Advertisement
ಉಡುಪಿ ವಿಭಾಗದಲ್ಲಿ ಅಧಿಕಾರಿಗಳಿಗೆ ಬುಧವಾರ 20ರಷ್ಟು ಫೋಟೋ ಸಂದೇಶಗಳು ಬಂದಿವೆ. ನಾಲ್ಕು ಕರೆಗಳು ಬಂದಿವೆ. ಈ ದೂರುಗಳ ಅನ್ವಯ ವಿಭಾಗೀಯ ಅಧಿಕಾರಿಗಳು ಮತ್ತು ಗುತ್ತಿಗೆದಾರರಿಗೆ ತತ್‌ಕ್ಷಣ ಮಾಹಿತಿ ನೀಡಲಾಗಿದೆ. ಲೋಕೋಪಯೋಗಿ ಅಲ್ಲದ ರಸ್ತೆಗಳ ಬಗ್ಗೆಯೂ ದೂರುಗಳು ಬಂದಿದ್ದು ಪಂಚಾಯತ್, ಸ್ಥಳೀಯಾಡಳಿತಗಳಿಗೆ ಮಾಹಿತಿ ನೀಡಲಾಗಿದೆ. ಬುಧವಾರ ಕರೆಗಳ ಸಂಖ್ಯೆ ಕಡಿಮೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಪುತ್ತೂರು ತಾಲೂಕಿನಲ್ಲಿ ಲೋಕೋಪಯೋಗಿ ರಸ್ತೆಗಳ ಬಗ್ಗೆ ಗಮನ ಕೊಡಲು ಈ ಹಿಂದೆಯೇ ಗ್ರೂಪ್ ಒಂದನ್ನು ಮಾಡಲಾಗಿದ್ದು ಸಕ್ರಿಯವಾಗಿದೆ. ಈಗ ಇಲಾಖೆ ಸೂಚನೆ ಮೇರೆಗೆ ಮತ್ತೆ ಹೊಸ ವಾಟ್ಸ್‌ಆ್ಯಪ್ ವ್ಯವಸ್ಥೆ ಮಾಡ ಲಾಗಿದ್ದು ಒಂದು ದೂರಷ್ಟೇ ಬಂದಿದೆ. “ಕಳೆದ ಮೂರು ವರ್ಷಗಳಿಂದ ನಮ್ಮಲ್ಲಿ ಗ್ರೂಪ್ ಸಕ್ರಿಯವಾಗಿದೆ. ಇಲಾಖೆಯ ಸ್ಪಂದನೆಯೂ ಇದೆ. ಹೊಸ ಖಾತೆಗೆ 7 ದೂರು ಬಂದಿದ್ದರೂ ಇಲಾಖೆಗೆ ಸಂಬಂಧಿಸಿದ್ದು 1 ಮಾತ್ರ. ಉಳಿ
ದವು ಬೇರೆ ವ್ಯಾಪ್ತಿಗೆ ಸೇರಿದ್ದು’ ಎಂದು ಪಿಡಬ್ಲೂಡಿ ಪ್ರಭಾರ ಸಹಾಯಕ ಕಾರ್ಯಪಾಲಕ ಅಭಿಯಂತ ಪ್ರಮೋದ್ ಕುಮಾರ್ ಕೆ.ಕೆ. ತಿಳಿಸಿದ್ದಾರೆ.