Advertisement
ಹೌದು, ವಾಟ್ಸ್ಯಾಪ್ ಡಿಸ್ ಅಪಿಯರಿಂಗ್ ಚಾಟ್ಸ್ ವಿಶೇಷತೆಯ ಮೇಲೆ ಕಾರ್ಯ ನಿರ್ವಹಿಸುತ್ತಿದೆ. ಈ ಮೋಡ್ ವಾಟ್ಸ್ಯಾಪ್ ನಲ್ಲಿ ಒನ್ ಆನ್ ಚಾಟ್ ಹಾಗೂ ಗ್ರೂಪ್ ಚಾಟ್ ಗಳಿಗೆ ಲಭ್ಯವಿರುತ್ತದೆ. ಈ ವಿಶೇಷತೆಯು ಈಗಾಗಲೇ ಅಸ್ತಿತ್ವದಲ್ಲಿರುವ ಡಿಸ್ ಅಪಿಯರಿಂಗ್ ಮೆಸೇಜ್ ವಿಶೇಷತೆಯ ವಿಸ್ತೃತ ರೂಪವಾಗಿದೆ.
Related Articles
Advertisement
ಯಾರಾದರೂ ತಮ್ಮ ಸಂದೇಶಗಳನ್ನು ಡಿಲೀಟ್ ಮಾಡಲು ಬಯಸಿದರೆ, ಅವರು ಡಿಸ್ ಅಪಿಯರಿಂಗ್ ಚಾಟ್ ವಿಶೇಷತೆಯನ್ನು ಆಫ್ ಮಾಡಬೇಕಾಗುತ್ತದೆ. ಮೂಲಗಳ ಪ್ರಕಾರ, ಹೊಸ ಚಾಟ್‌ನಲ್ಲಿ ಡಿಸ್ ಅಪಿಯರಿಂಗ್ ಚಾಟ್ ಮೋಡ್ ಆನ್ ಆದಾಗ ವಾಟ್ಸ್ಯಾಪ್ ಬಳಕೆದಾರರಿಗೆ ತಿಳಿಸುತ್ತದೆ.
ಇನ್ನು, ವಾಟ್ಸ್ಯಾಪ್ ಪ್ರಸ್ತುತ ಡಿಸ್ ಅಪಿಯರಿಂಗ್ ಹಾಗೂ ವೀವ್ ವನ್ಸ್ ಫೀಚರ್ ನನ್ನು ಸಹ ಒಳಗೊಂಡಿದೆ. ವೀವ್ ವನ್ಸ್ ವಿಶೇಷತೆಯು ಫೋಟೋ ಕಳುಹಿಸುವ ಅವಕಾಶವನ್ನು ನೀಡುತ್ತದೆ. ರಿಸೀವರ್ ಅದನ್ನು ಓಪನ್ ಮಾಡಿ ಮತ್ತೆ ವಾಟ್ಸ್ಯಾಪ್ ಕ್ಲೋಸ್ ಮಾಡಿದರೆ ಆ ಫೋಟೋ ಕಾಣಿಸುವುದಿಲ್ಲ. ಆದರೆ, ಪ್ರತಿ ಬಾರಿ ಫೋಟೋ ಅಥವಾ ವೀಡಿಯೋ ಕಳುಹಿಸುವಾಗಲೆಲ್ಲಾ ವೀವ್ ವನ್ಸ್ ಮಿಡಿಯಾವನ್ನು ಆಯ್ಕೆ ಮಾಡಬೇಕಾಗುತ್ತದೆ.
ಇದನ್ನೂ ಓದಿ : ವಿಧಾನಸಭಾ ಚುನಾವಣಾ ಪೂರ್ವ ಸಿದ್ಧತೆ ಹಿನ್ನೆಲೆ: ಪ್ರಫುಲ್ ಪಟೇಲ್ ಗೋವಾ ಭೇಟಿ