Advertisement

ವಾಟ್ಸ್‌ ಆ್ಯಪ್‌ ಡಾರ್ಕ್‌ ಮೋಡ್‌ ಮೋಡಿ

09:58 AM Mar 10, 2020 | mahesh |

ವಾಟ್ಸ್‌ ಆ್ಯಪ್‌ ಕಡೆಗೂ “ಡಾರ್ಕ್‌ ಮೋಡ್‌’ ಎಂಬ ಹೊಸ ಸವಲತ್ತನ್ನು ಆಂಡ್ರಾಯ್ಡ ಮತ್ತು ಐಫೋನ್‌ ಬಳಕೆದಾರರಿಗೆ ಬಿಡುಗಡೆಗೊಳಿಸಿದೆ. ಒಂದು ವರ್ಷದಿಂದಲೂ ಸಂಸ್ಥೆ ಡಾರ್ಕ್‌ ಮೋಡ್‌ ಅನ್ನು ಅಭಿವೃದ್ಧಿ ಪಡಿಸುತ್ತಲೇ ಇತ್ತು. ಅಲ್ಲದೆ ಕೆಲ ಸಮಯದ ಹಿಂದೆ ಡಾರ್ಕ್‌ ಮೋಡ್‌ನ‌ ಬೀಟಾ(ಅಪೂರ್ಣ) ಆವೃತ್ತಿಯನ್ನು ಬಿಡುಗಡೆಗೊಳಿಸಿತ್ತು. ಇದೀಗ ಸಂಸ್ಥೆ, ಪೂರ್ಣ ಪ್ರಮಾಣದಲ್ಲಿ ಈ ಸವಲತ್ತನ್ನು 2 ಶತಕೋಟಿ ಸ್ಮಾರ್ಟ್‌ಫೋನುಗಳಲ್ಲಿ ಅಳವಡಿಸಲು ಸಂಸ್ಥೆ ಮುಂದಾಗಿದೆ.

Advertisement

ಏನು ಪ್ರಯೋಜನ?
ಫೋನನ್ನು ಮಂದ ಬೆಳಕಿನಲ್ಲಿ ಚಾಲೂ ಮಾಡಿದರೆ, ಕಣ್ಣುಗಳಿಗೆ ದಣಿವಾಗದು. ಅಕ್ಷರಗಳನ್ನು ಓದಲು, ಚಿತ್ರಗಳನ್ನು ನೋಡಲು ಶ್ರಮವಾಗದ ರೀತಿಯಲ್ಲಿ ಈ ಸವಲತ್ತನ್ನು ಅಭಿವೃದ್ಧಿಪಡಿಸಲಾಗಿದೆ. ಅಲ್ಲದೆ, ಕತ್ತಲ ಕೋಣೆಯಲ್ಲಿ ಯಾವುದೋ ಕಾರಣಕ್ಕೆ ಫೋನ್‌ ಸ್ಕ್ರೀನ್‌ ಆನ್‌ ಆದಾಗ ಝಗ್ಗನೆ ಕೋರೈಸುವ ಬೆಳಕು ಕೋಣೆಯನ್ನು ತುಂಬುವುದರಿಂದ ಮುಕ್ತಿ ಪಡೆಯಬಹುದು.

ಡಾರ್ಕ್‌ ಮೋಡ್‌ ಆಯ್ಕೆ ಹೇಗೆ?
ಕೆಲವೊಂದು ಸಂದರ್ಭಗಳಲ್ಲಿ ಫೋನು ತನ್ನಷ್ಟಕ್ಕೇ ಡಾರ್ಕ್‌ ಮೋಡ್‌ಅನ್ನು ಅಳವಡಿಸಿಕೊಂಡಿರಬಹುದು. ಇಲ್ಲದೇ ಹೋದರೆ ಅದನ್ನು ಬಳಕೆದಾರ ಖುದ್ದಾಗಿ ಅಳವಡಿಸಿಕೊಳ್ಳಬೇಕಾಗುತ್ತದೆ. ಫೋನಿನ ಆಪರೇಟಿಂಗ್‌ ಸಿಸ್ಟಮ್‌, ಆಂಡ್ರಾಯ್ಡ 10 ಮತ್ತು ಐಫೋನುಗಳಲ್ಲಿ ಐಓಎಸ್‌13 ಇದ್ದರೆ ಸಿಸ್ಟಮ್‌ ಸೆಟ್ಟಿಂಗ್ಸ್‌ನಲ್ಲಿ ಹೋಗಿ “ಡಾರ್ಕ್‌ ಮೋಡ್‌’ಅನ್ನು ಸೆಲೆಕ್ಟ್ ಮಾಡಿಕೊಳ್ಳಬಹುದು. ಒಂದು ವೇಳೆ ಆಂಡ್ರಾಯ್ಡ ಫೋನುಗಳಲ್ಲಿ ಓಎಸ್‌ ಆಂಡ್ರಾಯ್ಡ 9ನೇ ಆವೃತ್ತಿ ಇದ್ದರೆ, ವಾಟ್ಸ್‌ ಆ್ಯಪ್‌ ಸೆಟ್ಟಿಂಗ್ಸ್‌ನಲ್ಲಿ, ಚಾಟ್ಸ್‌ ಆಯ್ಕೆ ಕ್ಲಿಕ್‌ ಮಾಡಬೇಕು. ಅಲ್ಲಿ “ಥೀಮ್‌’ ಅಂಬ ಆಯ್ಕೆ ಸೆಲೆಕ್ಟ್ ಮಾಡಿ. ಆಗ “ಡಾರ್ಕ್‌ ಮೋಡ್‌’ ಆಯ್ಕೆ ತೆರೆದುಕೊಳ್ಳುವುದು. ಫೋನು ಡಾರ್ಕ್‌ ಮೋಡ್‌ನ‌ಲ್ಲಿದೆ ಎನ್ನುವುದನ್ನು ತಿಳಿಯಲು ಸುಲಭ ವಿಧಾನವೆಂದರೆ ವಾಟ್ಸ್‌ ಆ್ಯಪ್‌ನ ಬಣ್ಣವನ್ನು ಗಮನಿಸುವುದು. ಡಾರ್ಕ್‌ ಮೋಡಿಗೆ ಬದಲಾಗಿದ್ದರೆ ಅದರ ಬಣ್ಣ ಕಪ್ಪು ಅಥವಾ ಗಾಢವಾದ ಬೂದು ಬಣ್ಣಕ್ಕೆ ತಿರುಗಿಕೊಂಡಿರುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next