Advertisement

ದಾರಿ ಯಾವುದಯ್ಯಾ ?

07:55 AM Aug 11, 2017 | Team Udayavani |

ಒಂದೇ ಒಂದು ಗೊತ್ತಿದ್ದ ಮುಖ ಆ ವೇದಿಕೆಯಲ್ಲಿರಲಿಲ್ಲ. ಆ ಮಟ್ಟಿಗೆ ಅದು ಸಂಪೂರ್ಣ ಹೊಸಬರ ತಂಡ. ನಿರ್ದೇಶಕ, ನಿರ್ಮಾಪಕ, ಕಲಾವಿದರು, ತಂತ್ರಜ್ಞರು ಎಲ್ಲರೂ ಹೊಸಬರೇ. ಅವರೆಲ್ಲಾ ಸೇರಿ “ಅಯನ’ ಎಂಬ ಚಿತ್ರವೊಂದನ್ನು ಮಾಡಿ ಮುಗಿಸಿದ್ದಾರೆ. ಸದ್ಯದಲ್ಲೇ ಚಿತ್ರವನ್ನೂ ಬಿಡುಗಡೆ ಮಾಡುವುದಕ್ಕೆ ಸಜ್ಜಾಗಿದ್ದಾರೆ. ಅದಕ್ಕೂ ಮುನ್ನ ಒಮ್ಮೆ ಚಿತ್ರದ ಬಗ್ಗೆ ಮಾತಾಡಿ ಬಿಡೋಣ ಎಂದು ಚಿತ್ರತಂಡದವರು, ಮಾಧ್ಯಮದವರೆದುರು ನಿಂತಿದ್ದರು.

Advertisement

“ಅಯನ’ ಎಂದರೆ ಒಂದು ಪ್ರಯಾಣವಂತೆ. ಹಾಗಂತ ಹೇಳಿದವರು ನಿರ್ದೇಶಕ ಗಂಗಾಧರ್‌ ಸಾಲಿಮs…. ಅವರು ನಿರ್ದೇಶಕರಷ್ಟೇ ಅಲ್ಲ, ನಿರ್ಮಾಪಕರಲ್ಲೊಬ್ಬರು. ಕಥೆಯನ್ನೂ ಅವರೇ ಬರೆದಿದ್ದಾರೆ. ಹಾಗಾಗಿ ಅವರೇ ಚಿತ್ರದ ಕುರಿತು ಮೊದಲು ಮಾತನಾಡಿದರು. “”ಅಯನ’ ಎನ್ನುವುದು ಸಂಸ್ಕೃತದ ಪದ. ಹಾಗೆಂದರೆ, ದಾರಿ ಅಥವಾ ಸೂರ್ಯನ ಪಥ ಎಂದರ್ಥ. ಸೂರ್ಯ ಉತ್ತರ ಧ್ರುವದಿಂದ ದಕ್ಷಿಣ ಧ್ರುವಕ್ಕೆ ಹೇಗೆ ಪ್ರಯಾಣ ಮಾಡುತ್ತಾನೋ, ಅದೇ ತರಹ ಆದಿತ್ಯ ಎಂಬ ಯುವಕನ ಪ್ರಯಾಣವನ್ನು ಈ ಚಿತ್ರದಲ್ಲಿ ತೋರಿಸಲಾಗಿದೆ. ಇಲ್ಲಿ ಆವನ ಜೀವನ, ಫ್ಯಾಮಿಲಿ, ಪ್ರೀತಿ, ಸ್ನೇಹ ಎಲ್ಲವನ್ನೂ ಹೇಳುವ ಪ್ರಯತ್ನ ಮಾಡಿದ್ದೇವೆ. ಒಬ್ಬ ಮಹತ್ವಾಕಾಂಕ್ಷೆಯ ಸಾಫ್ಟ್ ವೇರ್‌ ಇಂಜಿನಿಯರ್‌ ತನ್ನ ಜೀವನದಲ್ಲಿ ಏನೇನು ಎದುರಿಸುತ್ತಾನೆ ಎನ್ನುವುದನ್ನು ಈ ಚಿತ್ರದ ಮೂಲಕ ಹೇಳುತ್ತಿದ್ದೇವೆೆ’ ಎಂದು ತೋರಿಸಲು ಹೊರಟಿದ್ದೇವೆ’ ಎಂದರು.

ಈ ಚಿತ್ರದ ಮೂಲಕ ದೀಪಕ್‌ ಸುಬ್ರಹ್ಮಣ್ಯ, ಅಪೂರ್ವ ಇಬ್ಬರೂ ನಾಯಕ-ನಾಯಕಿಯಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಶ್ರೀರಾಮ್‌ ಸಂಗೀತ ಸಂಯೋಯಿಜಿಸಿದರೆ, ವರುಣ್‌ ಛಾಯಾಗ್ರಹಣ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next