Advertisement
ಟ್ರಾಯ್ ಹೊಸದರ ನಿಗದಿ ನಿರ್ಧಾರವನ್ನು ಹಿಂಪಡೆಯಬೇಕು, ಇಲ್ಲವೇ ಹೊಸದರ ನಿಗದಿ ಕ್ರಮದಿಂದ ಗ್ರಾಹಕರಿಗೆ ಯಾವ ರೀತಿಯ ಅನುಕೂಲ ಆಗಲಿದೆ ಎಂಬುದನ್ನು ಬಹಿರಂಗಗೊ ಳಿಸಬೇಕು. ಈ ಕುರಿತು ಕೇಂದ್ರ ಹಾಗೂ ರಾಜ್ಯಸರ್ಕಾರಗಳು ಸೂಕ್ತ ಕ್ರಮವಹಿಸಬೇಕು ಎಂಬ ಬೇಡಿಕೆಗಳನ್ನು ಇಟ್ಟುಕೊಂಡು ಶುಕ್ರವಾರ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸಲಾಗುತ್ತದೆ ಎಂದು ರಾಜ್ಯ ಕೇಬಲ್ ಟಿವಿ ಆಪರೇಟರರ್ಸ್ ಅಸೋಸಿಯೇಷನ್ ಅಧ್ಯಕ್ಷ ವಿ.ಎಸ್ ಫ್ಯಾಟ್ರಿಕ್ ರಾಜು ತಿಳಿಸಿದ್ದಾರೆ.
ಗ್ರಾಮೀಣ ಭಾಗದ ಗ್ರಾಹಕರಿಗೂ ಇದರಿಂದ ಹೆಚ್ಚಿನ ಸಂಕಷ್ಟ. ಬಹುತೇಕ ಅನಕ್ಷರಸ್ಥರಾಗಿರುವ ಗ್ರಾಹಕರಿಗೆ ಹೊಸ ದರವ್ಯವಸ್ಥೆ, ತಮಗಿಷ್ಟ ಬಂದ ಚಾನೆಲ್ ಬೇಕು ಎಂದರೆ ಮುಂಗಡವಾಗಿಯೇ ಹಣ ನೀಡಿ ಖರೀದಿಸಬೇಕು ಎಂಬುದು ಹೇಗೆ ಅರ್ಥವಾಗಲಿದೆ ಎನ್ನುವ ಅಂಶವನ್ನೂ ಮುಂದಿಡುತ್ತಾರೆ. ಟ್ರಾಯ್ ದೇಶದ ಕೇಬಲ್ ಆಪರೇಟರ್ಸ್ ಅಥವಾ ತಜ್ಞರ ಜತೆ ಚರ್ಚಿಸಿ ಈ ನಿರ್ಧಾರ ಕೈಗೊಂಡಿಲ್ಲ. ಕಾರ್ಫೋರೇಟ ಸಂಸ್ಥೆಗಳಿಗೆ ಅನುಕೂಲ ಮಾಡಲು ಈ ನಿರ್ಧಾರ ತೆಗೆದುಕೊಂಡಿದೆ. ಇದರ ಪರಿಣಾಮ ರಾಜ್ಯದ 17 ಸಾವಿರ ಕೇಬಲ್ ಆಪರೇಟರ್ಸ್ ಹಾಗೂ ಅವರ ಜತೆ ಕೆಲಸ ಮಾಡುವ ಹುಡುಗರ ಉದ್ಯೋಗದ ಮೇಲೆ ನೇರ ಪರಿಣಾಮ ಬೀಳಲಿದೆ ಎಂದು ಫ್ಯಾಟ್ರಿಕ್ ರಾಜು ಆರೋಪಿಸಿದರು.
Related Articles
ಗ್ರಾಹಕರ ಆಯ್ಕೆಯ ಚಾನೆಲ್‌ಗಳನ್ನು ಮಾತ್ರವೇ ನೀಡುವ ಉದ್ದೇಶ ಅನಗತ್ಯವಾಗಿ ಚಾನೆಲ್‌ಗಳು ಹೇರುವ ಪದ್ಧತಿಗೆ
ಕಡಿವಾಣ ಹಾಕುವ ಸಲುವಾಗಿ ಹೊಸ ದರ ನಿಗದಿಪಡಿಸಲಾಗಿದೆ, ಇದರಿಂದ ಗ್ರಾಹಕನ ಆಯ್ಕೆ ಸ್ವಾತಂತ್ರ್ಯಕ್ಕೆ ಹೆಚ್ಚು ಆದ್ಯತೆ ದೊರೆಯಲಿದೆ. ಗ್ರಾಹಕರ ಹಿತಾಸಕ್ತಿಯ ಉದ್ದೇಶವೇ ಇದರ ಮೂಲ ಉದ್ದೇಶವಾಗಿದೆ. ಹೊಸ ದರ ನಿಗದಿ ಕುರಿತ ಆರೋಪಗಳಲ್ಲಿ ಯಾವುದೇ ಹುರುಳಿಲ್ಲ ಎಂದು ಟ್ರಾಯ್ ಹೇಳುತ್ತಿದೆ.
Advertisement
ಡಿ29ರಿಂದ ಗ್ರಾಹಕರಿಗೆ ಶಾಕ್!ಹೊಸದರ ನಿಗದಿ ಹಿನ್ನೆಲೆಯಲ್ಲಿ ಡಿ29ರಿಂದ ಉಚಿತವಾಗಿ ನೀಡಲಾಗುತ್ತಿರುವ 26 ಚಾನೆಲ್‌ಗಳನ್ನು ಹೊರತು ಪಡಿಸಿ ಬೇರೆ ಯಾವುದೇ ಚಾನೆಲ್‌ಗಳು ಬರುವುದಿಲ್ಲ. ಈ ಸಂಬಂಧ ಟ್ರಾಯ್, ಗ್ರಾಹಕರ ಆಯ್ಕೆ ಚಾನೆಲ್‌ಗಳ ದರವನ್ನು ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದ್ದು. ಗ್ರಾಹಕರು ಡಿ.29ಕ್ಕೂ ಮುನ್ನವೇ ಡಿಜಿಟಲ್ ಹಾಗೂ ಕೇಬಲ್ ಆಪರೇಟರ್ಸ್‌ಗಳ ಮೊದಲೇ ಹಣ ಪಾವತಿಸಿ ರಿಚಾರ್ಜ್ ಮಾಡಿಸಿಕೊಳ್ಳಬೇಕಿದೆ.