Advertisement
ಸಮಯ ಪಾಲನೆ ಅತ್ಯಂತ ಸವಾಲಿನ ಕೆಲಸ. ಸವಾಲನ್ನು ಸ್ವೀಕರಿಸಿ ಯಾರು ಸಮಯ ಪಾಲನೆ ಮಾಡುತ್ತಾರೋ, ಅವರು ಶಿಸ್ತುಬದ್ಧ ಜೀವನ ನಡೆಸುತ್ತಾರೆ. ಸಮಯ ಹೊಂದಾಣಿಕೆ ಮಾಡಿಕೊಳ್ಳುವ ಕಲೆಯಿಂದ ಹೆಚ್ಚಿನ ಸಾಧನೆ ಮಾಡಬಹುದು. ಸಮಯ ಎಂಬುದು ನಿಂತ ನೀರಲ್ಲ. ಸಮಯಕೋಸ್ಕರ ನಾವೂ ಕಾಯಬೇಕೆ ಹೊರತು ಸಮಯ ನಮಗಾಗಿ ಕಾಯುವುದಿಲ್ಲ. `ಮಾತು ಆಡಿದರೆ ಹೋಯಿತು ಮುತ್ತು ಒಡೆದರೆ ಹೋಯಿತು~ ಎಂಬ ನಾಣ್ಣುಡಿಯಂತೆ ಒಂದು ಬಾರಿ ಹೋದ ಸಮಯ ಮತ್ತೆಂದಿಗೂ ನಮ್ಮ ಜೀವನದಲ್ಲಿ ಬಾರದು.
Related Articles
Advertisement
ಒತ್ತಡವನ್ನು ಎದುರಿಸಲು ನೀವು ಮಾಡಬಹುದಾದ ಪ್ರಮುಖ ಕೆಲಸವೆಂದರೆ ವ್ಯಾಯಾಮ ಮಾಡುವುದು, ದೀರ್ಘವಾದ ಉಸಿರಾಟ ಮಾಡುವುದು. ಉಚ್ವಾಸ, ನಿಚ್ವಾಸ ಮಾಡುವುದು. ಸ್ನೇಹಿತರು ಮತ್ತು ಕುಟುಂಬದೊಂದಿಗೆ ಸಮಯ ಕಳೆಯುವುದು, ಶಾಂತವಾಗಿ ವರ್ತಿಸುವುದು, ಹಿತಮಿತವಾಗಿ ಮಾತಾಡುವುದು, ನಗುವುದರಿಂದ ನಾವು ಆರಾಮವಾಗಿ ಒತ್ತಡದಿಂದ ಹೊರಬರಲು ಸಾಧ್ಯ.
ಒತ್ತಡದಿಂದ ಹೊರಬಂದ ಮೇಲೆ ನಿಮಗೆ ಸಮಯ ಪಾಲನೆ ಮಾಡಲು ದೊಡ್ಡ ಹೊರೆ ಏನಿಲ್ಲ. ನಿರರ್ಗಳವಾಗಿ ನೀವು ಸಮಯ ಪಾಲನೆಯಿಂದ ಮಾಡಬಹುದು. ಈ ಸಮಯ ಪಾಲನೆಯಿಂದ ನಿಮ್ಮ ವೈಯಕ್ತಿಕ ಬದುಕಿಗೆ ಏನು ಲಾಭ ಸಿಗಬಹುದು..?
ಸಮಯ ಪಾಲನೆಯಿಂದಾಗುವ ಉಪಯೋಗಗಳೇನು..?
*ಸಮಯ ಪಾಲನೆ ಮಾಡಿದರೆ ನಿಮ್ಮ ನಿತ್ಯ ಕೆಲಸದ ಜೊತೆಗೆ ಮತ್ತಷ್ಟು ಕೆಲಸಗಳನ್ನು ನಿರಾಯಾಸವಾಗಿ ಮಾಡಬಹುದು.*ಸಮತೋಲನ ಜೀವನ ನಡಡೆಸಲು ಸಾಧ್ಯ.
*ನಿಮ್ಮ ಜೀವನದಲ್ಲಿ ಮಾನಸಿಕ ಒತ್ತಡಗಳು ನಿವಾರಣೆಯಾಗುತ್ತದೆ.
*ನೀವು ಮತ್ತಷ್ಟು ಶಕ್ತಿವಂತರಾಗುತ್ತೀರಿ.
*ಶಿಸ್ತು ಕ್ರಮ ಪಾಲನೆ ನಿಮ್ಮ ಜೀವನದಲ್ಲಿ ಮತ್ತಷ್ಟು ಅಧಿಕವಾಗುತ್ತದೆ.
*ನೀವು ನಿಮ್ಮ ಕೆಲಸಗಳ ಮೇಲೆ ಮತ್ತಷ್ಟು ಕೇಂದ್ರೀಕರಿಸುತ್ತೀರಿ.
*ನಿಮ್ಮ ಜೀವನದಲ್ಲಿ ಅತ್ಯಂತ ಪ್ರಧಾನವಾದ ಆನಂದಭೂತಿಯನ್ನು ನೀವು ಅನುಭವಿಸುತ್ತೀರಿ.
*ಸಮಯ ಪಾಲನೆಯಿಂದ ನಿಮ್ಮಲ್ಲಿ ಮತ್ತಷ್ಟು ಆತ್ಮ ವಿಶ್ವಾಸ ಹೆಚ್ಚುತ್ತದೆ. ಇಷ್ಟೆಲ್ಲಾ ಲಾಭಗಳ ಜೊತೆಗೆ ಜೀವನದಲ್ಲಿ ನೆಮ್ಮದಿಯ ನಾಳೆಗಳನ್ನು ಕಾಣಲು ಅನುಕೂಲವಾಗುತ್ತದೆ ಎನ್ನುವುದರಲ್ಲಿ ಸಂಶಯ ಇಲ್ಲ. –ಶ್ರೀರಾಜ್ ವಕ್ವಾಡಿ