Advertisement
ಭಾನುವಾರ ಇಲ್ಲಿ ನಡೆದ “ಎ’ ಗುಂಪಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಕರ್ನಾಟಕ 7 ವಿಕೆಟ್‌ಗೆ 158 ರನ್ ಬಾರಿಸಿತ್ತು. ಇದಕ್ಕೆ ಉತ್ತರವಾಗಿ ಪಂಜಾಬ್ ಕೂಡ 9 ವಿಕೆಟ್‌ಗೆ 158 ರನ್ ಬಾರಿಸಿತ್ತು. ಸೂಪರ್ ಓವರ್‌ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ 15 ರನ್ ಬಾರಿಸಿದರೆ, ಕರ್ನಾಟಕ 11 ರನ್ ಬಾರಿಸಿ ಸೋಲುಂಡಿದೆ.
ಓವರ್‌ಗೆ 82 ರನ್‌ಗೆ ತೆದುಕೊಂಡು ಹೋದರು. ನಂತರ ಒಂದರ ನಂತರ ಒಂದರಂತೆ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿದರೂ ಅಂತಿಮವಾಗಿ 158 ರನ್ ಬಾರಿಸಿ ಟೈ ಸಾಧಿಸುವಲ್ಲಿ ಯಶಸ್ವಿಯಾಯಿತು. ಕರ್ನಾಟಕದ ಪರ ಎಸ್.ಅರವಿಂದ್ 4 ವಿಕೆಟ್
ಪಡೆದು ಮಿಂಚಿದರು. ಜೋಶಿ ಸ್ಫೋಟ, ಗೌತಮ್ ತಾಳ್ಮೆಯ ಆಟ: ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ ಕರ್ನಾಟಕ ಆರಂಭದಲ್ಲಿಯೇ ಮಾಯಾಂಕ್ ಅಗರ್ವಾಲ್, ಕರುಣ್ ನಾಯರ್, ಕೆ.ಗೌತಮ್ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ನಂತರ ಜತೆಯಾದ ಆರ್.ಸಮಥ್
ì(31 ರನ್) ಮತ್ತು ಸಿ.ಎಮ್.ಗೌತಮ್ (36 ರನ್) ತಂಡಕ್ಕೆ ಚೇತರಿಕೆ ನೀಡಿದರು. ಈ ಜೋಡಿ ಕಳಚಿಕೊಂಡಾಗ ಕ್ರೀಸ್‌ಗೆ ಬಂದ ಅನಿರುದ್ಧ್ ಜೋಶಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು. 19 ಎಸೆತದಲ್ಲಿ 6 ಬೌಂಡರಿ, 1 ಸಿಕ್ಸರ್ ಸೇರಿದಂತೆ ಅಜೇಯ 40 ರನ್
ಬಾರಿಸಿ ತಂಡದ ಮೊತ್ತವನ್ನು ಹೆಚ್ಚಿಸಿದರು. ಸಂಕ್ಷಿಪ್ತ ಸ್ಕೋರ್: ಕರ್ನಾಟಕ 20 ಓವರ್‌ಗೆ 158/7 (ಅನಿರುದ್ಧ್ ಜೋಶಿ 40, ಸಿ.ಎಂ.ಗೌತಮ್ 36, ಬೆಲೆ¤àಜ್ ಸಿಂಗ್ 21ಕ್ಕೆ 3), ಪಂಜಾಬ್ 20 ಓವರ್‌ಗೆ 158/9 (ಮನ್‌ದೀಪ್ ಸಿಂಗ್ 45, ಹರ್ಭಜನ್
ಸಿಂಗ್ 33, ಎಸ್.ಅರವಿಂದ್ 32ಕ್ಕೆ 4)
Related Articles
ಉಭಯ ತಂಡಗಳು ತಲಾ 158 ರನ್ ಬಾರಿಸಿ ಟೈ ಮಾಡಿಕೊಂಡಿರುವುದರಿಂದ ಪಂದ್ಯದ ಫಲಿತಾಂಶಕ್ಕಾಗಿ ಸೂಪರ್ ಓವರ್ ಮೊರೆ
ಹೋಗಲಾಯಿತು. ಈ ಸಂದರ್ಭದಲ್ಲಿ ಪಂಜಾಬ್ ಪರ ಬ್ಯಾಟಿಂಗ್‌ಗೆ ಬಂದ ಯುವರಾಜ್ ಸಿಂಗ್ (5 ರನ್), ಮನ್‌ದೀಪ್‌ಸಿಂಗ್ (10 ರನ್) ಕೆ.ಗೌತಮ್ ಓವರ್‌ನಲ್ಲಿ 15 ರನ್ ಬಾರಿಸಿದರು. ನಂತರ ಕರ್ನಾಟಕದ ಪರ ಕ್ರೀಸ್‌ಗೆ ಬಂದ ಕರುಣ್ ನಾಯರ್ (8 ರನ್),
ಅನಿರುದ್ಧ್ ಜೋಶಿ (2 ರನ್), 1 ಇತರೆ ರನ್ ಸೇರಿದಂತೆ ಒಟ್ಟು 11 ರನ್ ಬಂತು. ಪಂಜಾಬ್ ಪರ ಸಿದ್ಧಾರ್ಥ ಕೌರ್ ಸೂಪರ್ ಓವರ್‌ನಲ್ಲಿ ಬಿಗುವಿನ ದಾಳಿ ನಡೆಸಿ ಪಂಜಾಬ್ ಗೆಲುವಿಗೆ ಕಾರಣರಾದರು.
Advertisement