿರುವವರ ಹೆಸರುಗಳು ಕೂಡ ಸ್ಟೇಟಸ್ ವೀವರ್ಸ್ ಪಟ್ಟಿಯಲ್ಲಿಯೇ ಪರಿಶೀಲಿಸಬಹುದಾಗಿದೆ. ಸದ್ಯ ಈ ವೈಶಿಷ್ಟ್ಯಗಳು ಕೇವಲ ವಾಟ್ಸ್‌ಆ್ಯಪ್‌ನ ಬೀಟಾ ಆವೃತ್ತಿಯ ಬಳಕೆದಾರರಿಗೆ ಮಾತ್ರ ಲಭ್ಯವಿದ್ದು, ಶೀಘ್ರದಲ್ಲೇ ಸಾಮಾನ್ಯ ಬಳಕೆದಾರರಿಗೂ ಈ ಸೌಲಭ್ಯಗಳು ಲಭ್ಯವಾಗಲಿದೆ.