Advertisement

Pak ಕ್ರಿಕೆಟ್‌ ಕೋಚ್‌: ಇನ್ನೂ ಸ್ಪಷ್ಟ ನಿರ್ಧಾರ ತಿಳಿಸದ ವಾಟ್ಸನ್‌

12:03 AM Mar 16, 2024 | Team Udayavani |

ಕರಾಚಿ: ಪಾಕಿಸ್ಥಾನ ಪುರುಷರ ಕ್ರಿಕೆಟ್‌ ತಂಡದ ಮುಖ್ಯ ಕೋಚ್‌ ಸ್ಥಾನಕ್ಕೆ ಅರ್ಜಿ ಸಲ್ಲಿಸಿರುವ ಆಸ್ಟ್ರೇಲಿಯದ ಮಾಜಿ ಆಲ್‌ ರೌಂಡರ್‌ ಶೇನ್‌ ವಾಟ್ಸನ್‌, ದೊಡ್ಡ ಮೊತ್ತದ ವೇತನಕ್ಕಾಗಿ ಬೇಡಿಕೆಯಿಟ್ಟಿದ್ದರು. ಈ ಬೇಡಿಕೆಗೆ ಪಿಸಿಬಿ ಒಪ್ಪಿದರೂ ತಮ್ಮ ನಿರ್ಧಾರ ತಿಳಿಸಲು ವಾಟ್ಸನ್‌ ಮೀನಮೇಷ ಎಣಿಸುತ್ತಿದ್ದಾರೆ!

Advertisement

ಮೂಲವೊಂದರ ಪ್ರಕಾರ, ಪಾಕ್‌ ಕ್ರಿಕೆಟ್‌ ತಂಡದ ಮುಖ್ಯ ಕೋಚ್‌ ಹುದ್ದೆಗೆ ವಾಟ್ಸನ್‌, ವಾರ್ಷಿಕ 2 ಮಿಲಿಯನ್‌ ಡಾಲರ್‌ (16.58 ಕೋಟಿ ರೂ.) ವೇತನಕ್ಕಾಗಿ ಬೇಡಿಕೆಯಿಟ್ಟಿದ್ದಾರೆ. ಅಂದರೆ, ಪಾಕಿಸ್ಥಾನಿ ರೂಪಾಯಿ ಮೌಲ್ಯದಂತೆ ಒಂದು ತಿಂಗಳಿಗೆ 4.6 ಕೋಟಿ ರೂ.ನಷ್ಟಾಗುತ್ತದೆ. ಇದು ವಿದೇಶಿ ಕೋಚ್‌ ಒಬ್ಬರಿಗೆ ಪಿಸಿಬಿ ನೀಡುವ ಅತ್ಯಧಿಕ ಸಂಭಾವನೆಯೆನಿಸಲಿದೆ. ಆದರೂ ವಾಟ್ಸನ್‌ ಇನ್ನೂ ಲೆಕ್ಕಾಚಾರ ಹಾಕುತ್ತಲೇ ಇದ್ದಾರೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next